ವಿಜಯಪುರ: Zilla Kannada Sahitya Parishad, 29 ಇದು ಪಕ್ಷ ಮಾಸದ ತಿಂಗಳು ಈ ಮಾಸದಲ್ಲಿ ಗುರು ಹಿರಿಯರನ್ನು ವಿಶೇಷವಾಗಿ ನಮ್ಮ ಪೂರ್ವಿಕರನ್ನು ನೆನೆಸುವುದು ದತ್ತಿ ಉಪನ್ಯಾಸಗಳ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಮುಳವಾಡದ ಖ್ಯಾತ ವೈದ್ಯರಾದ ಡಾ. ಶಿವಾನಂದ ಕುಬಸದ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ದಿ. ಮಹಗುಂಡಪ್ಪ ಕುಬಸದ ದತ್ತಿ ದತ್ತಿದಾನಿಗಳು ಡಾ. ಶಿವಾನಂದ ಕುಬಸದ ಖ್ಯಾತ ವೈದ್ಯರು, ಮುಳವಾಡ ವಿಷಯ ಬಸವಾದಿ ಶರಣರ ಕುರಿತು ಚಿಂತನೆ.ದಿ. ಬಸಮ್ಮ ದರೆಪ್ಪ ಐಹೊಳೆ ದತ್ತಿದಾನಿಗಳು ಶ್ರೀ ರಾವುತಪ್ಪ ಧರೆಪ್ಪ ಐಹೊಳೆ ವಿಷಯ ಶರಣ ಶರಣೆಯರ ಚಿಂತನೆಗಳು ಎಂಬ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ವಚನಗಳನ್ನು ಕೇವಲ ಆಲಿಸುವುದಷ್ಟೇ ಅಲ್ಲ ಅವುಗಳ ಪಾಲನೆಯ ಕುರಿತು ಮರು ಚಿಂತನೆಯಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ವಿಜಯಪುರ ಗ್ರಾಮ ಪಂಚಾಯತ ನೌಕರರ ಸಂಘದಿಂದ ‘ಸಚಿವರ ಮನೆ ಚಲೋ’ ಪ್ರತಿಭಟನೆ
Zilla Kannada Sahitya Parishad ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಗೌರವ ಸಲಹೆಗಾರರಾದ ಡಾ.ವ್ಹಿ.ಡಿ.ಐಹೊಳ್ಳಿ ಮಾತನಾಡುತ್ತಾ, ಕನ್ನಡ ನಾಡು ನುಡಿಯ ಕುರಿತು ಅಭಿಮಾನವನ್ನು ಮೂಡಿಸುವಲ್ಲಿ ಹಾಗೂ ಸಾಹಿತ್ಯದ ಪ್ರೇಮ ಬೆಳಸುವಲ್ಲಿ ಪರಿಷತ್ತಿನ ಪಾತ್ರ ಅನನ್ಯವಾದುದು ಎಂದು ಹೇಳುತ್ತಾ, ತಂದೆಯವರ ಸ್ಮರಣಾರ್ಥ ಇಂದು ಏರ್ಪಡಿಸಿದ ಶರಣ ಶರಣೆಯರ ಚಿಂತನೆಗಳನ್ನು ನಾವೆಲ್ಲ ಅರಿತುಕೊಂಡು ಅವುಗಳನ್ನು ಅಳವಡಿಸಿಕೊಳ್ಳೋಣ ಎಂದರು.
“ಬಸವಾದಿ ಶರಣರ ಕುರಿತು” ಉಪನ್ಯಾಸ ನೀಡಿದ ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಮಹಮ್ಮದ ಗೌಸ ಹವಾಲ್ದಾರ ಮಾತನಾಡುತ್ತ ವಚನ ಸಾಹಿತ್ಯವು ಜಾತಿ, ಧರ್ಮ, ಲಿಂಗ ಬೇಧ, ಮತ್ತು ವರ್ಣಬೇಧ ಎಲ್ಲಾ ಎಲ್ಲೆಗಳನ್ನು ಮೀರಿದ್ದು. ಎಲ್ಲ ವಚನಗಳ ಸಾರ ಮಾನವೀಯ ಮೌಲ್ಯ ಎಂಬುದನ್ನು ಒತ್ತಿ ಹೇಳುತ್ತಾ, ಬಸವಾದಿ ಶಿವಶರಣರ ಚಿಂತನೆಗಳು ನಮಗೆಲ್ಲ ಆದರ್ಶವಾಗಿವೆ ಎಂದರು.
ಇದನ್ನೂ ಓದಿ: ವಿಜಯಪುರ | ಭಗತ್ ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ | ಮಲ್ಲಿಕಾರ್ಜುನ್ ಭೃಂಗಿಮಠ
“ಶರಣ ಶರಣೆಯರ ಚಿಂತನೆಗಳ ಕುರಿತು” ಉಪನ್ಯಾಸ ನೀಡಿದ ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಸುಖದೇವಿ ಅಲಬಾಳಮಠ ಮಾತನಾಡುತ್ತಾ, ವಚನಕಾರ ಗಟ್ಟಿವಾಳಯ್ಯ, ಮುಕ್ತಾಯಕ್ಕ ಮತ್ತು ಅಜಗಣ್ಣನ ವಚನಗಳ ಕುರಿತು ವಿಶ್ಲೇಷಣೆ ಮಾಡುತ್ತ ಶಿವಶರಣರ ಚಿಂತನೆಗಳನ್ನು ಇಂದು ನಾವು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಸ್ತುತತೆಯನ್ನು ಕುರಿತು ಮಾರ್ಮಿಕವಾಗಿ ತಿಳಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ರಾವುತಪ್ಪ ಐಹೊಳೆ, ಈರನಗೌಡ ಪಾಟೀಲ, ಬಸವಲಿಂಗಯ್ಯ ಕೂಡಗಿಮಠ, ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಮಾನಂದ ಚಾಂದಕವಟೆ,ಅವರನ್ನು ಪರಿಷತ್ತಿನ ಪರವಾಗಿ ಗೌರವಿಸಲಾಯಿತು.ಮೆಹತಾಬ ಕಾಗವಾಡ ತತ್ವ ಗೀತೆ ಹಾಡಿ ರಂಜಿಸಿದರು. ಪರಿಷತ್ತಿನ ಸದಸ್ಯರಾದ ರಾಜು ಅಂಗಡಿ ಅಕಾಲಿಕ ನಿಧನ ಹೊಂದಿದ್ದರಿಂದ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮೇ ಸಾಹಿತ್ಯ ಬಳಗದ ವತಿಯಿಂದ ಕ್ರಾಂತಿಗೀತೆಗಳ ಕಾರ್ಯಕ್ರಮ
ಕಾರ್ಯಕ್ರಮದ ಪ್ರಾರ್ಥನೆಯನ್ನು ಸುನಂದಾ ಕೋರಿ ನೆರವೇರಿಸಿದರು. ಸ್ವಾಗತ ಹಾಗೂ ಗೌರವ ಸಮರ್ಪಣೆಯನ್ನು ವಿಜಯಲಕ್ಷ್ಮಿ ಹಳಕಟ್ಟಿ ನಡೆಸಿಕೊಟ್ಟರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶಿಲ್ಪಾ ಭಸ್ಮೆ ನಿರೂಪಿಸಿದರು. ಸುರೇಶ ಜತ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ. ಮಾಧವ ಎಚ್ ಗುಡಿ, ಎಸ್, ಎಲ್, ಇಂಗಳೇಶ್ವರ, ಸಿದ್ರಾಮಯ್ಯ ಲಕ್ಕುಂಡಿಮಠ, ಕಮಲಾ ಮುರಾಳ, ಆಶಾ ಬಿರಾದಾರ, ಸಾಯಬಣ್ಣ ಕಂಕಣವಾಡಿ, ಸಿದ್ರಾಮಪ್ಪ ಜಂಗಮಶೆಟ್ಟಿ, ವಿವೇಕಾನಂದ ಐಹೊಳ್ಳಿ, ಜಿ.ಎಸ್.ಬಳ್ಳೂರ, ಆನಂದ ಕಂಬಾರ, ಆರತಿ ಐಹೊಳ್ಳಿ, ಜಂಬುನಾಥ ಕಂಚ್ಯಾಣಿ, ಬಿ.ಎಸ್ ಕೋನರೆಡ್ಡಿ, ಅಜುನ ಶಿರೂರ, ಶಿವಾಜಿ ಮೋರೆ, ಸುರೇಶ ಜೀಬಿ, ಡಾ ಸುರೇಶ ಕಾಗಲಕರರೆಡ್ಡಿ, ರುದ್ರಪ್ಪ ಮೆಣಸಗಿ, ರಿಹಾನ ಹಳ್ಳೂರ, ಕಸ್ತೂರಿಬಾಯಿ ಐಹೊಳ್ಳಿ, ಎಸ್.ಎಸ್ ಬಡಿಗೇರ, ಶ್ರೀಕಾಂತ ನಾಡಗೌಡ, ಎನ್.ಎಸ್ ಶಿವಣಕರ, ವಜೀರ ಅಹ್ಮದ್ ಕೊಪ್ಪಳ ಮುಂತಾದವರು ಉಪಸ್ಥಿತರಿದ್ದರು.






