Vijayapura News | ದಲಿತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಲು ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲಿಸ್ ಠಾಣೆ ಸ್ಥಾಪನೆಗೆ ಆಗ್ರಹ

ದೌರ್ಜನ್ಯ ತಡೆ image

ವಿಜಯಪುರ : ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾ ಸಮಿತಿ, ವಿಜಯಪುರ (ದೌರ್ಜನ್ಯ ತಡೆ) ವತಿಯಿಂದ ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ.ಕಂಬಾಗಿ ಮಾತನಾಡಿ, ಇತ್ತೀಚಿಗೆ ರಾಜ್ಯದಲ್ಲಿ ದಿನಂಪ್ರತಿ ದಲಿತರ ಮೇಲೆ ದೌರ್ಜನ್ಯಗಳು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ಕೇವಲ ಶೋಷಣೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 1989ರ ಪ್ರಕಾರ ದಲಿತರ ಮೇಲೆ ಆದ ದೌರ್ಜನ್ಯದ ಕುರಿತು ದೌರ್ಜನ್ಯ ಪ್ರಕರಣವನ್ನು ದಾಖಲಿಸಿದರೆ ಅದರ ವಿರುದ್ದವಾಗಿ ಕೌಂಟರ್ ಕೇಸುಗಳನ್ನು ದಾಖಲಾಗುತ್ತಿವೆ.

ಇದನ್ನೂ ಓದಿ: Vijayapura News | ಚೆನ್ನಮ್ಮ ವಿಜಯೋತ್ಯೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ

ದೌರ್ಜನ್ಯ ತಡೆ ಆದ್ದರಿಂದ ಇಂತಹ ಕೌಂಟರ್ ಕೇಸುಗಳ ವಿರುದ್ದ ರಾಜ್ಯದಲ್ಲಿ ತ್ವರಿತ ನ್ಯಾಯಕ್ಕಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ದಲಿತರಿಗೆ ನ್ಯಾಯ ದೊರಕಿಸಿಕೊಡುವಂತೆ ದಿನಾಂಕ : 25-10-2024 ರಂದು ನಡೆಯುವ ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡುವಂತೆ ಆಗ್ರಹಪಡಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಸಂಚಾಲಕಿಯಾದ ಸವಿತಾ ವಗ್ಗರ, ಜಿಲ್ಲಾ ಸಂಘಟನಾ ಸಂಚಾಲಕರಾಧ ಚೇತನ ತೊರವಿ, ಯಲ್ಲಪ್ಪ ಕಾಂಬಳೆ,. ಭೀಮಣ್ಣ ಹಂಚಿನಾಳ, ಭಾಸ್ಕರ ಬೋರಗಿ, ಸುಖದೇವ ಕಟ್ಟಿಮನಿ, ಇನ್ನಿತರರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »