ಬರ ಪರಿಹಾರ ನೀಡುವಂತೆ ರೈತ ಸಂಘದಿಂದ ಒತ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

0
56
ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು,
ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ವಿಜಯಪುರ ನ.20: ವಿಜಯಪುರ ನಗರದಲ್ಲಿ ಡಿ.ಸಿ.ಸಿ ಬ್ಯಾಂಕನ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದರು. ಇದೆ ವೇಳೆ ರೈತ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಕಳೆದ 5 ತಿಂಗಳಿನಿಂದ ಮಳೆ ಬಾರದೇ ನಾಡಿನ ಎಲ್ಲಾ ರೈತರು ತುಂಬಾ ಕಷ್ಟದಲ್ಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಅನೇಕ ರೀತಿಯ ಸಮಿಕ್ಷೇಗಳನ್ನು ಮಾಡಿಸಲಾಗಿದೆ. ಆದರೆ ಇನ್ನೂವರೆಗೂ ಬರಗಾಲಕ್ಕೆ ಸಂಭಂದಿಸಿದಂತೆ ಯಾವುದೇ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು. ಇಲ್ಲವಾದಲ್ಲಿ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಧ್ಯಕ್ಷರಾದ ಚುನಪ್ಪ ಪೂಜೇರಿ ಹಾಗೂ ಜಿಲ್ಲಾಧ್ಯಕ್ಷರಾದ ಸಂಗಮೇಶ ನೇತ್ರತ್ವದಲ್ಲಿ ರಾಜ್ಯದ ಸಮಸ್ತ ರೈತರು ಸೇರಿಕೊಂಡು ಹೋರಾಟ ಮಾಡಬೇಕಾಗುವದು ಎಚ್ಚರಿಸಿದರು.

ಕೋಲಾರ ರೈತ ಸಂಘದ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಹಾಗೂ ದೇವರಹಿಪ್ಪರಗಿ ತಾಲೂಕಾ ಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ ಅವರು ಮಾತನಾಡುತ್ತಾ ರೈತರ ವಿವಿಧ ಬೇಡಿಕೆಗಳಾದ ಸಂಪೂರ್ಣ ಸಾಲಮನ್ನಾ ಮಾಡಬೇಕು, ಆಲಮಟ್ಟಿ ಜಲಾಶಯದ ಎತ್ತರವನ್ನು ಎರಿಸಬೇಕು, ಜಿಲ್ಲೆಯ ಕೊನೆಯ ಹಳ್ಳಿಯ ರೈತರಿಗೂ ಕಾಲುವೆ ಮೂಲಕ ನೀರು ಹರಿಸಬೇಕು, ಫಸಲ್ ಭೀಮಾ ಯೋಜನೆ ಅಕ್ರಮವನ್ನು ತನಿಖೆ ಮಾಡಿ ಪರಿಹಾರ ನೀಡಬೇಕು, ರೈತರ ಕೃಷಿ ವಿದ್ಯುತ್ ಸಂಭಂಧಿಸಿದಂತೆ ರೈತರೇ ಸ್ವತಃ ಬರಿಸಿಕೊಳಬೇಕು ಎಂದು ಹೊರಡಿಸಿರುವ ಆದೇಶವನ್ನು ಮರಳಿ ಪಡೆಯಬೇಕು, ತಾಲೂಕಿಗೊಂದು ಗೋಶಾಲೆ ನಿರ್ಮಿಸಬೆಕು, ಕಬ್ಬಿಗೆ 3000 ಬೆಲೆ ಘೋಷಣೆ ಮಾಡಿ ತೂಕದಲ್ಲಿ ಆಗುವ ಮೊಸವನ್ನು ತಡೆಯಬೇಕು, ಜಿಲ್ಲೆಯಲ್ಲಿ ಘೋಷಣೆ ಮಾಡಿರುವ 8 ಹೊಸ ತಾಲೂಕಗಳಲ್ಲಿ ಎಲ್ಲಾ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಬೇಕು ಎಂದು ಮಾತನಾಡಿದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಬರಗಾಲ ಪರಿಹಾರ ನೀಡುವುದಾಗಿ ಮತ್ತು ರೈತರಿಗೆ ಕೃಷಿ ವಿದ್ಯುತ್‍ಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವನ್ನು ಮರಳಿ ಪಡೆಯುವುದಾಗಿ ಮತ್ತು ಉಳಿದ ಬೇಡಿಕೆಗಳನ್ನು ಪರಿಶೀಲಿಸಿ ಪರಿಹರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಿವಾನಂದ ಹಿರೇಮಠ, ಸುಭಾಸ ಸಜ್ಜನ, ಸುಬಾಸ ಶಿರಗೂರ್, ಶಶಾಂಕ ಬಿರಾದಾರ, ಸಂಗು ಬಿರಾದಾರ, ಡೊಂಗ್ರಿ ನದಾಫ್, ಶ್ರೀಶೈಲ್ ಬಾಡಗಿ, ರವಿಕಾಂತ ಪಾಟೀಲ, ಶ್ರೀಶೈಲ ಬೆನ್ನೂರ, ಅಲ್ಲಾಭಕ್ಷಿ ನದಾಫ್, ಸಂಗನಗೌಡ ಬಿರಾದಾರ, ಮಲ್ಲಪ್ಪ ಸುಂಬಡ, ದಾನಾಗೌಡ ಬೋರಾವತ್ತ, ಮಲ್ಲನಗೌಡ ಬಿರಾದಾರ, ಚನ್ನಬಸಯ್ಯ ಗರಿಬ, ಚಂದ್ರಾಮಪ್ಪ ಗಣಿಯಾರ, ಗುರುಪ್ಪಗೌಡ ಬಿರದಾರ, ಅಪ್ಪಸಾಹೇಬಗೌಡ ಬಿರಾದಾರ, ತುಳಜಾರಾಮ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ambedkar image

LEAVE A REPLY

Please enter your comment!
Please enter your name here