ವಿಜಯಪುರ : ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಿಸಿದ ಕಂಪನಿಯವರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲು ಅಖಂಡ ರೈತ ಸಂಘ ಒತ್ತಾಯಿಸಿ ಕರ್ನಾಟಕ ನ್ಯಾಯಮೂರ್ತಿ ಲೋಕಾಯುಕ್ತರಾದ ಬಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಕಳಪೆ ಸ್ಪ್ರಿಂಕ್ಲರ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಇಲಾಖೆಯವರ ಮೂಲಕ ರಾಜ್ಯಾದ್ಯಂತ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್ ಗಳು ಕಳಪೆ ಮಟ್ಟದಿಂದ ಕೂಡಿದ್ದು ಕಂಪನಿಯವರು ರಾಜ್ಯದ ರೈತರನ್ನು ವಂಚಿಸುತ್ತಿದ್ದಾರೆ. ಈ ಹಿಂದೆ ಅಂದರೆ 2023 ಜುಲೈ ತಿಂಗಳಲ್ಲಿ ಕಳಪೆ ಮಟ್ಟದ ಸ್ಪಿಂಕ್ಲರ್ ಪೈಪ್ ಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರದರ್ಶಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿಗಳು ಸ್ಪಿಂಕ್ಲರ್ ಪೈಪ್ ಗಳನ್ನು ಸಿಪೆಟ್ (ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ಸ್ ಇಂಜನಿಯರಿಂಗ್ & ಟೆಕ್ನಾಲಜಿ ) ಸಂಸ್ಥೆಗೆ ಗುಣಮಟ್ಟ ಪರೀಕ್ಷಿಸಲು ಲ್ಯಾಪ್‌ಗೆ ಕಳುಹಿಸಿ ಕೊಟ್ಟಿದ್ದಾರೆ. 1 ವರ್ಷ ಸಮಿಪಿಸಿದರು ಇಲ್ಲಿಯವರೆಗೂ ಯಾವುದೇ ವರದಿ ಬಂದಿಲ್ಲ.
ಕೃಷಿ ಇಲಾಖೆ ಅಧಿಕಾರಿಗಳು ಸ್ಪಿಂಕ್ಲರ್ ಪೈಪ್ ಗಳ ಕಳಪೆ ಗುಣಮಟ್ಟದ ಒಪ್ಪಿಕೊಂಡು ಈ ರೀತಿ ಮುಂದಿನ ದಿನಮಾನಗಳಲ್ಲಿ ಕಳಪೆ ತಯಾರಿಕೆ ಆಗದಂತೆ ನೋಡಿಕೊಳ್ಳಲಾಗುವದು ಮತ್ತು ಮುಂದೆ ಸರಬರಾಜಾಗುವ ಸ್ಪಿಂಕ್ಲರ್ ಪೈಪ್ ಗಳು ಗುಣಮಟ್ಟದಾಗಿರುವ ರೀತಿಯಲ್ಲಿ ಸರಬರಾಜು ಮಾಡುವಂತೆ ಕ್ರಮ ವಹಿಸಲಾಗುವದೆಂದು ಭರವಸೆ ನೀಡಿದ್ದರು. ಆದರೆ ಮತ್ತೆ ಸ್ಪಿಂಕ್ಲರ್ ಪೈಪ್ ಗಳು ವಿವಿಧ ಕಂಪನಿಗಳಿAದ ತಯಾರಿಸಿ ಕಳುಹಿಸಿದ್ದಾರೆ. ಇವುಗಳು ಕೂಡಾ ಕಳಪೆ ಮಟ್ಟದ್ದಾಗಿವೆ. ಒಮ್ಮೆ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಿದರೆ ಪುನಃ 7 ವರ್ಷಗಳವರೆಗೆ ಸ್ಪಿಂಕ್ಲರ್ ಪೈಪ್ ಗಳನ್ನು ಸರ್ಕಾರ ವಿತರಿಸುವದಿಲ್ಲ. ಈಗ ರೈತರಿಗೆ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್ ಗಳು 6 ತಿಂಗಳು ಹೆಚ್ಚೆಂದರೆ 1 ವರ್ಷಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ.
ಇದನ್ನೂ ಓದಿ: Dreams Comes True: ಮಕ್ಕಳ ಪ್ರತಿಭೆ ಗುರುತಿಸಿ.
ರೈತರು ಹೊರಗಡೆ ಮಾರುಕಟ್ಟೆಯಲ್ಲಿ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಕಳಪೆ ಸ್ಪಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ಕೊಡುತ್ತಿರುವ ಕಂಪನಿಗಳಿಂದ ರೈತರಿಗೆ ವಂಚನೆಯಾಗುತ್ತಿದೆ. ಇತ್ತೀಚ್ಚಿಗೆ ಸ್ಪಿಂಕ್ಲರ್ ಪೈಪ್ ಗಳ ಕಂಪನಿಗಳು ನಾಯಿಕೊಡೆದಂತೆ ಬೆಳೆಯುತ್ತಿವೆ. ಹೊಸದಾಗಿ ಹೆಚ್ಚು ಕಂಪನಿಗಳು ಹುಟ್ಟಿಕೊಳ್ಳುತ್ತಿರುವದರಿಂದ ಕಳಪೆ ಮಟ್ಟದ ಸ್ಪಿಂಕ್ಲರ್ ಪೈಪ್ ಗಳನ್ನು ಸಬ್ಸಿಡಿ ರೂಪದಲ್ಲಿ ಅನ್ನದಾತರಿಗೆ ಒದಗಿಸಲು ಕಂಪನಿಗಳು ವ್ಯವಸ್ಥಿತ ರೀತಿಯಲ್ಲಿ ಲೂಟಿ ಮಾಡಲು ಮುಂದಾಗಿವೆ. ಇದು ಕೇವಲ ವಿಜಯಪುರ ಜಿಲ್ಲೆಗೆ ಸೀಮಿತವಲ್ಲ ಇದು ರಾಜ್ಯಾದ್ಯಂತ ಕಳಪೆ ಮಟ್ಟದ್ದಾಗಿವೆ. ಮತ್ತು ಸ್ಪಿಂಕ್ಲರ್ ಪೈವ್ ಗಳ ವಿತರಣೆ ರೈತ ಸಂಪರ್ಕ ಕೇಂದ್ರದಿಂದ ಕೃಷಿ ಇಲಾಖೆಯವರು ನೇರವಾಗಿ ರೈತರಿಗೆ ರೈತರು ತಂದ ವಾಹನಗಳಲ್ಲಿ ಸರಬರಾಜು ಮಾಡುವುದು ಕಾನೂನು ಬಾಹೀರವಾಗಿದೆ.
ಕೃಷಿ ಇಲಾಖೆಯ ನಿಯಮದ ಪ್ರಕಾರ ರೈತರ ಜಮೀನಿಗೆ ತೆರಳಿ ಪೂರ್ವ ಸಮೀಕ್ಷೆ ಮಾಡಿ ನಂತರ ನಿಯಮಾನುಸಾರ ಸ್ಪಿಂಕ್ಲರ್ ಪೈಪ್ ಗಳನ್ನು ರೈತರ ಹೊಲದಲ್ಲಿ ಅಳವಡಿಸಿ ಜಿ.ಪಿ.ಎಸ್ ಮಾಡಬೇಕು ಮತ್ತೇ ಮುಂದೆ ಮುಂದಿನ ಸಮೀಕ್ಷೆ ಮಾಡಿ ಸ್ಪಿಂಕ್ಲರ್ ಪೈಪ್‌ಗಳ ಕಾರ್ಯ ನಿರ್ವಹಣೆ ಸಂತೃಪ್ತಿ ಇರುವದನ್ನು ರೈತರಿಂದ ಖಾತ್ರಿ ಪಡೆಸಿಕೊಂಡು ಸ್ಪಿಂಕ್ಲರ್ ಪೈಪ್ ತಯಾರಿಸಿ ಸರಬರಾಜು ಮಾಡಿದ ಕಂಪನಿಗಳಿಗೆ ನಂತರ ಬಿಲ್ಲನ್ನು ಪಾವತಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ನಿಯಮ ಬಾಹಿರವಾಗಿ ಕೃಷಿ ಇಲಾಖೆಯಲ್ಲಿ ವಿತರಿಸುವುದು ಕಾನೂನು ಉಲ್ಲಂಘನೆಯಾಗಿದೆ ಎಂದರು.
ಇದನ್ನೂ ಓದಿ: Cleanliness Campaign: ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.
ಕೇವಲ ವಿಜಯಪುರ ಜಿಲ್ಲೆಯಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿಯು ಇಂತಹ ದೂರುಗಳು ಕೇಳಿ ಬಂದಿವೆ. ಆದರೆ ಇಲ್ಲಿಯವೆರೆಗೂ ರಾಜ್ಯದ ಎಲ್ಲ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕಂಪನಿಗೆ ಬೇಟಿ ನೀಡಿ ಸ್ಪಿಂಕ್ಲರ್ ಪೈಪ್ ಗಳ ಕಚ್ಚಾ ವಸ್ತುಗಳ ಜಿ.ಎಸ್.ಆ ಜಿಲ್ಲೆಗಳನ್ನು ಮತ್ತು ಕಂಪನಿಯವರು ಉಪಯೋಗಿಸುತ್ತಿರುವ ಕಚ್ಚಾವಸ್ತುಗಳ ಮಾದಲ ಕಲಿ ಹಾಕಿ ಸಿಪೆಟ್ ಸಂಸ್ಥೆಗೆ ಕಳುಹಿಸಿರುವ ಉದಾಹರಣೆ ಇಲ್ಲ. ಸ್ಪಿಂಕ್ಲರ್ ಪೈಪ್ ಗಳನ್ನು ತಯಾರಿಸುವ ಕಂಪನಿಯವರು ಸಿಪೆಟ್ ಸಂಸ್ಥೆಯ ಅವರ ಲ್ಯಾಬಿನಲ್ಲಿ ಖಾತ್ರಿಯಾಗುವಂತಹ ಅಂದರೆ ಗುಣಮಟ್ಟದ ಕೆಲವು ಸ್ಪಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ಇಟ್ಟು ಅದನ್ನೆ ಸಿಪೆಟ್ ಸಂಸ್ಥೆಗೆ ಕಳುಹಿಸಿ ಟೆಸ್ಟ್ ಮಾಡುತ್ತಾರೆ. ಎಲ್ಲವೂ ಗುಣಮಟ್ಟದ ಸ್ಪಿಂಕ್ಲರ್ ಪೈಪ್ ಗಳು ಇರುತ್ತವೆ ಎಂದು ಹೇಳಿ ಇಡಿ ರಾಜ್ಯದ ರೈತ ಕುಲಕ್ಕೆ ಅನ್ಯಾಯ ಮಾಡುತ್ತದ್ದಾರೆ. ಆದರೆ ಇಲ್ಲಮಾಡಬೇಕಾಗಿದ್ದು ರೈತರ ಜಮೀನಿನಲ್ಲಿರುವ ಸ್ಪಿಂಕ್ಲರ್ ಪೈಪ್ ಗಳ ಮಾದರಿಗಳನ್ನು ರೈತರ ಸಮ್ಮುಖದಲ್ಲಿ ಪಡೆದು ಸಿಪೆಟ್ ಸಂಸ್ಥೆಗೆ ಕಳುಹಿಸಿ ರೈತರ ಸಮಕ್ಷಮ ಮಾದರಿ ಪರೀಕ್ಷಿಸಬೇಕು.
ಆದರೆ ಅದನ್ನು ಬಿಟ್ಟು ವಾಮ ಮಾರ್ಗದಿಂದ ರೈತರಿಗೆ ಮೋಸ ಮಾಡಲಾಗುತ್ತದೆ. ಈ ರೀತಿ ರೈತರಿಗೆ ಮೋಸ ಮಾಡುತ್ತಿರುವದರಿಂದಲೇ ಇಂತಹ ಕಂಪನಿಗಳು ಆರ್ಥಿಕವಾಗಿ ಹೆಮ್ಮರವಾಗಿ ಬೆಳೆಯುತ್ತವೆ. ಒಮ್ಮೆ ರೈತರಿಗೆ ಸ್ಟಿಂಕ್ಲರ್ ಪೈಪ್‌ಗಳನ್ನು ವಿತರಿಸಿದರೆ 7 ವರ್ಷಗಳವರೆಗೆ ವಿತರಿಸುವದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕನಿಷ್ಠ 2 ರಿಂದ 3 ವರ್ಷಕ್ಕೆ ಒಮ್ಮೆ ರೈತರಿಗೆ ಗುಣಮಟ್ಟದ ಸ್ಪಿಂಕ್ಲರ್ ಪೈಪ್ ಗಳನ್ನು ಸರಬರಾಜು ಮಾಡಬೇಕು, ಈಗ ಕಳಪೆ ಸ್ಪಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ರಾಜ್ಯಾದ್ಯಂತ ಏಹರಿಸಿದ ಕಂಪನಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
ತನಿಕೆ ಮಾಡಿ ಸ್ಪಷ್ಟ ವರದಿ ಬರುವವರೆಗೂ ಕಂಪನಿಗಳ ಬಿಲ್ಲೆನ್ನು ಪಾವತಿಸಬಾರದು. ಒಂದು ವೇಳೆ ತನಿಕೆ ನಡೆಸದೆ ಜಿಲ್ಲೆ ಪಾವತಿಸಿದರೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮುಂದಿನ ತನಿಖೆಗಾಗಿ ಸಿ.ಬಿ.ಆಯ್ ಗೆ ಮೊರೆಹೊಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಚನಸಬಪ್ಪ ಸಿರೂರ, ಚಿದಾನಂದ ನಿಪ್ಪಾಣಿ, ರಾಚನಗೌಡ ಪಾಟೀಲ, ದಾವುಲಸಾಬ ನದಾಫ, ರವಿ ನಾಯ್ಕೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.