ವಿಜಯಪುರ: ದೇಶದ ಆರ್ಥಿಕ ಪ್ರಗತಿಗೆ ಕಾರ್ಮಿಕ karmikaru ಬಂಧುಗಳೇ ನೇರ ಕಾರಣರಾಗಿದ್ದಾರೆ. ಎಲ್ಲ ಜನರು ಸತ್ಯಶುದ್ಧ ಕಾಯಕವನ್ನು ಮಾಡುವರೇ ಅಲ್ಲಿ ವ್ಯಷ್ಠಿ ಮತ್ತು ಸಮಷ್ಠಿಗಳು ಅಭಿವೃದ್ಧಿ ಹೊಂದುತ್ತವೆ. ಮಾಲಿಕರು ಮತ್ತು ದುಡಿದ ವರ್ಗದ ಮಧ್ಯೆ ಸೌಹಾರ್ದಯುತ ವಾತಾವರಣವಿದ್ದಾಗ ಮಾತ್ರ ಪ್ರಗತಿಸಾಧ್ಯವೆಂದುಕೆ.ಆರ್.ಅರಕೇರಿಮಠ ಹೇಳಿದರು.
ಅವರು ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾಯಕದಿನ ಮತ್ತು ದತ್ತಿ ಸಮಾರಂಭ ಕುರಿತು ಮಾತನಾಡಿದರು. ಲಿಂ. ಗುರಪ್ಪ ಬೊಳಿಶೆಟ್ಟಿ ಬಂ. ಚನ್ನಪ್ಪ ಬಿಜ್ಜರಗಿ, ಲಿಂ. ಬಸಪ್ಪ ಸಾಲಕ್ಕಿ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಶಕುಂತಲಾ ಮೋಸಲಗಿ ಗಂಗಾಧರ ಸಾಲಕ್ಕಿ ಮತ್ತು ಮ.ಗು. ಯಾದವಾಡ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ವಿ.ಸಿ. ನಾಗಠಾಣರು ಯುರೋಪ ಹಾಗೂ ಅಮೇರಿಕಾಗಳಲ್ಲಿ ನಡೆದ ಕಾರ್ಮಿಕರ karmikaru ಕ್ರಾಂತಿಯ ಮೊದಲು ನಾಲ್ಕಕು ನೂರು ವರ್ಷಗಳ ಮುಂಚೆ ಶರಣರು ಜಗತ್ತಿಗೆ ಕ್ರಾಂತಿರೂಪದ ಕಾಯಕ ದಾಸೋಹ ತತ್ವಗಳನ್ನು ನೀಡಿ ಸಮೃದ್ಧಿ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರೆಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತು 76 ವರ್ಷದ ವಯೋವೃದ್ಧ ಮತ್ತು 40 ವರ್ಷಗಳಿಂದ ಸಮಗಾರ ಕಾಯಕ ಮಾಡುತ್ತಿರುವ ಶರಣ ಕಲ್ಲಪ್ಪ ಕಂಟೆಪ್ಪ ಶಹಪೂರ ಅವರಿಗೆ ಕಾಯಕಶೀಲ ಪ್ರಶಸ್ತಿ ನೀಡಿ ಗೌರವಿಸಿತು. ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸ್ವಾಗತಕೋರಿ ಪರಿಷತ್ತಿನ ಸಾಧನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ತೊಂಡಿಕಟ್ಟಿ ವಂದಿಸಿದರು. ಬಿ.ಎಂ. ಪಾಟೀಲ, ಸಂಗೀತಾ ಮಠಪತಿ ಎಸ್.ವಾಯ್. ಗದಗ, ಬಿ.ಟಿ. ಈಶ್ವರಗೊಂಡ ಸುಬಾಸ ಬೆಟಗೇರಿ ಸೋಮನಗೌಡ ಪಾಟೀಲ, ಎಲ್.ಪಿ. ಬಿರಾದಾರ ಅಮ್ಮಜಿಗೋಳ ಬಿ.ಸಿ. ಸಾರವಾಡ, ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.






