ಬೀದರ : ಗಡಿನಾಡು ಹಾಗೂ ಹೊರನಾಡು ಪ್ರದೇಶಗಳಲ್ಲಿ ತೆಲಗಾಂಣ ರಾಜ್ಯದಲ್ಲಿ ಕನ್ನಡ ಮಾಧ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಗುವ ಮೂಲ ಸೌಕರ್ಯವನ್ನು ಒದಗಿಸಲು ಕಾನೂನು ಪ್ರಕಾರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಕನ್ನಡಿಗರ ಜೀವನ ಮತ್ತು ಕನ್ನಡ ಸ್ಥಿತಿಗತಿಯನ್ನು ಜಿಲ್ಲಾಡಳಿತ ವತಿಯಿಂದ ವರದಿ ಸಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆಯವರು ತೆಲಗಾಂಣ ರಾಜ್ಯದ ಕನ್ನಡ ಸಂಘಟನೆಗಳಾದ ಓಂ ಸಾಯಿ ರೂರಲ್ ಡೆವಲಮೆಂಟ್ ಸೂಸ್ಯಟಿ (ರಿ) ಹಾಗೂ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದ್ರಾಬಾದ (ರಿ) ಅವರ ಮನವಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸ್ವೀಕರಿಸಿ ಭರವಸೆ ನೀಡಿದರು. ಈ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪ್ರಯತ್ನಿಸಲಾಗುವುದು ಎಂದರು . ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡ ಭಾಷಿಕರು ಹಲವು ದಶಕಗಳಿಂದ ನೆಲೆಸಿದ್ದು, ತಮ್ಮ ಕನ್ನಡ ಭಾಷೆ, ಸಂಸ್ಕøತಿ ಮತ್ತು ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದಾಗ್ಯೂ ಇಂದಿಗೂ ಈ ಭಾಗದ ಕನ್ನಡಿಗರು ಶಿಕ್ಷಣ, ಉದ್ಯೋಗ ಹಾಗೂ ಆಡಳಿತಾತ್ಮಕ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿಖರವಾದ ಮಾಹಿತಿ ಸಂಗ್ರಹಿಸಿ ಕರ್ನಾಟಕ ಸರ್ಕಾರ ಗಮನಕ್ಕೆ ತರಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ತೆಲಗಾಂಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣ ಖೇಡ ತಾಲೂಕಿನಲ್ಲಿರುವ ಕಾರಾಮುಂಗಿ, ಔಧತಪುರ, ಯಸಗಿ , ಗೌಡಗಾಂವ, ಶಹಾಪೂರ, ಮೂರ್ಗಿ, ಶಿಖರಖಾನ್, ಗೂಂದೆಗಾಂವ, ರತ್ನಾಪೂರ, ಮಂಗಲಗಿ, ಮೈನಳ್ಳಿ, ಹೀಗೆ ಅನೇಕ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಜೀವಂತವಾಗಿವೆ ಈ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಕರ್ನಾಟಕ ಸರ್ಕಾರ ಮಾಡಬೇಕೆಂದು ಇಂದು ಭೇಟಿ ಮಾಡಿದ ನಿಯೋಗ ಮನವಿ ಮಾಡಿತು.
ಉನ್ನತ ಶಿಕ್ಷಣದಲ್ಲಿ ಕನ್ನಡಿಗರಿಗೆ ಸಿಗುವ ಅವಕಾಶಗಳ ಕೊರತೆ, ಗಡಿನಾಡ ಕನ್ನಡಿಗರಿಗೆ ನ್ಯಾಯಸಮ್ಮತ ಉದ್ಯೋಗಾವಕಾಶಗಳ ಲಭ್ಯತೆ ಕಡಿಮೆ ಇರುವುದರಿಂದ ಹಾಗೂ ಸಾಂವಿಧಾನಿಕವಾಗಿ ಸಾರ್ವಜನಿಕ ಸೇವೆಗಳನ್ನು ಪಡೆಯುವಲ್ಲಿ ಯುವಜನತೆಗೆ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ ಇದನ್ನು ಸರಿಪಡಿಸಲು ಸರ್ಕಾರ ಶೀಘ್ರವೇ ಸಭೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘದವತಿಯಿಂದ ಮನವಿ ಮಾಡಲಾಯಿತು. ಗಡಿನಾಡು/ಹೊರನಾಡು ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಅವಕಾಶ, ಉನ್ನತ ವ್ಯಾಸಂಗಗಳಲ್ಲಿ ಅವಕಾಶ ಹಾಗೂ ಉದ್ಯೋಗಗಳಲ್ಲಿ ಅವಕಾಶ ಹಾಗೂ ಆದ್ಯತೆ ನೀಡುವಂತೆ ಹಾಗೂ ಈ ಕುರಿತು ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಪತ್ರದಲ್ಲಿ ವಿನಂತಿಸಿಕೊಳ್ಳಲಾಯಿತು. ನಿಯೋಗದಲ್ಲಿ ಡಾ.ಜಗನ್ನಾಥ ಹೆಬ್ಬಾಳೆ, ಓಂ ಸಾಯಿ ರೂರಲ್ ಡೆವಲಮೆಂಟ್ ಸೂಸ್ಯಟಿ ಅಧ್ಯಕ್ಷರಾದ ಶಿವಶರಣಪ್ಪ ಗಣೇಶಪೂರ್ ಮತ್ತು ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದ್ರಾಬಾದ ಅಧ್ಯಕ್ಷರಾದ ಧರ್ಮೆಂದ್ರ ಪೂಜಾರಿ ಬಗದೂರಿ, ಡಾ, ರಾಜಕುಮಾರ ಹೆಬ್ಬಾಳೆ, ನಾಗಪ್ಪಾ ಸಾಮಾಜಿಕ ಸಾಂಸ್ಕøತರಿಕ ಮತ್ತು ಸೇವಾ ಸಂಸ್ಥೆ ಅಧ್ಯಕ್ಷರಾದ ಭೀಮರಾವ ಬೀದರಕರ್, ಬಸವ ಬೆಳಕು ಸಂಪಾದಕರಾದ ರಾಜಕುಮಾರ ಮಡಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





