ವಿಜಯಪುರ: ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಶರತ್ ಕುಮಾರ್ ಎಸ್ ಮಂಗಾನವರ್ ಸದಸ್ಯರು ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶಶಿಕಾಂತ್ ಎಸ್ ಪತಂಗಿ ಪ್ರಾಚಾರ್ಯರು ಮತ್ತು ಸಿಂಡಿಕೇಟ್ ಸದಸ್ಯರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು, “ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು” ಎಂಬುದನ್ನು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮಂಜುನಾಥ ಜುನಗೊಂಡ ಇವರು “ಗುರು ಮತ್ತು ಶಿಕ್ಷಕನ ನಡುವಿನ ವ್ಯತ್ಯಾಸ ಮತ್ತು ಶಿಕ್ಷಕನಿಗೆ ತಾಳ್ಮೆ ಮತ್ತು ಅಧ್ಯಯನ ಪ್ರವೃತ್ತಿ ಉಳ್ಳವನಾಗಿರಬೇಕು” ಎಂಬುದನ್ನು ತಿಳಿಸಿದರು.
ಇದನ್ನೂ ಓದಿ: Mobile Effect on Eyes: ಮಕ್ಕಳಿಗೆ ಗೊತ್ತಿರಬೇಕಾದ ಮಾಹಿತಿ
ಡಾ ಶ್ರೀಮತಿ ಎಸ್ ಟಿ ಬೋಳರೆಡ್ಡಿ ಪ್ರಾಚಾರ್ಯರು ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ ಇವರ “ಶಿಕ್ಷಕರ ಯಶಸ್ಸು ಅವರು ಮಾಡುವ ಕಾರ್ಯಗಳಲ್ಲಿ ಇರುತ್ತದೆ” ಎಂಬುದನ್ನು ತಿಳಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಿಕ್ಷಣಾರ್ಥಿಯಾದ ಮಲ್ಲಿಕಾರ್ಜುನ್ ಕೆಂಗನಾಳ್ ಅವರು ಮಾಡಿದರು. ಸ್ವಾಗತ ಮತ್ತು ಪರಿಚಯವನ್ನು ಪಿ ಆರ್ ಡೋಣೂರ ಮಾಡಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಡಾ. ಶಾರದಾ ಮನವಿ ಅವರು ಮಾಡಿದರು.
ಇದನ್ನೂ ಓದಿ: Vijayapura News | PDJ ಶಾಲೆಯ ವಿದ್ಯಾರ್ಥಿಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿ ಎಂ ಸಜ್ಜನ್, ಕವಿತಾ ಹಿರೇಮಠ್, ಸುಜಾತ ಗೋರ್ನಾಳ್, ವೀರಭಾ ಶೆಟ್ಟಿ, ಪಿ ಎಂ ರೆಡ್ಡಿ, ವಿನುತಾ ಚೌದರಿ, ರಿಯಾಜ್ ಮತ್ತು ಶೋಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಣ ಮಹಾವಿದ್ಯಾಲಯದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.






