ಬಿಜೆಪಿಯಿಂದ ವಿಶ್ವಕರ್ಮ ಜಯಂತಿ ಆಚರಣೆ ಸೃಷ್ಟಿ ನಿರ್ಮಾದ ಕತೃ, ಸಕಲಕರ್ಮಗಳ ಒಡೆಯನೇ ವಿಶ್ವಕರ್ಮ: ಡಾ.ವೀರಣ್ಣ ಚರಂತಿಮಠ

Vishwakarma Jayanti celebration by BJP image

ಬಾಗಲಕೋಟೆ: ಜ್ಞಾನಮಾರ್ಗದಿಂದ ಕೂಡಿದ ವಿಶ್ವಕರ್ಮರು ಮಾನವನ ಶ್ರೇಯೋಭಿವೃದ್ದಿಗಾಗಿ ಶ್ರೇಷ್ಠವಾದ ಜೀವನ ಮಾರ್ಗವನ್ನು ತೋರಿಸಿಕೊಟ್ಟವರು, ಅಂಥವರ ಮೂಲ ಪುರುಷನೇ ವಿಶ್ವಕರ್ಮಪರಮಾತ್ಮನಾಗಿದ್ದಾನೆ, ಸೃಷ್ಟಿ ನಿರ್ಮಾಣ ಕತೃವಾಗಿದ್ದು ಸಕಲಕರ್ಮಗಳಿಗೂ ಅವನೇ ಒಡೆಯನಾಗಿದ್ದಾನೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. Vishwakarma Jayanti celebration by BJP

ಅವರು ನಗರದ ಶಿವಾನಂದ ಜೀನ್ ನಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಹಮ್ಮಿಕೊಂಡ ವಿಶ್ವದ ಸೃಷ್ಟಿಕರ್ತ ಶ್ರೀ ವಿಶ್ವಕರ್ಮಪ್ರಭುವಿನ ಪೂಜಾ ಮಹೋತ್ವವ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವಿಶ್ವಕರ್ಮಪ್ರಭುವಿನ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇದನ್ನೂ ಓದಿ: Lok Adalat | ಒಂದಾದ 10 ಜೋಡಿ | ಜಮೀನು ವಿವಾಧ ಇತ್ಯರ್ಥ ರಾಜೀ ಸಂಧಾನ : 27376 ಪ್ರಕರಣಗಳು ಇತ್ಯರ್ಥ

ಜ್ಞಾನ ಮತ್ತು ವಿಜ್ಞಾನಗಳಿಂದ ಆವೃತವಾದ ವಿಶ್ವಕರ್ಮನು ಆತ್ಮ ಸಂಸ್ಕøತಿಯ ಪ್ರತಿಕ, ವಿಶ್ವಕರ್ಮ ಪರಮಾತ್ಮನೆಂದರೆ ಅದೊಂದು ಲೋಕತತ್ವ, ಲೋಕದ ಜ್ಞಾನ ಮತ್ತು ಕರ್ಮಮಾರ್ಗಗಳನ್ನು ಆಗು ಮಾಡುತ್ತಾ ಆಯಾ ಮತ ವೃತ್ತಿಯವರು ತಮ್ಮ ತಮ್ಮ ಕೆಲಸಗಳ ಮೂಲಕವೇ ತಮ್ಮ ಬದುಕಿನ ಕ್ರಮಗಳನ್ನು ರೂಪಿಸಿಕೊಳ್ಳಲು ಪೇರಕವಾದ ಜೀವಪರತತ್ವ, ಸಕಲವನ್ನು ಸಕಲರನ್ನು ಒಳಗೊಳ್ಳುವ ಮತ್ತು ಅವೆಲ್ಲವೂ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇಕಾದಂತ ಜೀವ ಜೈತನ್ಯ ನೀಡುವ ವೈಜ್ಞಾನಿಕ ವಿಧಾನವೇ ವಿಶ್ವಕರ್ಮ ತತ್ವವಾಗಿದೆ, ಜ್ಞಾನಮಾರ್ಗದಿಂದ ಕೂಡಿದ ವಿಶ್ವಕರ್ಮರು ಮಾನವನ ಶ್ರೇಯೋಭಿವೃದ್ದಿಗಾಗಿ ಶ್ರೇಷ್ಠವಾದ ಜೀವನ ಮಾರ್ಗವನ್ನು ತೋರಿಸಿಕೊಟ್ಟವರು ಎಂದರು.

ಇದೆ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಬಿಜೆಪಿ ನಗರ ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಚಾರ ಸಾಮಗ್ರಿಯನ್ನು ಬಿಡುಗಡೆಗೊಲಿಸಲಾಯಿತು. Vishwakarma Jayanti celebration by BJP

ಇದನ್ನೂ ಓದಿ: Vishwakarma Jayanti : ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಸವಿತಾ ಲೆಂಕನ್ನವರ, ಉಪಾಧ್ಯಕ್ಷರಾದ ಶೋಭಾ ರಾವ, ಮುಖಂಡರಾದ ಜಿ,ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂದೆ, ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮೌನೇಶ ಪತ್ತಾರ ಕೆರೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ,ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀಕಾಂತ ಪತ್ತಾರ,ನಾಗೇಶ ಬರಗಿ, ಸಂಗಣ್ಣ ಹಡಗಲಿ, ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.


Share the Post:

ಇತ್ತೀಚಿನ ಸುದ್ದಿಗಳು