ಬೆಂಗಳೂರು ಅ.28: 65ನೇ ಕನ್ನಡ ರಾಜ್ಯೋತ್ಸವಕ್ಕೆ ಸಜ್ಜಾಗಿರುವ ರಾಜ್ಯ ಸರ್ಕಾರ, ಈ ಬಾರಿ 26 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಮಾಹಿತಿ ನೀಡಿದ್ದು, ಈ ಬಾರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಮೊತ್ತ 1 ಲಕ್ಷ ಮತ್ತು 25 ಗ್ರಾಂ ಚಿನ್ನದ ಪದಕ ಒಳಗೊಂಡಿರುತ್ತದೆ. ನ.7ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯೋತ್ಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸರಳವಾಗಿ ನಡೆಯಲಿದೆ ಎಂದು ತಿಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಗಿನಂತಿದೆ.
| ಕ್ರಮ ಸಂಖ್ಯೆ | ಹೆಸರು | ಕ್ಷೇತ್ರ |
| 1 | ಪ್ರೊ. ಸಿ.ಪಿ. ಸಿದ್ಧಾಶ್ರಮ, ಧಾರವಾಡ | ಸಾಹಿತ್ಯ |
| 2 | ವಿ. ಮುನಿ ವೆಂಕಟ್ಟಪ್ಪ, ಕೋಲಾರ | ಸಾಹಿತ್ಯ |
| 3 | ರಾಮಣ್ಣ ಬ್ಯಾಟಿ, ಗದಗ | ಸಾಹಿತ್ಯ |
| 4 | ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ | ಸಾಹಿತ್ಯ |
| 5 | ಡಿ.ಎನ್. ಅಕ್ಕಿ, ಯಾದಗಿರಿ | ಸಾಹಿತ್ಯ |
| 6 | ಹಂಬಯ್ಯ ನೂಲಿ, ರಾಯಚೂರು | ಸಂಗೀತ |
| 7 | ಅನಂತ ತೇರದಾಳ, ಬೆಳಗಾವಿ | ಸಂಗೀತ |
| 8 | ಬಿ.ವಿ. ಶ್ರೀನಿವಾಸ್, ಬೆಂಗಳೂರು ನಗರ | ಸಂಗೀತ |
| 9 | ಗಿರಿಯಾ ನಾರಾಯಣ, ಬೆಂಗಳೂರು ನಗರ | ಸಂಗೀತ |
| 10 | ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ | ಸಂಗೀತ |
| 11 | ಕೆ.ಎನ್. ಭಟ್, ಬೆಂಗಳೂರು | ನ್ಯಾಯಾಂಗ |
| 12 | ಎಂ.ಕೆ. ವಿಜಯಕುಮಾರ್, ಉಡುಪಿ | ನ್ಯಾಯಾಂಗ |
| 13 | ಸಿ. ಮಹೇಶ್ವರನ್, ಮೈಸೂರು | ಮಾಧ್ಯಮ |
| 14 | ಟಿ. ವೆಂಕಟೇಷ್ (ಈ ಸಂಜೆ), ಬೆಂಗಳೂರು | ಮಾಧ್ಯಮ |
| 15 | ಡಾ|| ಎ.ಎಸ್.ಚಂದ್ರಶೇಖರ, ಮೈಸೂರು | ಯೋಗ |
| 16 | ಎಂ.ಎನ್.ಷಡಕ್ಷರಿ, ಚಿಕ್ಕಮಗಳೂರು | ಶಿಕ್ಷಣ |
| 17 | ಡಾ|| ಆರ್. ರಾಮಕೃಷ್ಣ, ಚಾಮರಾಜನಗರ | ಶಿಕ್ಷಣ |
| 18 | ಡಾ|| ಎಂ.ಜಿ. ಈಶ್ವರಪ್ಪ, ದಾವಣಗೆರೆ | ಶಿಕ್ಷಣ |
| 19 | ಡಾ|| ಪುಟ್ಟಸಿದ್ದಯ್ಯ, ಮೈಸೂರು | ಶಿಕ್ಷಣ |
| 20 | ಅಶೋಕ್ ಶೆಟ್ಟರ್, ಬೆಳಗಾವಿ | ಶಿಕ್ಷಣ |
| 21 | ಡಿ.ಎಸ್. ದಂಡಿನ್, ಗದಗ | ಶಿಕ್ಷಣ |
| 22 | ಕುಸುಮೋದರ ದೇರಣ್ಣ ಶೆಟ್ಟಿ ಕಲ್ತಡ್ಕ, ದಕ್ಷಿಣ ಕನ್ನಡ | ಹೊರನಾಡು ಕನ್ನಡಿಗ |
| 23 | ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮುಂಬಯಿ | ಹೊರನಾಡು ಕನ್ನಡಿಗ |
| 24 | ಎಚ್.ಬಿ. ನಂಜೇಗೌಡ, ತುಮಕೂರು | ಕ್ರೀಡೆ |
| 25 | ಉಷಾರಾಣಿ, ಬೆಂಗಳೂರು ನಗರ | ಕ್ರೀಡೆ |
| 26 | ಡಾ|| ಕೆ.ವಿ. ರಾಜು, ಕೋಲಾರ | ಸಂಕೀರ್ಣ |
| 27 | ನಂ. ವೆಂಕೋಬರಾವ್, ಹಾಸನ | ಸಂಕೀರ್ಣ |
| 28 | ಡಾ|| ಕೆ.ಎಸ್. ರಾಜಣ್ಣ, ಮಂಡ್ಯ | ಸಂಕೀರ್ಣ |
| 29 | ವಿ. ಲಕ್ಷ್ಮೀ ನಾರಾಯಣ (ನಿರ್ಮಾಣ್), ಮಂಡ್ಯ | ಸಂಕೀರ್ಣ |
| 30 | ಯುತ್ ಫಾರ್ ಸೇವಾ, ಬೆಂಗಳೂರು ನಗರ | ಸಂಘ-ಸಂಸ್ಥೆ |
| 31 | ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ | ಸಂಘ-ಸಂಸ್ಥೆ |
| 32 | ಬೆಟರ್ ಇಂಡಿಯಾ, ಬೆಂಗಳೂರು | ಸಂಘ-ಸಂಸ್ಥೆ |
| 33 | ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ | ಸಂಘ-ಸಂಸ್ಥೆ |
| 34 | ಧರ್ಮೋತ್ಥಾನ ಟ್ರಸ್ಟ್ ಧರ್ಮಸ್ಥಳ, ದಕ್ಷಿಣ ಕನ್ನಡ | ಸಂಘ-ಸಂಸ್ಥೆ |
| 35 | ಎನ್.ಎಸ್. (ಕುಂದರಗಿ) ಹೆಗಡೆ, ಉತ್ತರ ಕನ್ನಡ | ಸಮಾಜಸೇವೆ |
| 35 | ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು | ಸಮಾಜಸೇವೆ |
| 37 | ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ | ಸಮಾಜಸೇವೆ |
| 38 | ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು | ಸಮಾಜಸೇವೆ |
| 39 | ಡಾ|| ಅಶೋಕ್ ಸೊನ್ನದ್, ಬಾಗಲಕೋಟೆ | ವೈದ್ಯಕೀಯ |
| 40 | ಡಾ|| ಬಿ.ಎಸ್. ಶ್ರೀನಾಥ, ಶಿವಮೊಗ್ಗ | ವೈದ್ಯಕೀಯ |
| 41 | ಡಾ|| ಎ. ನಾಗರತ್ನ, ಬಳ್ಳಾರಿ | ವೈದ್ಯಕೀಯ |
| 42 | ಡಾ|| ವೆಂಕಟಪ್ಪ, ರಾಮನಗರ | ವೈದ್ಯಕೀಯ |
| 43 | ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಬೀದರ್ | ಕೃಷಿ |
| 44 | ಎಸ್ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ | ಕೃಷಿ |
| 45 | ಡಾ|| ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ಮ ಕಲಬುರಗಿ | ಕೃಷಿ |
| 46 | ಅಮರ ನಾರಾಯಣ, ಚಿಕ್ಕಬಳ್ಳಾಪುರ | ಪರಿಸರ |
| 47 | ಎನ್.ಡಿ. ಪಾಟೀಲ್, ವಿಜಯಪುರ | ಪರಿಸರ |
| 48 | ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ | ವಿಜ್ಞಾನ/ತಂತ್ರಜ್ಞಾನ |
| 49 | ಡಾ|| ಚಿಂದಿ ವಾಸುದೇವಪ್ಪ, ಶಿವಮೊಗ್ಗ | ವಿಜ್ಞಾನ/ತಂತ್ರಜ್ಞಾನ |
| 50 | ಡಾ|| ಸಿ.ಎನ್. ಮಂಚೇಗೌಡ, ಬೆಂಗಳೂರು ನಗರ | ಸಹಕಾರ |
| 51 | ಕೆಂಪವ್ವ ಹರಿಜನ, ಬೆಳಗಾವಿ | ಬಯಲಾಟ |
| 52 | ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ | ಬಯಲಾಟ |
| 53 | ಬಂಗಾರ್ ಆಚಾರಿ, ಚಾಮರಾಜನಗರ | ಯಕ್ಷಗಾನ |
| 54 | ಎಂ.ಕೆ. ರಮೇಶ್ ಆಚಾರ್ಯ, ಶಿವಮೊಗ್ಗ | ಯಕ್ಷಗಾನ |
| 55 | ಅನಸೂಯಪ್ಪ, ಹಾಸನ | ರಂಗಭೂಮಿ |
| 56 | ಎಚ್. ಷಡಾಕ್ಷರಪ್ಪ, ದಾವಣಗೆರೆ | ರಂಗಭೂಮಿ |
| 57 | ತಿಪ್ಪೇಸ್ವಾಮಿ, ಚಿತ್ರದುರ್ಗ | ರಂಗಭೂಮಿ |
| 58 | ಬಿ.ಎಸ್. ಬಸವರಾಜ್, ತುಮಕೂರು | ಚಲನಚಿತ್ರ |
| 59 | ಆಪಾಢಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು | ಚಲನಚಿತ್ರ |
| 60 | ಎಂ.ಜೆ. ವಾಚೇದ್ ಮಠ, ಧಾರವಾಡ | ಚಿತ್ರಕಲೆ |
| 61 | ಗುರುರಾಜ ಹೊಸಕೋಟೆ, ಬಾಗಲಕೋಟೆ | ಜಾನಪದ |
| 62 | ಡಾ||ಹಂಪನಹಳ್ಳಿ ತಿಮ್ಮೇಗೌಡ, ಹಾಸನ | ಜಾನಪದ |
| 63 | ಎನ್.ಎಸ್. ಜನಾರ್ಧನ ಮೂರ್ತಿ, ಮೈಸೂರು | ಶಿಲ್ಪಕಲೆ |
| 64 | ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್ | ನೃತ್ಯ |
| 65 | ಕೇಶಪ್ಪ ಶಿಳ್ಳೆಕ್ಯಾತರಮ, ಕೊಪ್ಪಳ | ಜಾನಪದ/ತೊಗಲು ಗೊಂಬೆಯಾಟ |





