ಡಾ.ಅಂಬೇಡ್ಕರ ಹಬ್ಬಕ್ಕೆ ತೆರೆ

Dr. Ambedkar Festival image

ವಿಜಯಪುರ : ಡಾ. ಬಿ.ಆರ್. ಅಂಬೇಡ್ಕರ್ ಅವರು 1939ರಲ್ಲಿ ವಿಜಯಪುರಕ್ಕೆ ನೀಡಿದ್ದ ಐತಿಹಾಸಿಕ ಭೇಟಿಯ ಸ್ಮರಣಾರ್ಥ ಹಾಗೂ ಈ ಭಾಗದೊಂದಿಗೆ ಅವರಿಗಿದ್ದ ಅವಿನಾಭಾವ ಸಂಬಂಧವನ್ನು ಜನಮಾನಸಕ್ಕೆ ಪರಿಚಯಿಸಲು ಅಂಬೇಡ್ಕರ್ ಹಬ್ಬವನ್ನು ಆಯೋಜಿಸಿರುವುದು ಅರ್ಥಪೂರ್ಣ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಕಂದಗಲ್ ಶ್ರೀ ಹಣಮಂತರಾಯರ ರಂಗಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಜಿಲ್ಲೆಯ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ನಾಲ್ಕು ದಿನಗಳ `ಅಂಬೇಡ್ಕರ್ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ಅಂಬೇಡ್ಕರ್ ಹಬ್ಬದ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸುವ ಕೆಲಸವನ್ನು ನಮ್ಮ ಜಿಲ್ಲೆಯಲ್ಲಿ ಎಲ್ಲರೂ ಕೂಡಿ ಮಾಡಿರುವುದು ಉತ್ತಮ ಬೆಳವಣಿಗೆ, ಏಕೆಂದರೆ ಇವತ್ತಿನ ಕಾಲದಲ್ಲಿ ಸಮಾನತೆಗಾಗಿ ಹೋರಾಡಿದ ಮಹಾಪುರುಷನ್ನು ಒಂದೇ ಜಾತಿಗೆ ಸೀಮಿತ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲ ವರ್ಗದವರು ಒಂದಾಗಿ ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ-ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಅವರಂತಹ ಮಹಾಪುರುಷರ ಜಯಂತಿಗಳು ಒಂದೇ ವೇದಿಕೆಯಲ್ಲಿ ನಾಲ್ಕು ದಿನಗಳ ಕಾಲ ಆಯೋಜನೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದು ನೋಡಿದರೆ ಈ ಕಾರ್ಯಕ್ರಮವು ಆಧುನಿಕ ಅನುಭವ ಮಂಟಪದಂತೆಯೇ ಗೋಚರಿಸುತ್ತಿದೆ ಎಂದರು.

ಇಂದಿನ ಯುವ ಪೀಳಿಗೆಗೆ ಸಮಾನತೆಗಾಗಿ ಹೋರಾಡಿದ ಮಹಾನ್ ವ್ಯಕ್ತಿ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಎಲ್ಲಡೇ ನಡೆಯಲಿ. ಕೇವಲ ಆಚರಣೆಗೆ ಸೀಮಿತವಾಗದ ಈ ಹಬ್ಬವು, ಅಂಬೇಡ್ಕರ್ ಅವರ ಪ್ರಖರ ವಿಚಾರಧಾರೆ ಮತ್ತು ಸಂವಿಧಾನದ ಆಶಯಗಳನ್ನು ಮನೆಮನೆಗೆ ತಲುಪಿಸುವ ಸಮಾನತೆಯ ಅರಿವಿನ ಹಬ್ಬವಾಗಿದೆ. ನಾಲ್ಕು ದಿನಗಳ ಕಾಲ ನಡೆದ ವೈವಿಧ್ಯಮಯ ವೈಚಾರಿಕ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದಿನ ವರ್ಷ ದೊಡ್ಡ ಮೈದಾನದಲ್ಲಿ ಆಯೋಜನೆ ಮಾಡಿ, ಅದಕ್ಕೆ ನನ್ನ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ಇರಲಿದೆ ಎಂದರು.

ಎಸ್.ಬಿ. ವಿಸ್ಡಂ ಮುಖ್ಯಸ್ಥ ಶರಣಯ್ಯ ಭಂಡಾರಿಮಠ ಮಾತನಾಡಿದರು. ಡಾ.ಎಚ್.ಬಿ. ಕೋಲ್ಹಾರ ಉಪನ್ಯಾಸ ನೀಡಿದರು. ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಮಾಜಿ ಶಾಸಕ ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಸಂಬಣಿ, ಮುಖಂಡರಾದ ಅಬ್ದುಲ್ ರಜಾಕ್ ಹೊರ್ತಿ, ದಿನೇಶ್ ಹಳ್ಳಿ, ಡಾ. ಬಾಬುರಾಜೇಂದ್ರ ನಾಯಕ, ಸುಮಿತ್ರಾ ಜಾಧವ್, ಆರತಿ ಶಹಾಪುರ, ಮಹಮ್ಮದ್ ರಫೀಕ್ ಟಪಾಲ್, ಜಮಿರ ಭಕ್ಷಿ, ರಾಕೇಶ್ ಕಲ್ಲೂರು, ಫಯಾಜ ಕಲಾದಗಿ, ಎಚ್. ಎಮ್. ಬಾಗಬಾನ್, ದೀಪಾ ತಟ್ಟಿಮನಿ, ಸಲಾವುದ್ದೀನ ಪುಣೆಕರ್, ಬಾಲಾಜಿ ಎಂ. ಕಾಂಬಳೆ, ಮಹಾದೇವ ಚಲವಾದಿ ಮೋಹನ್ ಕಟ್ಟಿಮನಿ ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು