Vijayapura News | ಹರಳಯ್ಯ ಸಮಾಜದ ಮಾಹಿತಿ ಸಂಗ್ರಹಣೆ ಕಾರ್ಯಕ್ರಮ

ಹರಳಯ್ಯ image

ವಿಜಯಪುರ: ಶ್ರೀ ಮಹಾಶಿವಶರಣ ಸಮಗಾರ (ಚಮ್ಮಾರ) ಹರಳಯ್ಯ ಸಮಾಜ ಬಾಂಧವರ ಅಂಕಿ-ಸಂಖ್ಯೆ ಮಾಹಿತಿ ಸಂಗ್ರಹಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ರವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ತತ್ವ ಮತ್ತು ಆದರ್ಶಗಳ ಬಗ್ಗೆ ನಮ್ಮ ದಲಿತ ಸಮುದಾಯದ ಎಲ್ಲಾ ನೌಕರರಿಗೆ ಹಾಗೂ ಸಮಾಜ ಬಾಂದವರಿಗೆ ಮನಮುಟ್ಟುವಂತೆ ತಿಳಿಸಿ, ಸಮಾಜವನ್ನು ಹೇಗೆ ಒಗ್ಗೂಡಿಸಬೇಕು, ಹೇಗೆ ಅಭಿವೃದ್ಧಿ ಪಡಿಸಬೇಕು, ಹೇಗೆ ಮುನ್ನಡೆಸಬೇಕು ಎಂಬುವುದರ ಕುರಿತು ಬಹಳ ಮಾರ್ಮಿಕವಾಗಿ ಮಾತನಾಡಿದರು.

ಇದನ್ನೂ ಓದಿ: Vijayapura News | ಉದ್ಘಾಟನೆಗೊಳ್ಳದೆ ಅನಾಥವಾಗಿರುವ ರಾಣಿ ಚೆನ್ನಮ್ಮ ಪುತ್ಥಳಿ. ಸರ್ಕಾರದ ನಿರ್ಲಕ್ಷಕ್ಕೆ ಖಂಡನೆ.

ಅಲ್ಲದೆ, ಹರಳಯ್ಯ ಸಮುದಾಯದ ಮಾಹಿತಿ ಸಂಗ್ರಹಿಸುವ ಕಾರ್ಯ ನಿಜವಾಗಿ ಶ್ಲಾಘನೀಯವಾದುದು ಮತ್ತು ಅಂಬೇಡ್ಕರ್ ರವರ ವಿಚಾರಗಳು ಸಮುದಾಯದ ಸಮಾಜ ಬಾಂಧವರಿಗೆ ತಲುಪಿಸುವ ಕಾರ್ಯ ಮಾಡುವುದರ ಜೊತೆಗೆ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದು ಉತ್ತಮವಾದುದ್ದು, ಈ ಅದ್ಬುತವಾದ ಕಾರ್ಯ ಯಶಸ್ವಿಯಾಗಿಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಗಂಗಾಧರ ಬಹುಜನ, ಕೆ.ಆರ್. ತೋರವಿ, ಮಹಾದೇವ ಬಿ. ಧನ್ನಿ, ಬಹುಸಾಬ ಕಾಂಬಳೆ, ಮಹಾದೇವ ಕಬಾಡೆ, ರುದ್ರಪ್ಪ ಬನಸೋಡೆ, ಯಶವಂತ ಪೂಜಾರಿ, ಯಲ್ಲಪ್ಪ ಸಾನಕ್ಯಾನವರ, ಹಣಮಂತ ಕದಂ, ಎನ್.ಜೆ. ಹೊನಸೂರೆ, ಮಹಾದೇವರಾವ್ ಬಿಜಾಪುರ, ತಿಪ್ಪಣ್ಣ ಶಹಾಪುರ, ಬಸವರಾಜ ಕಾಂಬಳೆ, ವಿಠ್ಠಲ ಮನಗೂಳಿ, ಮಹೇಶ ಕಾಂಬಳೆ, ಪ್ರವೀಣ ಇಲಕಲ್, ರವಿ ಶಹಾಪುರ, ರವಿ ಮಂಟೂರ್, ಆಕಾಶ ಕಾರಿಕೋಳ, ವೆಂಕಟೇಶ ಪಾಟೀಲ, ಪರಶುರಾಮ್ ಹಂಜಗಿ, ಪರಶುರಾಮ್ ಸೂರ್ಯವಂಶಿ ಹಾಗೂ ಸಮಸ್ತ ಸಮಾಜ ಬಾಂಧವರು ಹಾಜರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »