Vijayapura News : ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ಸಿಬ್ಬಂದಿಗಳ ಕುಂದುಕೊರತೆ ಬಗ್ಗೆ ರಾಜ್ಯಮಟ್ಟದ ಕಾರ್ಯಾಗಾರ

Hostel and Residential School image
ವಿಜಯಪುರ: Hostel and Residential School ಜಿಲ್ಲಾ ಪಂಚಾಯತ, ವಿಜಯಪುರ, ಸಮಾಜ ಕಲ್ಯಾಣ ಇಲಾಖೆ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಅಡುಗೆ ಸಿಬ್ಬಂದಿಗಳಿಗೆ ಪುನಶ್ಚೇತನ ಕಾರ್ಯಾಗಾರವು ವಿಜಯಪುರ ನಗರ ಬುದ್ದವಿಹಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Vijayapura News : ಸನಸೈನ್ ಪ್ರೊಡೆಕ್ಷನ್ & ನೃತ್ಯ ತಂಡದಿಂದ ದಾಂಡಿಯಾ – ಗರಬಾ ಕಾರ್ಯಕ್ರಮ ಆಯೋಜನೆ
ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಈರಪ್ಪ ಆಶಾಪೂರ ಇವರ ನೆರವೇರಿಸಿ ಮಾತನಾಡುತ್ತ, ಇಲಾಖೆಯಲ್ಲಿ ಸುಮಾರು ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಅಡುಗೆ ಸಿಬ್ಬಂದಿಗಳು ಸರಿಯಾಗಿ ಅಡುವೆ ಮಾಡಬೇಕು. ಸ್ವಚ್ಚತೆಯನ್ನು ಕಾಪಾಡಬೇಕು. ಏಜೆನ್ಸಿಯವರು  ಸಿಬ್ಬಂದಿಗಳಿಗೆ ಕಾಲಕ್ರಮೇಣವಾಗಿ ವೇತನ, ಪಿ.ಎಫ್. ಇ.ಎಸ್.ಐ. ನೀಡಬೇಕು. ಇವರ ಮೂಲಭೂತ ಸೌಲಭ್ಯಗಳ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ ಹಾಗೂ ಏಜೆನ್ಸಿಯನ್ನು ತೆಗೆದು ಸೊಸೈಟಯ ಮುಖಾಂತರ ವೇತನ ನೀಡುವಂತೆ ಮಾಡಿರುವ ಸರಕಾರದ ಆದೇಶವು ಸ್ವಾಗತಾರ್ಹ ಎಂದು ತಿಳಿಸಿದರು. Hostel and Residential School
ಇದನ್ನೂ ಓದಿ: Vijayapura News : ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಖಂಡಿಸಿ ಹೋರಾಟ
ರಾಜ್ಯಾದ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಹಾಸ್ಟೇಲ್ & ವಸತಿ ಶಾಲಾ ನೌಕರರ ಬಗ್ಗೆ ಸಾಕಷ್ಟು ಬಾರಿ ಹೋರಾಟ ಮಾಡಿ ಸರಕಾರದ ಗಮನ ಸೆಳೆಯಲಾಗಿದೆ. ಅದೇ ರಂತೆ ನಮ್ಮ ಹೋರಾಟ ಎಂದಿಗು ನಿಲ್ಲುವದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹಮ್ಮಿಕೊಳ್ಳಲಾದ ಧರಣಿ ಸ್ಥಳಕ್ಕೆ ಬಂದು 31 ಸಾವಿರ ಕನಿಷ್ಟ ವೇತನ ನೀಡುವುದಾಗಿ ಭರವಸೆ ಕೊಟ್ಟಿದ್ದು, ಹಾಗೂ ಏಜೆನ್ಸಿಯನ್ನು ತೆಗೆದುಹಾಕಿ ಸೊಸೈಟಿ ಮುಖಾಂತರ ವೇತನ ನೀಡುವುದಾಗಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಇದಕ್ಕೆ ನಮ್ಮ ಸಂಘಟನೆಯ ವತಿಯಿಂದ ಸ್ವಾಗತವನ್ನು ಬಯಸುತ್ತೇನೆ. ಸೊಸೈಟಿ ಮುಖಾಂತರ ಕನಿಷ್ಠ ವೇತನ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದರು. ಈ ಕುರಿತು ಅಕ್ಟೋಬರ್ 14 ರಂದು ಬೆಂಗಳೂರಿನ ಪ್ರೀಡಂ ಪಾರ್ಕದಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.
ಇದನ್ನೂ ಒದಿ: Vijayapura News : ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಖಂಡಿಸಿ ಹೋರಾಟ
ಈ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಎಮ್. ಚಲವಾದಿ, ಬಿ.ಎಸ್. ಅಂಗಡಿ, ಎಸ್.ಎ. ಜಮಾದಾರ, ಅಣ್ಣಾರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಇಸಾಮೋದ್ದೀನ ಬೀದರ, ಕಾಶೀನಾಥ ಬಂಡಿ, ವಿರೇಶ ಕಲಬೀಳಗಿ, ಜಿಲ್ಲಾಧ್ಯಕ್ಷರಾದ ಹುಲಗಪ್ಪ ಚಲವಾದಿ, ಲಕ್ಷ್ಮಣ ಮಸಳಿ, ರಾಮಚಂದ್ರ ಕೋಳಿ, ಮೀನಾಕ್ಷಿ ತಳವಾರ, ಯಮನಪ್ಪ ಬಜಂತ್ರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ವಿಜಯನಗರ, ಬೀದರ, ಕಲಬುರಗಿ, ಧಾರವಾಡ ಜಿಲ್ಲೆಯ ಪದಾಧಿಕಾರಿಗಳು, ಹಾಗೂ ಹಾಸ್ಟೇಲ್, ಮತ್ತು ವಸತಿ ಶಾಲಾ ನೌಕರರು ಉಪಸ್ಥಿತರಿದ್ದರು.
ದೊಡಮನಿ ನಿರೂಪಿಸಿದರು. ಹುಲಗಪ್ಪ ಚಲವಾದಿ ಸ್ವಾಗತಿಸಿದರು. ಲಕ್ಷ್ಮಣ ಮಸಳಿ ವಂದಿಸಿದರು.


Share the Post:

ಇತ್ತೀಚಿನ ಸುದ್ದಿಗಳು