ವಿಜಯಪುರ: An invitation to poems ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವಿಜಯಪುರ ನಗರ ಘಟಕ ಜಿಲ್ಲಾಮಟ್ಟದ ಕವಿ ಸಮ್ಮೇಳನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಮುರುಗೇಶ ಸಂಗಮ ಅವರು ಬರೆದ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ ಕೃತಿ ಕುರಿತು ಗ್ರಂಥಾವಲೋಕನ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಜರುಗಲಿದೆ.
ಆಸಕ್ತ ಕವಿಗಳು ಕನ್ನಡ ನಾಡು, ನುಡಿ ಬಗ್ಗೆ ಬರೆದ 20 ಸಾಲುಗಳ ಮಿತಿಯುಳ್ಳ ಒಂದು ಕವಿತೆಯನ್ನು ನ.30 ರ ಒಳಗೆ ಶಿವಾಜಿ ಮೋರೆ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವಿಜಯಪುರ ನಗರ ಘಟಕ, ರಾಮೇಶ್ವರ ದೇವಸ್ಥಾನ ಹತ್ತಿರ, ಮನಗೂಳಿ ತಾ. ಬಸವನಬಾಗೇವಾಡಿ ವಿಳಾಸಕ್ಕೆ ಕಳುಹಿಸಬೇಕು. An invitation to poems.
ಮಾಹಿತಿಗೆ ಮೊ. 9741879493 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.