Vijayapura News | ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ವಿಶ್ರಾಂತ ಪ್ರಾಚಾರ್ಯ ಪ್ರೋ. ಎಸ್ ಎಮ್ ಶೇಖ

Kanakadasa Jayanti 2024 image

ವಿಜಯಪುರ: Kanakadasa Jayanti 2024 ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಿದರೆ ಮೋಕ್ಷ ಪಡೆಯಲು ಸಾಧ್ಯ. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ. ಎಂಬ ಕನಕದಾಸರ ಕೀರ್ತನೆ ವಿಶ್ವಕ್ಕೆಲ್ಲ ಆದರ್ಶ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೋ. ಎಸ್ ಎಮ್ ಶೇಖ ಅಭಿಪ್ರಾಯ ವ್ಯಕ್ತಪಡಿಸಿದರು.

Kanakadasa Jayanti 2024 ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ, ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನಕರು ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾಜ ನಿರ್ಮಾಣವಾಗಬೇಕು. ವ್ಯಾಸರಾಯರ ಪರಮ ಶಿಷ್ಯ ಕನಕದಾಸರು ಬಾಲ್ಯದಿಂದಲೇ ಪ್ರಜ್ಞಾವಂತನಾಗಿ ಉತ್ತರಿಸುತ್ತಿದ್ದನು. ಕನಕರ ಸಂದೇಶಗಳು ಜನರ ಜೀವನದ ಮೇಲೆ ಅಪಾರ ಪ್ರಭಾವ ಬೀರಿವೆ ಎಂದರು.

ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯೋತ್ಸವ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ 

ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕುರಬರ ಸಂಘದ ಅಧ್ಯಕ್ಷ ರಾಜು ಕಂಬಾಗಿ ಮಾತನಾಡಿ ಭಕ್ತಿ ಬೇಕು ಮುಕ್ತಿ ಪಡೆಯುವವರಿಗೆ. ಅವರ ನಾನು ನೀನು ಎನ್ನದಿರು ಮಾನವ ಎಂಬ ಸಂದೇಶ ಸರ್ವಕಾಲಿಕ. ಜಾತಿ ದೇವ ನಿರ್ಮಿತವಲ್ಲ. ಮಾನವ ನಿರ್ಮಿತ ಎಂದು ಕನಕದಾಸರ ನುಡಿ ಮುತ್ತುಗಳು ಶ್ರೇಷ್ಠವಾಗಿವೆ ಎಂದರು.

ಕನಕದಾಸರ ಸಾಹಿತ್ಯ ಕುರಿತು ಮಡಿಕೇಶ್ವರದ ಸಾಹಿತಿ ಹಾಗು ಶಿಕ್ಷಕಿ ಶಾಂತಲಾ ಪಾಟೀಲ ಮಾತನಾಡಿ ಚಿನ್ನವನ್ನು ದಾನಮಾಡಿದ ಕನಕದಾಸರು ಕವಿಯಾಗಿ, ಸಾಹಿತಿಯಾಗಿ, ತತ್ತ್ವಜ್ಞಾನಿಯಾಗಿ ಮತ್ತು ಕೀರ್ತನಕಾರನಾಗಿ, ಮಹಾತ್ಮನಾಗಿ, ವಿಶ್ವಮಾನವನಾಗಿ ಹಾಗೂ ಭಕ್ತಶ್ರೇಷ್ಠನಾಗಿ ಕನಕದಾಸರು ಪ್ರಖ್ಯಾತ ಪಡೆದರು ಎಂದರು.

ಇದನ್ನೂ ಓದಿ: Vijayapura News | ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸರು ದೊಡ್ಡ ಹೆಗ್ಗುರುತು

ಕನಕದಾಸರ ಕೀರ್ತನೆಗಳ ಕುರಿತು ಉಪನ್ಯಾಸ ನೀಡಿದ ಶಿಕ್ಷಕರಾದ ಮಹೆತಾಬ ಕಾಗವಾಡ ಕುಲ ಕುಲ ಕುಲ ವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ಮತ್ತು ತಲ್ಲಣಿಸದಿರು ಕಂಡ್ಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮನುಷ್ಯನ ಅಂತರಾತ್ಮ ಜಾಗೃತಿಗಳಿಸುವದೇ ಕೀರ್ತನೆಯ ಉದ್ದೇಶವಾಗಿತ್ತು. ಮನುಜರಲ್ಲಿನ ಅಸಮಾನತೆ ಹೋಗಲಾಡಿಸಲು ಪರಿಶ್ರಮಪಟ್ಟರು ಎಂದರು.

ಸುರೇಖಾ ರಾಠೋಡ, ಅರ್ಜುನ ಶಿರೂರ, ಎಂ ಜಿ ಮೋಟಗಿ, ರಾಮಗೊಂಡ ಪಡನಾಡ ವೇದಿಕೆಯ ಮೇಲಿದ್ದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಜತ್ತಿ ಸ್ವಾಗತಿಸಿದರು. ಸಾಹಿತಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಹಳಕಟ್ಟಿ, ಪಕುರುದ್ದೀನ ಹೀರೆಕೊಪ್ಪ, ರಾಜೇಸಾಬ ಶಿವನಗುತ್ತಿ, ರವಿ ಕಿತ್ತೂರ, ರೇಣುಕಾ ಬಿಸನಾಳ, ಶೋಭಾ ಹರಿಜನ, ಗಂಗಮ್ಮ ರೆಡ್ಡಿ, ಪರವೀನ ಶೇಖ, ಶಿವನಗೌಡ ಬಿರಾದಾರ, ಶಾಂತಕುಮಾರ ಗುರೂಜಿ ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು