ವಿಜಯಪುರ: ಹನ್ನೆರಡನೇ ಶತಮಾನದ ಶಿವಶರಣರು ಸಮಾಜದ ಸುಧಾರಕರಾಗಿ ಸಮಾಜವನ್ನು ತಿದ್ದುವ ಆದರ್ಶ ಕಾರ್ಯ ಮಾಡುವ ಮೂಲಕ ಅಂದಿನ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದರು ಎಂದು ಸಬಲಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಮಲ್ಲಮ್ಮ ಯಾಳವಾರ ಸಸಿಗೆ ನೀರುಣಿಸುವ ಮೂಲಕ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಸದ್ಗುರು ಭೀಮಾಶಂಕರ ಮಹಾರಾಜರು ವಿಶ್ವರಾಧ್ಯ ಮಠದ ದತ್ತಿ ದತ್ತಿದಾನಿಗಳು ಪರಮಪೂಜ್ಯ ಶ್ರೀ ಮಹಾಲಿಂಗೇಶ್ವರ ಅಪ್ಪನವರು ವಿಶ್ವರಾಧ್ಯಮಠ ಬೋರಗಿ ಪುರದಾಳ. ವಿಷಯ ಅನುಭವ ಸಾಹಿತ್ಯದ ಕುರಿತು ಹಾಗೂ ದಿ. ಗೌರವ್ವ ಗುರುಬಸಪ್ಪ ಮೋಟಗಿ ಹಾಗೂ ದಿ. ಗುರುಬಸಪ್ಪ ಭೋಜಪ್ಪ ಮೋಟಗಿ ದತ್ತಿ. ದತ್ತಿದಾನಿಗಳು ಸಿದ್ರಾಮಪ್ಪ ಗುರುಬಸಪ್ಪ ಮೋಟಗಿ, ವಿಷಯ ಶರಣ ಸಂಸ್ಕøತಿಯ ಕುರಿತು ಏರ್ಪಡಿಸಿದ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮ ಸಮಾಜದ ನಿರ್ಮಾಣವೇ ಶರಣರ ಮೂಲ ಆಶಯವಾಗಿತ್ತು ಎಂದು ಡಾ.ಮಲ್ಲಮ್ಮ ಯಾಳವಾರ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ರೈತ ಸಂಘ ಮನವಿ: ಲಾಲ್ ಬಹದ್ದೂರಶಾಸ್ತ್ರೀ ಹಾಗೂ ಬಸವ ಸಾಗರ ಜಲಾಶಯಗಳ ನೀರಿನ ಮರು ಹಂಚಿಕೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ ಸುರೇಶ ಹರನಾಳ ಅವರು ಮಾತನಾಡುತ್ತಾ, ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಮೂಲಕ ದತ್ತಿ ದಾನಿಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಮತ್ತು ಅನುಭವ ಜನ್ಯ, ಚಿಂತನಾತ್ಮಕ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯಾಸಕ್ತರ ಮನಸೂರೆಗೊಳ್ಳುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.
“ಅನುಭಾವ ಸಾಹಿತ್ಯ”ದ ಕುರಿತು ಉಪನ್ಯಾಸ ನೀಡಿದ ಕವಿಯತ್ರಿ ಅಂಬಿಕಾ ಕರಕಪ್ಪಗೋಳ ಮಾತನಾಡಿ, ಅರಿವಿನಿಂದ ಮತ್ತು ಆಚರಣೆಗಳಿಂದ ಶರಣರು ತಮ್ಮ ಅನುಭಾವ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಅರಿತರೆ ಶರಣ ಮರೆತರೆ ಮಾನವ ಎಂಬುದನ್ನು ತಿಳಿಸಿಕೊಟ್ಟು ಹೋಗಿದ್ದಾರೆ ಇಂದು ನಾವೆಲ್ಲರೂ ಅದನ್ನು ಅರ್ಥೈಸಿಕೊಂಡು ಹೋಗುವುದು ಅನಿವಾರ್ಯ ಎಂದರು.
“ಶರಣ ಸಂಸ್ಕೃತಿ”ಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಾಂತಾ ಪಾಟೀಲರವರು ಮಾತನಾಡುತ್ತಾ, ಸಾಮಾಜಿಕ ಸಮಾನತೆ, ಮತ್ಯ9 ಲೋಕದ ಹಿರಿಮೆ, ಆತ್ಮ ವಿಮರ್ಶೆ, ನಡೆ-ನುಡಿಗಳಲ್ಲಿ ಒಂದಾಗುವ ಮನೋಭಾವ, ವೈಚಾರಿಕತೆ, ಸರ್ವರಿಗೂ ಸಮಬಾಳು ಸವ9ರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಿದ್ರಾಮಪ್ಪ ಮೋಟಗಿ, ಬಸವರಾಜ ನವಲಿ, ಅಪ್ಪಸಾಹೇಬ ಮಡಗೊಂಡ, ಲಾಡ್ಲೇಮಶಾಕ್ ನಾಯ್ಕೋಡಿ, ರವಿ ಬೈಚಬಾಳ ಉಪಸ್ಥಿತರಿದ್ದು ಮಾತನಾಡಿದರು.
ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಜಯಂತಿ: ಜಿಲ್ಲಾ ಮಟ್ಟದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಫಲಿತಾಂಶ ಪ್ರಕಟ
ಪ್ರಾರ್ಥನೆಯನ್ನು ಶಶಿಕಲಾ ನಾಯ್ಕೋಡಿಯವರು ನೆರವೇರಿಸಿದರು. ಸ್ವಾಗತ ಮತ್ತು ಶರಣು ಸಮಪ9ಣೆಯನ್ನು ಪರವೀನ ಶೇಖರವರು ನಡೆಸಿಕೊಟ್ಟರು. ಸಕೀನಾ ನದಾಫ ಕಾರ್ಯಕ್ರಮವನ್ನು ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸನ್ಮಾನಿತರನ್ನು ಪರಿಚಯಿಸುವ ಮೂಲಕ ಪರಿಷತ್ತಿನ ಪರವಾಗಿ ಡಾ. ಮಾಧವ ಗುಡಿಯವರು ಗೌರವ ಪುರಸ್ಕಾರ ಸಮಾರಂಭ ನೆರವೇರಿಸಿಕೊಟ್ಟರು. ಶಿಕ್ಷಕರಾದ ಮೆಹತಾಬ ಕಾಗವಾಡ ತತ್ವಪದವನ್ನು ಹಾಡುವ ಮೂಲಕ ರಂಜಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಸಲ್ಲಿಸಿದ ಅಶೋಕ ಎಂ ಗಾಯಕವಾಡ, ಪರಮಾನಂದ ಚಾಂದಕವಟೆ, ನೀಲಾಂಬಿಕಾ ಆಲೂರ, ಸಂಗನಶರಣಚೆನ್ನಬಸವ ಬುರ್ಲಿ, ಡಾ. ಅನಿಲ ಕುಮಾರ ಇರಾಜ, ಜಗದೀಶ ಸಾಲಳ್ಳಿ, ಅಹಮ್ಮದ ವಾಲಿಕಾರ, ಡಾ. ಮಹಿಬೂಬ ಮಾಲಬಾವಡಿ ಮುಂತಾದ ಗಣ್ಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ ಸಂಗಮೇಶ ಮೇತ್ರಿ. ಎಸ್ ಎಮ್ ಕಣಬೂರ. ಬಸವರಾಜ ಅಜೂರ. ಅಶೋಕ ಕೋಳಾರಿ. ರಾಜೇಸಾಬ ಶಿವನಗುತ್ತಿ.ಶಿಲ್ಪಾ ಗಾಣಿಗೇರ. ಅಜೀಜ ಡವಳಗಿ. ಕಮಲಾ ಮುರಾಳ. ಅಹಮ್ಮದ ವಾಲಿಕಾರ. ಅರ್ಜುನ ಶಿರೂರ. ಜಿ ಎಸ್ ಬಳ್ಳೂರ. ಟಿ ಆರ್ ಹಾವಿನಾಳ. ಕೆ ಎಸ್ ಹಣಮಾಣಿ ಜೆ ಎಸ್ ಮೋಟಗಿ. ಸುರೇಶ ಕೋರಳ್ಳಿ. ವಿ ಎಸ್ ಖಾಡೆ. ಬಸನಗೌಡ ಬಿರಾದಾರ .
ಸುಖದೇವಿ ಅಲಬಾಳಮಠ. ಶಾಂತಪ್ಪ ರಾಣಾಗೋಳ. ಅಲಿಸಾಬ ಖಡಕೆ. ಶ್ರೀಕಾಂತ ನಾಡಗೌಡ. ಜ್ಯೋತಿ ದೇಸಾಯಿ. ಭಾಗರಥಿ ಸಿಂಧೆ. ದೇವಕಾಂತ ಬಿಜ್ಜರಗಿ. ಭೀಮಣ್ಣ ನಾಯ್ಕರ. ಎಂ ಎಂ ವಾಲೀಕಾರ ಬಸವರಾಜ ಕಂಕಣವಾಡಿ. ಡಾ: ಕರಿಯಪ್ಪ. ಎಸ್ ಎಮ್ ಡಾಂಗೆ. ಸ್ನೇಹಾ ಸಾರಂಗಮಠ ಉಪಸ್ಥಿತರಿದ್ದರು.






