ವಿಜಯಪುರ: ಭಾನುವಾರ ಲಾಕ್‍ಡೌನ್: ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಕರ್ಫೂ ಜಾರಿ

0
68

ವಿಜಯಪುರ ಜುಲೈ.04: ರಾಜ್ಯಾಂದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೋರೊನಾ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ದಿನಾಂಕ 05-07-2020 ರ ಭಾನುವಾರದಿಂದ ಮುಂದಿನ ದಿನಾಂಕ 02-08-2020 ರವರೆಗೆ ಒಟ್ಟು ನಾಲ್ಕು ಭಾನುವಾರಗಳನ್ನು ಪೂರ್ಣದಿನದ ಲಾಕ್‍ಡೌನ್ ಅನ್ನು 1973 ಕಲಂ 144 ರನ್ವಯ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಅದರಂತೆ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಅಗತ್ಯ ವಸ್ತುಗಳಾದ ವೈದ್ಯಕೀಯ, ಹಾಲು, ತರಕಾರಿ, ಮಾಂಸ-ಮೀನು, ದಿನಸಿ ಅಂಗಡಿ ಹಾಗೂ ಪೇಟ್ರೋಲ್ ಪಂಪ್‍ಗಳಿಗೆ ಯಾವುದೇ ನಿರ್ಭಂಧ ಇರುವುದಿಲ್ಲ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಂತಹ ಇಲಾಖೆಗಳು, ಕಚೇರಿಗಳು, ಬೋರ್ಡುಗಳು ಮತ್ತು ಕಾರ್ಪೋರೇಷನ್‍ಗಳನ್ನು ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳು ಈಗಿರುವ ಎರಡನೆ ಶನಿವಾರ ಮತ್ತು ನಾಲ್ಕನೆ ಶನಿವಾರಗಳನ್ನು ಸೇರಿಕೊಂಡಂತೆ 2020ರ ಜುಲೈ 10 ರಿಂದ ಎಲ್ಲ ಶನಿವಾರಗಳಂದು ದಿನಾಂಕ 08-08-2020 ರವರೆಗೆ ಮುಚ್ಚಲ್ಪಡುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫೂ ಜಾರಿಯಲ್ಲಿರಲಿದ್ದು, ಈ ಕರ್ಫೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here