Vijayapura News | ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ | ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿ- ಯಶಸ್ವಿಗೆ ಮನವಿ

ಹಸರೀಕರಣ-ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ-2024 vrukshathon 2024 ಹಮ್ಮಿಕೊಂಡಿದೆ.

0
11

ವಿಜಯಪುರ: ಹಸರೀಕರಣ-ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ-2024 vrukshathon 2024 ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳುವ ವೃಕ್ಷೋತ್ಥಾನ ಕಾರ್ಯಕ್ರಮದ ಕುರಿತು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಪಾರಂಪರಿಕ ಓಟದಲ್ಲಿ ಭಾಗವಹಿಸಲು ಈಗಾಗಲೇ ಹಲವರು ಆನ್‍ಲೈನ್ ಮೂಲಕ ನೊಂದಾಯಿಸಿಕೊಂಡಿದ್ದು, ನೊಂದಣಿಗೆ ನವೆಂಬರ್ 30 ಕೊನೆಯ ದಿನವಾಗಿದ್ದು, ಕ್ರೀಡಾಸಕ್ತರು ಕೂಡಲೇ ತಮ್ಮ ಹೆಸರನ್ನು www.vrukshathon.co.in ರಲ್ಲಿ ನೊಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Vijayapura News | ತೊಗರಿ ಬೆಳೆ ಹೂ-ಕಾಯಿ ಉದುರುವ ಸಮಸ್ಯೆ | ರೈತರು ಬೆಳೆ ವಿಮೆ ನೊಂದಣಿ ಮಾಡಿಸಿ.

vrukshathon 2024 ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆ ಜಾಗೃತಿ ಹಾಗೂ ಜಲ. ವೃಕ್ಷ, ಶಿಕ್ಷಣ ಎಂಬ ಧ್ಯೇಯ ವಾಕ್ಯದೊಂದಿಗೆ ಹಸಿರು ಪರಿಸರ ಬೆಳೆಸುವ ಜೊತೆಗೆ ಅರಣ್ಯವನ್ನು ಕಾಪಾಡುವ ವೃಕ್ತೋತ್ಥಾನ ಪಾರಂಪರಿಕ ಓಟದಲ್ಲಿ ಅಂದಾಜು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿನ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳ ನೊಂದಣಿಗೆ ನೊಂದಣಿಗೆ ಕ್ರಮ ವಹಿಸಬೇಕು. ಈ ವೃಕ್ಷೋತ್ಥಾನÀದಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸಲು ಹಾಗೂ ಶತಮಾನದ ಸಂತರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗೌರವಾರ್ಥ ಆಯೋಜಿಸಲಾಗಿರುವ ವಿಜಯಪುರ ವೃಕ್ಷೋತ್ಥಾನ ಹೆರಿಟೇಜ್ ರನ್-2024 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Vijayapura News | ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣ ತೆರವು ಕಾರ್ಯಾಚರಣೆ

ಈ ಪಾರಂಪರಿಕ ಓಟ ಅಭಿಯಾನ ಕಳೆದ 2016ರಿಂದ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಂಡು 1.50 ಕೋಟಿ ಸಸಿಗಳನ್ನು ಬೆಳೆಸುವುದು, ರಕ್ಷಾಬಂಧನದ ದಿನ ವೃಕ್ಷಬಂಧನ, ಹುಟ್ಟು ಹಬ್ಬದ ದಿನ ಗಿಡವನ್ನು ದಾನವಾಗಿ ನೀಡುವುದು, ಅಧಿಕಾರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹೂಗುಚ್ಛ, ಶಾಲುಗಳನ್ನು ನೀಡಿ ಅಭಿನಂದಿಸುವ ಬದಲಿಗೆ ಒಂದೊಂದು ಸಸಿಗಳನ್ನು ನೀಡುವ ಮೂಲಕ ಉತ್ತೇಜನ ಕಾರ್ಯ ಮಾಡಲಾಗುತ್ತಿದೆ.

12 ವರ್ಷಗಳು ಮತ್ತು ಮೇಲ್ಪಟ್ಟವರಿಗೆ 5 ಕಿಮೀ., 18 ವರ್ಷಗಳು ಮತ್ತು ಮೇಲ್ಪಟ್ಟವರಿಗೆ 10 ಕಿ.ಮೀ., 18 ವರ್ಷಗಳು ಮತ್ತು ಮೇಲ್ಪಟ್ಟವರು 21.1ಕಿ.ಮೀ. ಓಟಕ್ಕೆ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಬಹುಮಾನ ಒದಗಿಸಲಾಗುತ್ತದೆ. ಓಟಗಾರರಿಗೆ ಒಂದು ಟೀ-ಶರ್ಟ್ ಓಟದಲ್ಲಿ ಭಾಗವಹಿಸುವರಿಗೆ ಫಿಜಿಯೋಥೆರಪಿ ಟ್ರಿಟ್ಮೆಂಟ್, ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹಿಸಲು ಕಲ್ಚರಲ್ ವಾದ್ಯಗಳು, ಒಂದು ದಿನ ಮುಂಚೆ ಓಟದ ಬಗ್ಗೆ ತರಬೇತಿ ಸಹ ನೀಡಲಾಗುವುದು. ಪ್ರತಿ ತಿಂಗಳು ಒಂದು ಐತಿಹಾಸಿಕ ಸ್ಮಾರಕವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಮಿತಿಯ ಮುರುಗೇಶ ಪಟ್ಟಣಶೆಟ್ಟಿ, ಡಾ. ಮಲ್ಲಿಕಾರ್ಜುನ ಯಲಗೊಂಡ ಹಾಗೂ ವೀರೆಂದ್ರ ಗುಚ್ಚೆಟ್ಟಿ ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Vijayapura News | ಬಾಲಮಂದಿರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ

ಇದೇ ಸಂದರ್ಭದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟದ-2024 ಪೋಸ್ಟರ್‍ನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ವಿಜಯ ಕುಮಾರ ಅಜೂರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here