ಮಹಾದೇವ ಸಾಹುಕಾರ್ ಮೇಲೆ ಪೈರಿಂಗ್

ವಿಜಯಪುರ ನ.02: ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಸಂಚರಿಸುತ್ತಿದ್ದ ಕಾರಿಗೆ ಅಪರಿಚಿತರಿಂದ ಟಿಪ್ಪರ್ ಡಿಕ್ಕಿ ಹೊಡೆಸಿ ಗುಂಡಿನ ದಾಳಿ ನಡೆಸಿದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ಘಟನೆ ಸಂಭವಿಸಿದೆ. ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು ಇಂದು ಮ. 3 ರಿಂದ 3.30ರ ಮಧ್ಯೆ ಮಹಾದೇವ ಸಾಹುಕಾರ ಮೇಲೆ ಧಾಳಿಯಾಗಿದೆ. ಸುಮಾರು 10 ರಿಂದ 15 ಜನರ ತಂಡ ಕಲ್ಲು ತೂರಾಟ ಮಾಡಿ ಪಿಸ್ತೂಲಿನಿಂದ ಧಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಬಾಬುರಾಮ ಮಾರುತಿ ಕಂಚಾಳ(64) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡ ಹೊಟ್ಟೆಗೆ 2, ಬೆನ್ನಿನ ಪಕ್ಕೆಲುಬಿಗೆ ಒಂದು ಗುಂಡು ತಗುಲಿದೆ. ಇನ್ನೂ ಈ ಪ್ರಕರಣದ ತನಿಖೆಗೆ ಪೊಲೀಸರ ತಂಡ ರಚಿಸಲಾಗಿದೆ. ಈ ಧಾಳಿಯ ಹಿಂದೆ ಹಳೆತ ವೈಷಮ್ಯವಿರುವ ಬಗ್ಗೆ ತನಿಖೆ ಮಾಡಲಾಗುವುದು ಎಂದರು. ಮಹಾದೇವ ಸಾಹುಕಾರ, ಬೆಂಬಲಿಗರು 3 ಕಾರುಗಳಲ್ಲಿ ತೆರಳುತ್ತಿದ್ದರು. ಒಂದು ಕಾರಿನಲ್ಲಿ ಮಹಾದೇವ ಸಾಹುಕಾರ ಭೈರಗೊಂಡ, ಲಕ್ಷ್ಮಣ ಖೋಗಾಂವ, ಜಗಬೀರಸಿಂಗ್, ಹುಸೇನಿ ಭಜಂತ್ರಿ, ರಮೇಶ ಸಂಚರಿಸುತ್ತಿದ್ದರು. ಮತ್ತೋಂದು ಕಾರಿನಲ್ಲಿ ಶಿವರಾಜ ಭೈರಗೊಂಡ, ವಾಬುರಾಮ ಕಂಚನಾಳ ಸಂಚರಿಸುತ್ತಿದ್ದರು. ಮೂರನೇ ವಾಹನದಲ್ಲಿ ಐದು ಜನ ಸಂಚರಿಸುತ್ತಿದ್ದರು ಎಂದು ಪ್ರಕರಣದ ಕುರಿತು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದರು.


 

Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »