ವಿಜಯಪುರ: ಜಿಲ್ಲಾ ನ್ಯಾಯವಾದಿಗಳು ಸಂಘದ ಪದಾಧಿಕಾರಿಗಳ 2 ವರ್ಷಗಳ ಅವಧಿಯ ಚುನಾವಣೆ ಜಿಲ್ಲಾ ನ್ಯಾಯಾಲಯದ ವಕೀಲರ ಸಭಾಭವನದಲಿ ಜರುಗಿತು. ನೂತನ ಅಧ್ಯಕ್ಷರಾಗಿ ಡಿ.ಜಿ.ಬಿರಾದಾರ ವಕೀಲರು, ಉಪಾಧ್ಯಕ್ಷರಾಗಿ ಸುನೀಲ ಬಿ. ಬಿರಾದಾರ ವಕೀಲರು, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ ಎಸ್.ಚೂರಿ ವಕೀಲರು, ಜಂಟಿ ಕಾರ್ಯದರ್ಶಿಯಾಗಿ ಉಸ್ಮಾನ ಎಮ್. ಆಲಗೂರ ವಕೀಲರು, ಲೈಬ್ರರಿ ಕಾರ್ಯದರ್ಶಿ ಯಲ್ಲಪ್ಪ ಬಿ.ಬಡಿಗೇರ ವಕೀಲರು, ಖಜಾಂಚಿಯಾಗಿ ಕಾಖಂಡಕಿ ಎಮ್.ಎ. ವಕೀಲರು ಹಾಗೂ ಮ್ಯಾನೇಜಿಂಗ್ ಕಮೀಟಿ ಸದಸ್ಯರಾಗಿ ಬಸವರಾಜ ಡಿ.ಬಿರಾದಾರ ವಕೀಲರು, ವಿನಾಯಕ ಎಚ್.ಗಾಳಪ್ಪಗೋಳ ವಕೀಲರು, ಮಹಮ್ಮದಗೌಸ ಹವಾಲ್ದಾರ ವಕೀಲರು, ಪರಶುರಾಮ ಕೆ. ಹುವಣಗೋಳ ವಕೀಲರು ಮತ್ತು ಮೊಹಮ್ಮದಹುಸೇನ ಎಸ್. ಇನಾಮದಾರ ವಕೀಲರು ಇವರು ಆಯ್ಕೆಯಾಗಿರುತ್ತಾರೆ. ಚುನಾವಣಾ ಅಧಿಕಾರಿಗಳಾದ ಆರ್.ಎಸ್.ನಂದಿ ವಕೀಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದನ್ನೂ ಓದಿ: Vijayapura News | ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು : ಡಾ. ಸುಧಾಮೂರ್ತಿ






