ವಿಜಯಪುರ: ವಿಶ್ವ ಏಡ್ಸ್ ದಿನಾಚರಣೆ ನಗರದ ಸಂತ ಜೋಸೆಪ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಮುದಾಯು ಭವನದಲ್ಲಿ ವಿಶ್ವ ಏಡ್ಸ ದಿನಾಚರಣೆ ಹಾಗೂ ಕ್ರಿಸ್‍ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಂಕರ ಮಾಡಿಹಾಳ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ವಿಜಯಪುರ ಇವರು ಮಾತನಾಡುತ್ತ ಸರ್ಕಾರ ಹೆಚ್ ಆಯ್ ವ್ಹಿ/ಏಡ್ಸ ಸೋಂಕನ್ನು ಬೇರು ಸಮೇತ ಈ ದೇಶದಿಂದ ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುತ್ತದೆ.
ಹೆಚ್ ಆಯ್ ವ್ಹಿ ಪಿಡಿತರು ಕೂಡ ಸಮಾಜದಲ್ಲಿ ಯಾವುದೇ ತೋಂದರೆಗಳಿಗೆ ಒಳಗಾಗಬಾರದೆಂದು ಅನುಷ್ಟಾನಗೊಳಿಸಿದೆ ಅವುಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಮುಖ್ಯವಾಗಿ ಸಮಾಜದಲ್ಲಿ ಎಲ್ಲ ಸಮುದಾಯದವರು ಹೆಚ್ ಆಯ್ ಸೊಂಕಿತರನ್ನು ದೂರವಿಡದೆ ಅವರನ್ನು ಆತ್ಮಿಯರಾಗಿ ನಡೆದುಕೊಳ್ಳಬೇಕು. ಜಿಲಾ ಏಡ್ಸ ನಿಯಂತ್ರಣ ಘಟಕ ವಿವಿದ ರೀತಿಯ ಕ್ರೀಯಾತ್ಮಕವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಯುವಕರಲ್ಲಿ ಮಹಿಳೆಯರಲ್ಲಿ ಕಾರ್ಮಿಕರಲ್ಲಿ ಜಾಗೃತಿ ಮುಂಜಾಗ್ರತೆ ಕುರಿತು ಮಾಹಿತಿ ನಿಡಿತ್ತಿದ್ದಾರೆ ಎಲ್ಲ ಸಂಘ ಸಂಸ್ಥೆಗಳು ಕೂಡ ಶ್ರಮವಹಿಸುತ್ತಿದ್ದಾರೆ. ಅದರಂತೆ ಎಲ್ಲರೂ ಕೈಗೂಡಿಸಿ ಯಸಶ್ವಿಗೊಳಿಸುವ ಮೂಲಕ ಹೆಚ್ ಆಯ್ ವ್ಹಿ /ಏಡ್ಸ ಸೋಂಕನ್ನು ಸೋನ್ನಗೆ ತರಬೇಕೆಂದು ಕರೆ ನೀಡಿದರು. ವಿಶ್ವ ಏಡ್ಸ್ ದಿನಾಚರಣೆ
ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ 68ನೇ ಮಹಾ ಪರಿನಿರ್ವಾಣ ದಿನಾಚರಣೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಮಲ್ಲನಗೌಡ ಬಿರಾದಾರ ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣ ವಿಜಯಪುರ. ಇವರು ಮಾತನಾಡುತ್ತ ಹೆಚ್ ಆಯ್ ವ್ಹಿ ಪಿಡಿತರಿಗೆ ಎ ಆರ್ ಟಿ ಮಾತ್ರೆಗಳ ಜೊತೆಗೆ ಆತ್ಮಸ್ಥೈರ್ಯ ಕೂಡ ತುಂಬಾ ಮುಖ್ಯವಾದುದ್ದು. ಹೊರಗಿನವರಿಗಿಂತ ಮನೆಯವರಿಂದಲೆ ಹಲವಾರು ರೀತಿಯ ಕಳಂಕ ತಾರತಮ್ಯವನ್ನು ಅನುಭವಿಸುವದನ್ನು ಕಂಡು ಬಂದಿದೆ. ಇಂತ ಸಮಯದಲ್ಲಿ ಕುಗ್ಗದೆ ಮಾನಸಿಕ ಖಿನ್ನತೆಗೆ ಒಳಗಾಗದೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಸರ್ಕಾರ ಹೆಚ್ ಆಯ್ ವ್ಹಿ /ಏಡ್ಸ್ ಪೀಡಿತರಿಗೆ ಹೊಸ ಹೊಸ ಯೋಜನೆಗಳು ರೂಪಿಸಲಾಗುತ್ತಿದೆ. ಹೆಚ್ ಆಯ್ ವ್ಹಿ ಪಿಡಿತ ವಿದ್ಯಾವಂತ ಯುವಕ/ಯುವತಿಯರಿಗೆ ಸರ್ಕಾರಿ ಇಲಾಖೆಯಲ್ಲಿ ವಿಶೇಷ ಮಿಸಲಾತಿ ಕೂಡ ಅನುಮೋದನೆಯಾಗಿದೆ ಅದರ ಸದುಪಯೋಗ ಪಡೆದುಕೊಳ್ಳಬೆಕೆಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀಮತಿ ವಾಣಿಶ್ರೀ ನಿಂಬಾಳ ಸಾಂಸ್ಥಿಕ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ. ಇವರು ಮಾತನಾಡುತ್ತ ವಿಶೇಷ ಸಮುದಾಯಕ್ಕೆ ಸೇರಿದ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳು ಇದ್ದು ಕಾಲಕಾಲಕ್ಕೆ ಆಯಾ ಸಮುದಾಯದ ಮಕ್ಕಳಿಗೆ ತಲುಪಿಸುವ ಕಾರ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಡುತ್ತಿದೆ ಎಂದು ವಿವಿದ ಯೋಜನೆಗಳ ಮಾಹಿತಿ ತಿಳಿಸಿದರು.
ಇದನ್ನೂ ಓದಿ: Vijayapura News | 23 ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ | ಸ್ಪಂದಿಸದ ಆಧಿಕಾರಿಗಳು | ನ್ಯಾಯಕ್ಕಾಗಿ ಹೋರಾಟ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಾದರ್. ಪ್ರಾನ್ಸಿಸ್ ಮ್ಯಾನೆಜಸ್ಸ್ ಮುಖ್ಯಸ್ಥರು ಬಿಜಾಪುರ ಜೆಸ್ವಿಟ್ ಸಂಸ್ಥೆಗಳು ವಿಜಯಪುರ ಅವರು ಮಾತನಾಡುತ್ತ ಹೆಚ್ ಆಯ್ ವ್ಹಿ ಪಿಡಿತ ಮಕ್ಕಳು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಬವಿಷ್ಯದಲ್ಲಿ ಸದೃಡವಾಗಲು ಎಲ್ಲ ರೀತಿಯ ಸಹಾಯ ಸಹಕಾರದ ಅವಶ್ಯಕತೆಯಿದೆ. ಆದ್ದರಿಂದ ಸರ್ಕಾರ ಅವರಿಗಾಗಿ ಹೆಚ್ಚು ಯೋಜನೆಗಳ ರೂಪಿಸುವ ಅವಸ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಹೆಚ್ ಏಯ್ ವ್ಹಿ ಪಿಡಿತರು ತಮ್ಮ ಸಮಸ್ಯೆಗಳ ಕುರಿತು ಸಂವಾದ ಮಾಡಿ ಪರಿಹಾರ ಕಂಡುಕೊಂಡರು ಕಾರ್ಯಕ್ರಮದ ಕುರಿತು ಫಾದರ. ಟಿಯೋಲ್ ಮಚಾದೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಸಿಸ್ಟರ್|| ಅಮಲಾ ರಾಣಿ ಇಡಿ ವರ್ಷದ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ವರದಿವಾಚನ ಮಾಡಿದರು.
ಇದನ್ನೂ ಓದಿ: Vijayapura News | ಎಬಿವಿಪಿಯಿಂದ ಖಾಲಿ ಕುರ್ಚಿಗೆ ಮನವಿ
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಶೃತಿ ನಿಡೋಣಿ, ಸ್ವಾಗತ ಸುನೀತಾ ಮೋರೆ, ವಂದನಾರ್ಪಣೆಯನ್ನು ದಾನಯ್ಯ ಅವರು ನೇರವೇರಿಸಿದರು. 200ಕ್ಕೂ ಹೆಚ್ಚು ಹೆಚ್ ಆಯ್ ವ್ಹಿ ಪಿಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.






