ವಿಜಯಪುರ: ವಿಜಯಪುರ ನಗರದ ಹರಣಶಿಕಾರಿ ಕಾಲನಿಯಲ್ಲಿ ಗಾಂಜಾ Vijayapura Ganja Case ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಆರೋಪಿಗಳ ವಿರುದ್ಧ ಗೋಲಗುಂಬಜ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಏಪ್ರಿಲ್ 30ರಂದು ರಾತ್ರಿ ಸುಮಾರು 8.45 ಗಂಟೆ ಸುಮಾರಿಗೆ ಆರೋಪಿತ ಮನೋಹರ ಚವ್ಹಾಣ ಹಾಗೂ ಇತರರು ತಮ್ಮ ಲಾಭಕ್ಕಾಗಿ ಎಲ್ಲಿಂದಲೋ ಗಾಂಜಾ ತಂದು ವಿಜಯಪುರ ನಗರದ ಹರಣಶಿಕಾರಿ ಕಾಲನಿಯ ಮನೋಹರ ಚವ್ಹಾಣ ಅವರ ಮನೆಯ ಸಮೀಪದ ಖಾಲಿ ಜಾಗದಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
Vijayapura Ganja Case ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಡೆದುಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 7.596 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ₹3,79,800 ಎಂದು ತಿಳಿದುಬಂದಿದೆ.ಜಪ್ತಿ ಮಾಡಲಾದ ಗಾಂಜಾದಲ್ಲಿ ಎಲೆ, ಹೂವು, ಬೀಜ ಹಾಗೂ ಕಡ್ಡಿಗಳಿಂದ ಕೂಡಿದ ವಿವಿಧ ಪ್ಯಾಕೆಟ್ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸ್ ಉಪಾಧೀಕ್ಷಕ Nagaraj G ಅವರು ನೀಡಿದ ದೂರಿನ ಮೇರೆಗೆ ಏಪ್ರಿಲ್ 30ರಂದು Gol Gumbaz Police Station ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.






