Vijayapura news | ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ | ಶರಣಬಸಪ್ಪ ಅರಕೇರಿ

Women's Athletic image

ವಿಜಯಪುರ: Women’s Athletic ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ ಎಂದು ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ ಶರಣಬಸಪ್ಪ ಅರಕೇರಿ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇದನ್ನೂ ಓದಿ: Vijayapura News | ಆಧುನಿಕ ಕನ್ನಡ ರಂಗಭೂಮಿ ‘ಪಿತಾಮಹ’ ಶಾಂತಕವಿ ಸಕ್ಕರಿ ಬಾಳಾಚಾರ್ಯರು

ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಹೋರಾಟ, ಶ್ರಮ, ಮತ್ತು ಶ್ರದ್ಧೆಯು ಮುಖ್ಯವಾಗಿವೆ. ವಿದ್ಯಾರ್ಥಿಗಳು ಪಠ್ಯೆತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮ ದೃಢ ನಿಷ್ಠೆ ಯಶಸ್ಸುನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯ ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಕ್ರೀಡೆಯಿಂದ ವ್ಯಕ್ತಿಯ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಇದನ್ನು ಓದಿ: Vijayapura News | ೧೯೭೪ ರ ವಕ್ಫ ಕಾಯ್ದೆ ಗೆಜೆಟ್ ರದ್ದುಗೊಳಿಸಲು ನಾಳೆ ಬಿಜೆಪಿಯಿಂದ ಧರಣಿ ಸತ್ಯಾಗ್ರಹ

Women’s Athletic ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲವು ಸಾಮಾನ್ಯ, ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವನೆಯಿಂದ ಭಾಗವಹಿಸುವುದು ಬಹಳ ಮುಖ್ಯ. ಸುಮಾರು 500 ಕ್ಕಿಂತು ಹೆಚ್ಚು ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಈ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ತಂಡವು 66 ಅಂಕಗಳನ್ನು ಗಳಿಸುವ ಮೂಲಕ ಸಮಗ್ರ ಚಾಂಪಿಯನ್ ಶಿಫ್ ಅಲಂಕರಿಸಿತು. ಢಾರವಾಡದ ಶ್ರೀಮತಿ ಕೆ.ಎಸ್ ಜೀಗಲುರು ಕಲಾ ಹಾಗೂ ಡಾ.(ಶ್ರೀಮತಿ) ಎಸ್.ಎಮ್. ಶೇಷಗಿರಿ ಮಹಿಳಾ ಕಾಲೇಜಿನ ತಂಡವು 33 ಅಂಕಗಳನ್ನು ಗಳಿಸುವ ಮೂಲಕ ರನ್ನರ್ ಅಪ್ ಸ್ಥಾನ ಗಳಿಸಿದೆ. ರಾಣಿಬೆನ್ನುರಿನ ಕೆ.ಎಲ್.ಇ ರಾಜರಾಜೇಶ್ವರಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ತಂಡವು 19 ಅಂಕಗಳನ್ನು ಗಳಿಸುವ ಮೂಲಕ ದ್ವೀತಿಯ ರನ್ನರ್ ಅಪ್ ಸ್ಥಾನ ಪಡೆಯಿತು.

ಇದನ್ನೂ ಓದಿ: Vijayapura News | 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ | ಕ್ರೀಡೆ ಎನ್ನುವುದು ಕೇವಲ ಒಂದು ದಿನದ ಚಟುವಟಿಕೆಯಾಗಬಾರದು | ಕ್ರೀಡಾಪಟು ಬಿಂದು ರಾಣಿ ಜಿ.

ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲಕ್ಷ್ಮೀ ಸೋಮಶೇಕರ ಕಮಟಗಿ ಹಾಗೂ ಢಾರವಾಡದ ಶ್ರೀಮತಿ ಕೆ.ಎಸ್ ಜೀಗಲುರು ಕಲಾ ಹಾಗೂ ಡಾ.(ಶ್ರೀಮತಿ) ಎಸ್.ಎಮ್. ಶೇಷಗಿರಿ ಮಹಿಳಾ ಕಾಲೇಜಿನ ಅಕ್ಷತಾ ಅಂಗಡಿ ಅತ್ಯುತ್ತಮ ಅಥ್ಲೇಟಿಕ್‍ಗಳಾಗಿ ಹೊರಹೊಮ್ಮಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ್ರೀಡಾ ಏಜೆನ್ಸಿ ನೂರ್ ಉದ್ದಿನ್, ಪ್ರೊ.ಡಿ.ಎಂ ಜೋತಿ, ಡಾ. ವಿಶ್ವನಾಥ, ಡಾ ಶ್ರೀನಿವಾಸ, ಡಾ. ಕಿರಣ ವಿವಿಧ ಜಿಲ್ಲೆಯ ಕ್ರೀಡಾಪಟುಗಳು, ನಿರ್ದೇಶಕರು, ವ್ಯವಸ್ಥಾಪಕರು, ಮಹಿಳಾ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Vijayapura News | ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಆಹ್ವಾನ

ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಡಾ.ಜೋತಿ ಉಪಾದ್ಯ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಕೆ.ಎನ್ ಕಾರ್ಯಕ್ರಮದ ವರದಿ ಹಾಗೂ ಅತಿಥಿ ಪರಿಚಯಿಸಿದರು. ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಕ್ರೀಡಾ ನಿರ್ದೇಶಕ ಪ್ರೊ.ಸಕ್ಪಾಲ ಹೂವಣ್ಣ ವಂದಿಸಿದರು.


Share the Post:

ಇತ್ತೀಚಿನ ಸುದ್ದಿಗಳು