ಕೋಳಿ ಮಾಂಸ-ಮೊಟ್ಟೆ ಸೇವನೆಗೆ ಯಾವುದೇ ಆತಂಕ ಬೇಡ

0
213

ವಿಜಯಪುರ ಮಾ 11: ಇತ್ತಿಚಿಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕು (ಕೋವಿಡ್-19) ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ತಪ್ಪು ಸಂದೇಶದಿಂದ ಕೂಡಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ಸುರಕ್ಷಿತ ಆಹಾರವಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿದೇಶಕರಾದ ಡಾ||ಪ್ರಾಣೇಶ.ಆರ್.ಜಹಾಗಿರದಾರ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಕೋಳಿಗಳಿಂದ ಹರಡುತ್ತದೆ ಎಂದು ತಪ್ಪು ಸಂದೇಶಗಳು ಹಬ್ಬಿದ್ದು, ಅಂತಹ ವದಂತಿಗಳಿಗೆ ಯಾವುದೇ ವೈದ್ಯಕೀಯ ಆಧಾರವಿಲ್ಲ. ಭಾರತದಲ್ಲಿ ಕೋಳಿಗಳಿಗೆ ಕೊರೊನಾ ವೈರಸ್ ಸೊಂಕು ಕಾಣಿಸಿಕೊಂಡ ಬಗ್ಗೆ ಯಾವುದೇ ವರದಿ ಕಂಡು ಬಂದಿಲ್ಲ ಹೀಗಾಗಿ ಸೊಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಅದರಂತೆ ಸೊಂಕು ಪೀಡಿತ ವ್ಯಕ್ತಿಯಿಂದ ಇತರರಿಗೆ ಕೊರೊನಾ ವೈರಸ್ ಸೊಂಕು ಹರಡುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶಗಳಿಂದಾಗಿ ಕೋಳಿ ಸಾಕಾಣಿಕೆದಾರರಿಗೆ ತನ್ಮೂಲಕ ಕುಕ್ಕುಟ ಉದ್ಯಮಕ್ಕೆ ಅಪಾರವಾದ ಆರ್ಥಿಕ ಹಾನಿ ಉಂಟಾಗುತ್ತದೆ. 100 ಡಿಗ್ರಿ.ಸೆ ಉಷ್ಣತೆಯಲ್ಲಿ ಕೋಳಿಮಾಂಸ ಬೇಯಿಸುವದರಿಂದ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಕಾರಣ ಕೋಳಿ ಸಾಕಾಣಿಕೆದಾರರು ಹಾಗೂ ಸಾರ್ವಜನಿಕರು ಕೋಳಿಗಳಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಆತಂಕಕ್ಕೆ ಒಳಗಾಗಬಾರದು. ಕೋಳಿಮಾಂಸ ಮತ್ತು ಮೊಟ್ಟೆ ಉತ್ತಮ ಪ್ರೋಟಿನ್‍ಯುಕ್ತ ಎಲ್ಲ ಪೋಷಕಾಂಶಗಳನ್ನೊಳಗೊಂಡ ಆಹಾರವಾಗಿದ್ದು, ಚೆನ್ನಾಗಿ ಬೇಯಿಸಿ ಸೇವಿಸಬೇಕು ಎಂದು ಸಾರ್ವಜನಿಕರಿಗೆ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ambedkar image

LEAVE A REPLY

Please enter your comment!
Please enter your name here