Vijayapura News | ಉದ್ಘಾಟನೆಗೊಳ್ಳದೆ ಅನಾಥವಾಗಿರುವ ರಾಣಿ ಚೆನ್ನಮ್ಮ ಪುತ್ಥಳಿ. ಸರ್ಕಾರದ ನಿರ್ಲಕ್ಷಕ್ಕೆ ಖಂಡನೆ.

Rani Chennamma Putthali image

ವಿಜಯಪುರ: Rani Chennamma Putthali ಭಾರತ ದೇಶಕ್ಕೆ ಸ್ವಾಂತತ್ರ್ಯ ದೊರಕಿಸಲು ಬ್ರಿಟಿಷ್‍ರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಸ್ವತಂತ್ರ್ಯ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚೆನ್ನಮ್ಮಳಾಗಿದ್ದು. ಇಂತಹ ದೇಶ ಭಕ್ತಳ ಪುತ್ಥಳಿ ಅನಾವರಣೆಗೊಳಿಸದೆ ಇರುವುದು ಸರ್ಕಾರ ಹಾಗೂ ಸಮಾಜ ಕೂಡಾ ನಿರ್ಲಕ್ಷವಹಿಸಿರುವುದು ನೋವಿನ ಸಂಗತಿಯಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸಮಾಜದ ಮುಖಂಡರಾದ ಸುರೇಶ ಬಿರಾದಾರ ಹಾಗೂ ಎಮ್.ಜಿ. ಯಂಕಂಚಚಿ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಬೇಸರ ವ್ಯಕ್ತ ಪಡಿಸಿದರು.

ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಕರೆದಿದ್ದ ಮಾದ್ಯಮ ಘೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರಾಣಿ ಚೆನ್ನಮ್ಮಳ ಪುತ್ಥಳಿ ನಿಲ್ಲಿಸಿ ನಾಲ್ಕು ವರ್ಷ ಗತಿಸುತ್ತಾ ಬಂದರು ಇನ್ನು ಉದ್ಗಾಟನಾ ಭಾಗ್ಯ ಖಂಡಿಲ್ಲ. ಪುತ್ಥಳಿಗೆ ಹೊದಿಕೆ ಹೊದಿಸಿ ಧೀರ ಮಹಿಳೆಯನ್ನು ಬಂದನದಲ್ಲಿ ಇರಿಸಿದಂತೆ ಮಾಡಲಾಗಿದೆ.

ಇದನ್ನೂ ಓದಿ: Vijayapura News | ಕಸಾಪದಿಂದ ರಾಜೇಶ್ವರಿ ಮೊಪಗಾರ ರಾಜ್ಯೋತ್ಸವ ಗೌರವ ಪ್ರಶಸ್ತಿ.

Rani Chennamma Putthali ಈ ವಿಳಂಬ ಧೋರಣೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡಾ ಉದ್ಗಾಟನೆಯ ಗೋಜಿಗೆ ಹೋಗಿಲ್ಲ. ನಾಡಿನ ಶರಣರು, ಸಂತರು, ಮಹಾತ್ಮರು ಒಂದೇ ಸಮುದಾಯಕ್ಕೆ ಸೀಮಿತರಲ್ಲ. ಆದರೆ ರಾಣಿ ಚೆನ್ನಮ್ಮಳನ್ನು ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸುವುದು ಸರಿ ಅಲ್ಲ. ಎಲ್ಲ ಸಮುದಾಯಕ್ಕೂ ರಾಣಿ ಚೆನ್ನಮ್ಮ ಅತ್ಯವಶ್ಯಕ. ನಾಡಿನ ಮಠಾಧೀಶರು ಕೂಡಾ ಪುತ್ಥಳಿ ಅನಾವರಣದ ಬಗ್ಗೆ ಧ್ವನಿ ಎತ್ತದೆ ಇರುವುದು ದೌಭಾಗ್ಯ ಪುತ್ಥಳಿ ಅನಾವರಣಕ್ಕೆ ಜಾತಿ ರಾಜಕಾರಣ ಬೇಡ.

ಯಾವುದಕ್ಕೆಲ್ಲ ಮಠಾಧೀಶರು ಹೋರಾಟ ಮಾಡುತ್ತಾರೆ ಆದರೆ ರಾಣಿ ಚೆನ್ನಮ್ಮಳ ಪುತ್ಥಳಿ ಅನಾವರಣ ಮಾಡುವುದಕ್ಕೆ ಧ್ವನಿ ಎತ್ತುತ್ತಿಲ್ಲ ಏಕೆ? ಎಂದು ಅರವಿಂದ ಕುಲಕರ್ಣಿ ಪ್ರಶ್ನಿಸಿದ್ದಾರೆ. ಪುತ್ಥಳಿ ನಿರ್ಮಿಸುವುದು ಹಾಗೂ ಉದ್ಗಾಟನೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ ಇಲ್ಲಿ ಸರ್ಕಾರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಒದಗಿಸಿರುವುದಿಲ್ಲವೆಂದು ತಿಳಿದು ಬಂದಿದೆ. ಸಮಾಜ ಬಾಂಧವರು ಸಂಘ ಸಂಸ್ಥೆಗಳು ದೇಣಿಗೆ ನೀಡಿ ಪುತ್ಥಳಿ ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದ್ದರಿಂದಲೇ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಂತೆ ಕಾಣುತ್ತಿದೆ. ಜಿಲ್ಲಾಡಳಿತವು ಕೂಡಾ ನಿರ್ಲಕ್ಷ ವಹಿಸಿದೆ.

ಇದನ್ನೂ ಓದಿ: Vijayapura News | ಎಸ್ ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೂಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಮಾಜ ಬಾಂಧವರು ಪುತ್ಥಳಿ ನಿರ್ಮಿಸುವ ಜವಾಬ್ದಾರಿ ಸರ್ಕಾರಕ್ಕೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಉದ್ಘಾಟನೆ ಆಗುತ್ತಿತ್ತೋ ಏನೋ ಎಂಬುದು ಜನರ ಮನಸ್ಸಿನಲ್ಲಿ ಮುಡಿದೆ. ಅದು ಏನೆ ಇರಲಿ ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರದಲ್ಲಿ ರಾಣಿ ಚೆನ್ನಮ್ಮಳ ಪುತ್ಥಳಿ ಅನಾವರಣ ಗೊಳಿಸುವ ಮೂಲಕ ನಾಡಿಗೆ ಸಮರ್ಪಣೆ ಮಾಡಿ ರಾಣಿ ಚೆನ್ನಮ್ಮಳ ಪುತ್ಥಳಿ ವೀಕ್ಷಣೆ ಮಾಡುವ ಭಾಗ್ಯ ಜನರಿಗೆ ಕಲ್ಪಿಸಿ ಕೊಡಬೇಕು. ಮತ್ತು ಪ್ರತಿ ವರ್ಷ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿಯೆಂದು ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವದು ಕಡ್ಡಾಯ.

ಆದರೆ ಕಾರ್ಯಕ್ರಮಕ್ಕೆ ಸಚಿವರಾಗಲಿ, ಜಿಲ್ಲಾಧಿಕಾರಿಗಳಾಗಲಿ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲವೆಂದು ಜನರ ಆಪಾದನೆಯಾಗಿದೆ. ಜಿಲ್ಲಾಧಿಕಾರಿ ಬದಲಾಗಿ ಪ್ರತಿ ವರ್ಷ ಜಯಂತಿಯಂದು ಅಪರ ಜಿಲ್ಲಾಧಿಕಾರಿಗಳೇ ಭಾಗವಹಿಸುತ್ತಾರೆಂದು ಜನತೆ ಹೇಳುತ್ತಿದ್ದಾರೆ. ಈ ಬಾರಿಯಾದರು 23 ರಂದು ನಡೆಯುವ ರಾಣಿ ಚೆನ್ನಮ್ಮಳ ಜಯಂತಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸಮಾಜದ ಮುಖಂಡರಾದ ಸುರೇಶ ಬಿರಾದಾರ ಹಾಗೂ ಎಮ್.ಜಿ. ಯಂಕಂಚಚಿ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು