ವಿಜಯಪುರ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಯುವಕನೋರ್ವ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ವಿಜಯಪುರ ತಾಲ್ಲೂಕಿನ ಐನಾಪುರ ಗ್ರಾಮದ ಯುವಕ ದೇವೇಂದ್ರ ಹಡಲಗಿ ಪತ್ರ ಬರೆದಿದ್ದಾನೆ. ಇನ್ನು ಮುಖ್ಯಮಂತ್ರಿಯವರೇ ಕಳೆದ 40 ವರ್ಷದ ನಮ್ಮ ಸಮುದಾಯದ ಒಳಮೀಸಲಾತಿ ಹೋರಾಟದ ಬೇಡಿಕೆಯನ್ನು ಶೀಘ್ರವೇ ತಾವು ಇತಿಹಾಸ ನಿರ್ಮಿಸುತ್ತೀರಿ ಎಂಬ ನಂಬಿಕೆಯಿಂದ ನನ್ನ ರಕ್ತದ ಮೂಲಕ ಮನವಿ ಮಾಡುತ್ತೇನೆ ಎಂದು ಪತ್ರ ಬರೆದಿದ್ದಾನೆ. ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮಹಾನ್ ರಕ್ತದ ಮನವಿ.. ಒಳ ಮೀಸಲಾತಿ ಜಾರಿ ಮಾಡಿ (Reservation) ನೊಂದ ಮಾದಿಗರಿಗೆ ಸಾಮಾಜಿಕ ನ್ಯಾಯ ಕೊಡಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಪೋಸ್ಟ್ ಮುಖಾಂತರ ಮನವಿ ಕಳಿಸಿದ್ದಾರೆ.
ಇದನ್ನೂ ಓದಿ: Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ
ಈ ಸಂದರ್ಭದಲ್ಲಿ ವಿಠ್ಠಲ ನಡುವಿನಕೇರಿ, ಸದಾನಂದ ಗುನ್ನಾಪುರ, ಸಿದ್ದ ಸಿಂದಗಿ, ಲೊಟಗೇರಿ ನ್ಯಾಯವಾದಿಗಳು ಭೀಮರಾಯ ಹುಲ್ಲೂರ, ಹಣಮಂತ ಬಿರಾದಾರ ಇತರರು ಉಪಸ್ಥಿತರಿದ್ದರು.Reservation