Vijayapura News | ಬಾಬಾಸಾಹೇಬರು ಕಟ್ಟಿಕೊಟ್ಟಿರುವ ಭಾರತ ಉಳಿಸಿಕೊಳ್ಳೊಣ : ಶ್ರೀನಾಥ ಪೂಜಾರಿ

DVP Candle March image

ವಿಜಯಪುರ: ಅಪ್ಪಟ ದೇಶಪ್ರೇಮಿಗಳಾದ ಬಾಬಾಸಾಹೇಬರು ಈ ಭಾರತವನ್ನು ಸದೃಢವಾಗಿ ಕಟ್ಟಿಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಯುವಜನರು ಸಂಕಲ್ಪ ಮಾಡಬೇಕಾಗಿದೆ. DVP Candle March ಬಾಬಾಸಾಹೇಬರು ಹಲವು ದಾಖಲೆಯ ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಸಮಾನತೆ ತಂದುಕೊಟ್ಟ ಮಹಾನ್ ಮಾನವತವಾದಿ ಡಾ. ಬಿ. ಆರ್.ಅಂಬೇಡ್ಕರ್ ಅವರ ವಿಚಾರ ಇಂದಿನ ವಿದ್ಯಾರ್ಥಿ ಯುವ ಜನರಿಗೆ ಆದರ್ಶ ದೀಪವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀನಾಥ್ ಪೂಜಾರ್ ಹೇಳಿದರು.

ಇದನ್ನೂ ಓದಿ: Vijayapura News | ಹೆಚ್.ಆಯ್.ವ್ಹಿ ಸೋಂಕನ್ನು ಸೊನ್ನೆಗೆ ತರಲು ಎಲ್ಲರೂ ಕೈ ಜೋಡಿಸಿ _ ಶಂಕರ ಮಾಡಿಹಾಳ ಕರೆ

ಡಾ. ಬಿ. ಆರ್. ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ಪ್ರಯುಕ್ತ ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕ್ಯಾಂಡಲ್ ಮಾರ್ಚ ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕ ಭಾರತದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ ಮತ್ತು ಅವರ ಬರೆದ ಸಂವಿಧಾನವೇ ಇದಕ್ಕೆ ಕಾರಣವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರೂಪದಲ್ಲಿ ನಮ್ಮೊಂದಿಗೆ ಇದ್ದರೆ, DVP Candle March ಅವರ ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು ಜೊತೆಗೆ ಸಂವಿಧಾನ ರಕ್ಷಣೆಗೆ ಶಪತ ಮಾಡಬೇಕೆಂದು ಹೇಳಿದರು.DVP Candle March image

ನಮ್ಮ ದೇಶಕ್ಕೆ ಸಂವಿಧಾನ ಒದಗಿಸದಿದ್ದರೆ ಶೋಷಿತ ಸಮುದಾಯಗಳು ಆರ್ಥಿಕವಾಗಿ ಸಬಲರಾಗುತ್ತಿರಲಿಲ್ಲ. ಸಂವಿಧಾನದಿಂದ ಶೋಷಿತ ಸಮುದಾಯಗಳು ಎಲ್ಲಾ ರಂಗದಲ್ಲಿ ಅವಕಾಶಗಳು ಸಿಕ್ಕಿರುವುದು ಸಂವಿಧಾನದಿಂದ ಮಾತ್ರ ಎಂದು ಹೇಳಿದರು. ಸಂವಿಧಾನವು ನಮ್ಮ ದೇಶದ ಪವಿತ್ರ ಗ್ರಂಥವಾಗಿದೆ. ಅದನ್ನು ಇಂದಿನ ವಿದ್ಯಾರ್ಥಿ ಮತ್ತು ಯುವಕರು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವೆಂದರು.

ಇದನ್ನೂ ಓದಿ: Vijayapura News | ಎಬಿವಿಪಿಯಿಂದ ಖಾಲಿ ಕುರ್ಚಿಗೆ ಮನವಿ

ದೇಶದಲ್ಲಿ ಸಂವಿಧಾನ ವಿರೋಧಿ ಹೇಳಿಕೆಯನ್ನು ದಲಿತ ವಿದ್ಯಾರ್ಥಿ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಸಂವಿಧಾನ ವಿರೋಧಿ ಹೇಳಿಕೆ ನೀಡುವವರು ಭಾರತ ದೇಶದಲ್ಲಿ ಅವಕಾಶವಿಲ್ಲ ಎಂದರು.

ಈ ಸಂದರ್ಭದಲ್ಲಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ನ್ಯಾಯವಾದಿಗಳಾದ ವಿದ್ಯಾವತಿ ಅಂಕಲಿಗಿ, ಫಾದರ್ ಟಿಯೋಲ್ ಮಾಚದೊ, ಸಂತೋಷ ಪೂಜಾರಿ, ರೈತ ಸಂಘಟನೆ ಜಿಲ್ಲಾ ಮುಖಂಡ ಸಂಗಮೇಶ ಸಗರ, ಜಿಲ್ಲಾ ಮುಖಂಡರಾದ ಅಕ್ಷಯ ಅಜಮನಿ, ಮಾದೇಶ ಛಲವಾದಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Vijayapura News | ಮಾದಕ ವಸ್ತುಗಳ ಮಾರಾಟ ಜಾಲವನ್ನು ತಕ್ಷಣವೇ ಬಂಧಿಸಿ | ವಿಜಯಕುಮಾರ ಕುಡುಗಿನೂರ

ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡ ಕ್ಯಾಂಡಲ್ ಈ ಬೃಹತ್ ಮಾರ್ಚ ಅಂಬೇಡ್ಕರ್ ವೃತ್ತದ ವರೆಗೂ ಸಾಗಿತ್ತು. ಕ್ಯಾಂಡಲ್ ಮಾರ್ಚನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವಜನರು ಅಲ್ಲದೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಭಾಗವಹಿಸಿ, ಜೈ ಭೀಮ್ ಘೋಷಣೆ ಕೂಗುತ್ತಾ ಉತ್ಸಾಹದಿಂದ ಪಾಲ್ಗೊಂಡಿದ್ದರು.


Share the Post:

ಇತ್ತೀಚಿನ ಸುದ್ದಿಗಳು