Bagalkote News : ಸಿಇಓ ಕುರೇರ ಅನಿರೀಕ್ಷಿತ ಭೇಟಿ ಪರಿಶೀಲನೆ

ಬಾಗಲಕೋಟೆ: ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಂಗಳವಾರ ವಿವಿಧ ಗ್ರಾಮಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿವಿಧ ಕಾಮಗಾರಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Vijayapura News | ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿವ್ಯಾಂಗರಿಂದ ಪ್ರತಿಭಟನೆ

ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಸೂಳಿಕೇರಿ, ಕೆರಕಲಮಟ್ಟಿ, ಹೂಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂದಕೇರಿ, ಅನವಾಲ, ಕೈನಕಟ್ಟಿ, ಕುಳಗೇರಿ ಕ್ರಾಸ್ ಗ್ರಾಮಗಳಿಗೆ ಭೇಟಿ ನೀಡಿ ನರೇಗಾದಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು. ಅಲ್ಲದೇ ಶಾಲಾ ಆಟದ ಮೈದಾನ, ಕಂಪೌಂಡ್, ಶೌಚಾಲಯ, ಚರಂಡಿ, ರಸ್ತೆ ಸುದಾರಣೆ ಹಾಗೂ ಗ್ರಾಮ ಪಂಚಾಯತ ಕಟ್ಟಡ ಪರಿಶೀಲಿಸಿದರು.

ಇದನ್ನೂ ಓದಿ: Bengaluru | ಜಮ್ಮು-ಕಾಶ್ಮೀರ ಚುನಾವಣಾ ಫಲಿತಾಂಶ: ಬಿಜೆಪಿ ಗೆಲುವಿಗೆ ಕಪಾಳ ಮೋಕ್ಷ, ಸಚಿವ ಪ್ರಿಯಾಂಕ್ ಖರ್ಗೆ ಉಲ್ಲೇಖ

ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಬಾದಾಮಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಸಹಾಯಕ ನಿರ್ದೇಶಕ ಸತೀಶ ಮಾಗೊಂಡ ಸೇರಿದಂತೆ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಬಿ.ಎಫ್.ಟಿ ಇದ್ದರು.


Share the Post:

ಇತ್ತೀಚಿನ ಸುದ್ದಿಗಳು