ಪೈರಸಿಯಲ್ಲಿ ʼರಾಧೆʼ ಚಿತ್ರ ನೋಡಬೇಡಿ: ಬಾಲಿವುಡ್ ನಟ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಹೊಸ ಚಿತ್ರ ʼರಾಧೆʼ ಸಿನಿಮಾವನ್ನು ಪೈರಸಿಯಲ್ಲಿ ನೋಡದಂತೆ ಅಭಿಮಾನಿಗಳಿಗೆ  ಅವರು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು, ರಾಧೆ ಪೈರಸಿ ಚಿತ್ರವನ್ನು ನೋಡದಿರಿ. ಸೈಬರ್ ಸೆಲ್ ನವರು ಪೈರೇಟೆಡ್ ಸೈಟ್’ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ರಾಧೆ ಚಿತ್ರ ಒಂದು ವೀಕ್ಷೆಣೆಗೆ ರೂ.249 ಗೆ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಕೆಲವು ಪೈರೇಟೆಡ್ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಸೈಬರ್ ಅಪರಾಧವಾಗಿದೆ. ಸೈಬರ್ ಸೆಲ್ ಈ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ನೀವು ಸೈಬರ್ ಸೆಲ್ ನವರಿಂದ ಭಾರೀ ಸಮಸ್ಯೆಗೊಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

https://twitter.com/BeingSalmanKhan/status/1393634137144131586/photo/1

Share the Post:

ಇತ್ತೀಚಿನ ಸುದ್ದಿಗಳು