Vijayapura News | ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿವ್ಯಾಂಗರಿಂದ ಪ್ರತಿಭಟನೆ

ಸ್ವಿಚ್ ಥೆರಪಿ ಒಂದು ಗಂಟೆಗೆ ರೂ. 500/- ರಿಂದ ರೂ.1000/- ಅತ್ಯಗತ್ಯ ಔಷಧಿಗಳ ಬೆಲೆ ರೂ.10,000 ನಿಂದ ಲಕ್ಷ ರೂಗಳವರೆಗೆ ಇತ್ಯಾದಿ ಬಡ ತಂದೆ ತಾಯಿಗಳು ಆದಾಯವಿಲ್ಲದ ಅಂಗವಿಕಲರು ಇವುಗಳನ್ನು ಹೇಗೆ ಭರಿಸಬೇಕು ಎಂದು ಮಾತನಾಡಿದರು. - ರಂಗರಪ್ಪ ದಾಸರ

0
47
ವಿಜಯಪುರ: ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ವಿಜಯಪುರ ಸಮಿತಿ ಹಾಗೂ ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಸಂಯೋಗದೊಂದಿಗೆ ಜಿಲ್ಲಾಧ್ಯಕ್ಷರಾದ ವಿನೋದ ಖೇಡ ಇವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗವಿಕಲರಿಗೆ Divyanga ಕಡೆಗಣಿಸಿದ ಕುರಿತು ಮತ್ತು ವಿವಿಧ ಬೇಡಿಕೆಗಳಗೋಸ್ಕರ ಇಂದು ನಗರದ ಡಾ| ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರಂಗರಪ್ಪ ದಾಸರ ಇವರು ಮತಾನಾಡಿ ಅಂಗವಿಕಲರ ಬದುಕು ಹಲವು ವರ್ಷಗಳಿಂದ ಮತ್ತಷ್ಟು ಇನ್ನಷ್ಟು ಕಂಗೆಡುತ್ತಿದೆ. ಅವರ ತಂದೆ ತಾಯಂದಿರಿಗೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ. ಕಾರಣ ಜೀವನ ವೆಚ್ಚದ ನಿರಂತರ ಏರಿಕೆ ಆಹಾರ ವಸ್ತುಗಳು ಇತರೆ ಜೀವನಾವಶ್ಯಕ ವಸ್ತುಗಳು ಮಾತ್ರವಲ್ಲದೆ ಅಂಗವಿಕಲರ ವಿಶೇಷ ಅಗತ್ಯಗಳಾದ ಫಿಜಿಯೋಥೆರಪಿ. ಸ್ವಿಚ್ ಥೆರಪಿ ಒಂದು ಗಂಟೆಗೆ ರೂ. 500/- ರಿಂದ ರೂ.1000/- ಅತ್ಯಗತ್ಯ ಔಷಧಿಗಳ ಬೆಲೆ ರೂ.10,000 ನಿಂದ ಲಕ್ಷ ರೂಗಳವರೆಗೆ ಇತ್ಯಾದಿ ಬಡ ತಂದೆ ತಾಯಿಗಳು ಆದಾಯವಿಲ್ಲದ ಅಂಗವಿಕಲರು ಇವುಗಳನ್ನು ಹೇಗೆ ಭರಿಸಬೇಕು ಎಂದು ಮಾತನಾಡಿದರು.
ಜಿಲ್ಲಾಧ್ಯಕ್ಷರಾದ ವಿನೋದ ಎಂ. ಖೇಡ ಅವರ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್ 2014-15ರಲ್ಲಿ 18 ಲಕ್ಷ ಕೋಟಿ ಇದ್ದದ್ದು 2024-25ರಲ್ಲಿ 48 ಲಕ್ಷ ಕೋಟಿಗೇರಿದೆ. ಆದರೆ ಅಂಗವಿಕಲರ Divyanga ಮಾಶಾಸನಕ್ಕಾಗಿ ಕೇಂದ್ರ ಸರಕಾರ ನೀಡಿಕೆ ಕೇವಲ ರೂ.300/-ರಲ್ಲೇ ಉಳಿದಿದೆ. ಈ ಹತ್ತು ಹರ್ಷದಲ್ಲಿ ಎಷ್ಟೊಂದು ಬೆಲೆ ಏರಿಕೆಯಾಗಿದೆ. ಎಂಬುದು ಕೇಂದ್ರ ಸರಕಾರಕ್ಕೆ ಅರಿವಿಲ್ಲವೇ? ಅಂಗವಿಕಲರನ್ನು ದಿವ್ಯಾಂಗರೆಂದು ಕರೆಯುವ ಕೇಂದ್ರ ಸರಕಾರಕ್ಕೆ ಅವರಿಗೆ ಇಷ್ಟು ಸಣ್ಣ ಮೊತ್ತ ನೀಡಲು ನಾಚಿಕೆಯಾದರೂ ಆಗುವುದಿಲ್ಲವೇ? ಕೇಂದ್ರ ಸರಕಾರ ತಿಂಗಳಿಗೆ ಕನಿಷ್ಟ ರೂ.5000/-ನೀಡಬೇಕು.
ಇನ್ನು ರಾಜ್ಯ ಸರಕಾರದ ವಿಷಯ ಹತ್ತು ವರ್ಷಗಳಲ್ಲಿ ಮಾಶಾಸನಕ್ಕೆ ತನ್ನ ಪಾಲನ್ನು ರೂ.300 ರಿಂದ 500 ರಕ್ಕೆ (ಒಟ್ಟು ರೂ.800)ಶೇ 75 ರ ಅಂಗವಿಕಲತೆಯುಳ್ಳವರಿಗೆ ರೂ.700/-(ಒ್ಟು 1400 ರೂ)ಗೆ ಏರಿಸಿ ಅಂಗವಿಕಲರಿಗೆ Divyanga ಒಟ್ಟಾರೆ ಮಸಾಶನ ರೂ.10,000/-ಗಳನ್ನಾದರೂ ನೀಡಬೇಕು ಇದಕ್ಕನುಗುಣವಾಗಿ ವಿ.ಆರ್.ಡಬ್ಲ್ಯೂ.ಎಂ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳ ವೇತನ ಏರಿಕೆಯಾಗಬೇಕು. ಎಂದು ಒತ್ತಾಯ ಮಾಡಿದರು.
ಜಿಲ್ಲಾ ಉಪಾದ್ಯಕ್ಷರಾದ ಮಲ್ಲಿಕಾರ್ಜುನ ಎಂ ಉಮರಾಣಿಯವರು ಮತಾನಾಡಿ ಸರಕಾರದ ವಿವಿಧ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ಅಂಗವಿಕಲರನ್ನು ನೇಮಕ ಮಾಡಿಕೊಳ್ಳುಬೇಕೆಂದು ಒತ್ತಾಯ ಮಾಡಿದರು.
ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಅಶೋಕ ಅ ವಾಲಿಕಾರ ಮಾತನಾಡಿ ಅಂಗವಿಕಲರಿಗಾ ಕೆಲಸ ಮಾಡುತ್ತಿರುವ ಪುನರ್ವಸತಿ ಕಾರ್ಯಕರ್ತೆಯ ವೇತನ ಕನಿಷ್ಟ ವೇತನ ಜಾರಿಗೆಯಾಗಬೇಕೆಂದು ಒತ್ತಾಯ ಮಾಡಿದರು.
 ಪರಶುರಾಮ ಗುನ್ನಾಪೂರ ಮಾತನಾಡಿ ಚುನಾವಣಿಯ ಗೆಲುವಿಗಾಗಿ ಕೆಲ ಜನ ವಿಭಾಗಗಳಿಗೆ ಸನ್ಮಾನ್ ಅಥವಾ ಗ್ಯಾರಂಟಿಗಳನ್ನು ನೀಡುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ಸಮುದಾಯಗಳಿಗಿಂತ ಸಂಕಷ್ಟದಲ್ಲಿರುವ ಅಂಗವಿಕಲರು ಈ ಸರಕಾರಗಳ ಗಮನಕ್ಕೆ ಬರುವುದಿಲ್ಲ. ಕೋವಿಡ್‍ನಂತಹ ಸಂಕಟದ ಸಮಯದಲ್ಲಿಯೂ ಇವುಗಳಿಲ್ಲದೇ ಅಂಗವಿಕಲರಿಗೆ ಉದ್ಯೋಗಾವಕಾಶ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ, ಆರೋಗ್ಯ ಶಿಕ್ಷಣ ಸೌಲಭ್ಯ,  ಪಡಿತರ ನೀಡಿಕೆ, ಅಂಗವಿಕಲ ಸ್ನೇಹಿ ವಾತಾವರಣಗಳು ಮೊದಲಾದ ಹಲವು ಅಗತ್ಯಗಳಿಗೆ ಕೇಂದ್ರ ರಾಜ್ಯ ಸರಕಾರಗಳು ನೀಡುವ ಬಜೆಟ್ ಬಹಳ ಕಡಿಮೆ. ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಂ.ಆರ್.ಡಬ್ಲ್ಯೂ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎಸ್.ಕೆ.ಘಾಟೆ ಮಾತನಾಡಿ ಈಗಾಗಲೇ ನಿರ್ಧಾರ ಮಾಡಲಾಗಿರುವ ಶಾಸಕರು,ಸಂಸದರುಗಳು ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿ ವರ್ಷ ರೂ.20 ಲಕ್ಷ ಗಳಕ್ಕೆ ಗ್ರಾಮ ಪಂಚಾಯತ್‍ಯಿಂದ ಜಿಲ್ಲಾ ಪಂಚಾಯತ ಸಂಸ್ಥೆಗಳ ಬಜೆಟನಲ್ಲಿ ಶೇ.5ರಷ್ಟು ವೆಚ್ಚ, ಅಂಗವಿಕಲರ ಹಕ್ಕುಗಳ ಕಾಯಿದೆ ಜಾರಿಗೆ ವಿಶೇಷ ಅನುದಾನ ಇತ್ಯಾಧಿ ಹಕ್ಕುಗಳನ್ನು ಹೀಗೆ ಅಂಗವಿಕಲರ ಜೀವನ ಪರಿಸ್ಥಿಗೆ ಗಂಭೀರವಾಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಂಗವಿಕಲರ ನಿರ್ಲಕ್ಷ್ಯ ಮಿತಿ ಮೀರಿದೆ. ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಿಮಿಷ ಆಚಾರ್ಯ, ಅಂಬಣ್ಣ ಗುನ್ನಾಪೂರ, ಶಂಕ್ರೆಮ್ಮ ಕೋರಿ, ನಿಂಗರಾಜ ಬಿಸನಾಳ, ವಿಠ್ಠಲ ಖರಜಗಿ, ಮುತ್ತು ಸಾತಿಹಾಳ, ರವಿ ರಾಠೋಡ, ಪರಶುರಾಮ ಭೋಸಲೆ, ಶಿವಲಿಲಾ ಬಿರಾದಾರ, ಮೀನಾಕ್ಷಿ ಶಿಂಧೆ ಸಂತೋಷ ಕಲ್ಲಗುಡಿ, ಮಲ್ಲಿಕಾರ್ಜುನ ಲಂಗ್ಗೂಟ್ಟಿ, ಮಹೇಶ ತೋಟದ, ಯಲ್ಲಮ್ಮ ಜಾಧವ ಸಂತೋಷ ಬಬಮ್ಮನಳ್ಳಿ, ಮಲ್ಲಿಕಾರ್ಜುನ ಬಿರಾದಾರ, ರಾಜು ತಡಲಗಿ, ರಾಜು, ಕುಮಟಗಿ ಸಬಿಯಾ ಮರ್ತೂರ, ಇನ್ನೂ ನೂರಾರು ಅಂಗವಿಕಲರ ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here