ವಿಜಯಪುರ: ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಕಾರ್ಯಕ್ರಮ ಅಂಗವಾಗಿ
ಬೆಳಿಗ್ಗೆ 9.00 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದವರೆಗೆ ಮಹಿಳೆಯರಿಂದ ಬೈಕ್ ರ‍್ಯಾಲಿ ಜರುಗಿತು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷೆ ಮಹಾದೇವಿ ಗೋಕಾಕ ಉಪಾಧ್ಯಕ್ಷೆ ಶಶಿಕಲಾ ಕೊಟಗಿ ಅವರು ರ‍್ಯಾಲಿಗೆ ಚಾಲನೆ ನೀಡಿದರು.
ಬೈಕ್ ರ‍್ಯಾಲಿಯಲ್ಲಿ ಭಾರತಿ ನಾವಿ, ಪ್ರತಿಭಾ ಪಾಟೀಲ, ಶೀಲಾ ಆರ್. ಬಿರಾದಾರ, ಶ್ವೇತಾ ಹರನಾಳ, ಭಾರತಿ ಪಾಟೀಲ, ಶಾರದ ಕೊಪ್ಪ, ಸಂಗೀತಾ ಪೂಜಾರಿ,ಸುಮಾ ಅಂಗಡಿ, ಶ್ರೀದೇವಿ ಪಾಟೀಲ,ಸ್ವೇತಾ ಅಕ್ಕಲಕೋಟ, ಅನುಸೂಯಾ ಬಿರಾದಾರ, ಶಿವಲೀಲಾ ಮನಗೊಂಡ, ಸುಮಾ ದುದಗಿ ರಾಜೇಶ್ವರಿ ಮನಗೂಳಿ, ಅಕ್ಕಮ್ಮ ಮಠ ನೀತಾ ಸೂಳಿಭಾವಿ, ಸ್ನೇಹಾ ಬಿರಾದಾರ, ಶಕುಂತಲಾ ಬಗಲಿ ಮಂಗಲಾ ಡೊಮ್ಮನಾಳ ಅನಿತಾ ಕುಮಶಿ, ಶೈಲಾ ಬಸವಪ್ರಭು., ತ್ರಿವೇಣಿ ಬರ‍್ಲಿ, ಜಯಶ್ರೀ ಲದ್ವಾ, ಅಶ್ವಿನಿ ಮಾನೆ, ಪರ‍್ಣಿಮಾ ಯಾದವಾಡ, ಸುನಿತಾ ಬಿರಾದಾರ, ರೇಖಾ ಬಿರಾದಾರ, ಐಶ್ವರ್ಯ ಬಿರಾದಾರ ಸೇರಿ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿ ಸಿ ನಾಗಠಾಣ,ಎಸ್ ಎಚ್ ನಾಡಗೌಡ, ಜೆ ಎಸ್ ಪಾಟೀಲ,ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಶರಣು ಕಿರಣಗಿ ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ದಾನೇಶ ಅವಟಿ ಜಗದೇವ ಸರ‍್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಉಪಸ್ಥಿತರಿದ್ದರು.






