ಕಾರ್ಮಿಕರಿಗೆ ವಿತರಿಸಲು ಸಾಮಗ್ರಿಗಳ ಸ್ವೀಕಾರ : ಕೋವಿಡ್-19 ಜಾಗೃತಿಗೆ ಕ್ರಮ

0
32

ವಿಜಯಪುರ ಎ.02: ನೋವೆಲ್ ಕೊರೋನಾ ವೈರಸ್ ಮುನ್ನೆಚ್ಚರಿಕೆಯಾಗಿ ಕಾರ್ಮಿಕರಿಗೆ ಹಂಚಲು ಉದ್ದೇಶಿಸಲಾಗಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ಪರಿಕರಗಳನ್ನು ಕಾರ್ಮಿಕ ಇಲಾಖೆ ಅನುದಾನದ ಅಡಿಯಲ್ಲಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ನಿನ್ನೆ ಸ್ವೀಕರಿಸಲಾಗಿದೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಸೂರ್ಯಪ್ಪ ನೇತೃತ್ವದಲ್ಲಿ ಈ ಸಾಮಗ್ರಿಗಳನ್ನು ರೆಡ್‍ಕ್ರಾಸ್ ಸಂಸ್ಥೆಯಿಂದ ಪಡೆಯಲಾಗಿದ್ದು, ಕೋವಿಡ್-19 ಮುನ್ನೆಚ್ಚರಿಕೆಯಾಗಿ ಕಾರ್ಮಿಕರಿಗೆ ಈ ಸಾಮಗ್ರಿ ಅಗತ್ಯತೆಯ ಅನುಗುಣವಾಗಿ ವಿತರಿಸಲಾಗುತ್ತದೆ. ಕಾರ್ಮಿಕ ಇಲಾಖೆಯ ಮೂಲಕ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಗೆ ಸಾಮಗ್ರಿ ವಿತರಿಸಲು ಉದ್ದೇಶಿಸಲಾಗಿದ್ದು, 10 ಸಾವಿರ ಮಾಸ್ಕ್, 3 ಸಾವಿರ ಸ್ಯಾನಿಟೈಸರ್, 3 ಸಾವಿರ ಕೈ ತೊಳೆಯುವ ಸೋಪ್ ಹಂಚಲು ರೆಡ್‍ಕ್ರಾಸ್ ಸಂಸ್ಥೆಯಿಂದ ಸ್ವಿಕರಿಸಲಾಗಿದೆ.
ಅದರಂತೆ ಕೋವಿಡ್-19 ಕುರಿತು ಅರಿವು ಮೂಡಿಸಲು 10*20 ಅಳತೆಯ 4 ಹೋರ್ಡಿಂಗ್ಸ್, 10 ಸಾವಿರ ಕರಪತ್ರಗಳನ್ನು ಕೂಡಾ ಕಾರ್ಮಿಕ ಇಲಾಖೆಯಿಂದ ವಿತರಿಸಲು ಉದ್ದೇಶಿಸಲಾಗಿದ್ದು, ಈಗಾಗಲೆ 1 ಹೋರ್ಡಿಂಗ್ ಅನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಕಾರ್ಮಿಕ ಇಲಾಖೆ ಕಚೇರಿ ಆವರಣದಲ್ಲಿ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ವಿಜಯಪುರ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಲ್.ಎಚ್ ಬಿದರಿ, ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರು, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಸೂರ್ಯಪ್ಪ, ಡೋಂಬರಮತ್ತೂರ, ಎಸ್.ಜಿ ಕೈನೂರ, ಕಾರ್ಮಿಕ ನಿರಿಕ್ಷಕ ಜಗದೇವಿ ಸಜ್ಜನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here