Vijayapura News | ಬಸವ ವಿಭೂಷಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

ವಿಜಯಪುರ: ನಗರದ ಬಸವ ಜನ್ಮಭೂಮಿ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಬಸವ ವಿಭೂಷಣ ಪ್ರಶಸ್ತಿಯು ವಿಜಯಪುರ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನರ್ದೇಶಕ ಜಯಪ್ರಕಾಶ ಎಚ್. ಅವರಿಗೆ ಲಭಿಸಿದೆ.

ಜಯಪ್ರಕಾಶ ಅವರ ಆಡಳಿತ ಸೇವೆಯನ್ನು ಗುರುತಿಸಿ ಬಸವ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಸೆಂಬರ ತಿಂಗಳ ಎರಡನೆ ವಾರದಲ್ಲಿ ನಡೆಯುವ ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ವಚನ ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಜಯಪ್ರಕಾಶ ಎಚ್.ಅವರನ್ನು ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಮುರುಗೇಶ ಸಂಗಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Vijayapura News | ಕನ್ನಡದ ಕುಲ ಗುರು ಡಾ: ಸಿದ್ದಲಿಂಗ ಸ್ವಾಮಿಜಿ | ಹಾಸಿಂಪೀರ ವಾಲಿಕಾರ ಅಭಿಪ್ರಾಯ


Share the Post:

ಇತ್ತೀಚಿನ ಸುದ್ದಿಗಳು