Vijayapura News | ಮುಳವಾಡ ಅಕ್ರಮ ಟೋಲ್ ವಸೂಲಿಗೆ ಬ್ರೇಕ್ ಹಾಕಲು ಸೋಮನಾಥ ಕಳ್ಳಿಮನಿ ಒತ್ತಾಯ

Illegal toll collection in Mulwad image

ವಿಜಯಪುರ: ಮುಳವಾಡ ಅಕ್ರಮ ಟೋಲ್ ವಸೂಲಿ Illegal toll collection in Mulawad ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಅಹಿಂದ ಸಂಘಟನೆಗಳ ವತಿಯಿಂದ ಕಾರ್ಯನಿರ್ವಾಹಕ ಇಂಜನೀಯರ್ ರಾಷ್ಟ್ರಿಯ ಹೆದ್ದಾರಿ ವಿಭಾಗ, ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218 , ವಿಜಯಪುರ ಬಾಗಲಕೋಟೆ ರಸ್ತೆಯಲ್ಲಿ ಬರುವ ಮುಳವಾಡ ಹತ್ತಿರ ರಸ್ತೆ ದರೋಡೆ ನಡೆಯುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು. ಹೊನಗನಹಳ್ಳಿ ರೈಲ್ವೆ ಗೇಟ್ ಹತ್ತಿರ, ಮೇಲುಸೇತುವೆ ಕಾಮಗಾರಿ ಇನ್ನೂ ನಡೆಯುತ್ತಿದ್ದು ಅಲ್ಲಿಂದ ಎರಡು ಕಡೆ ಸುಮಾರು 2 ಕಿ.ಮೀ. ರಸ್ತೆ ತುಂಬಾ ಹಾಳಾಗಿದ್ದು, Illegal toll collection in Mulawad ರಸ್ತೆ ತುಂಬಾ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ, ಇಲ್ಲಿಯೇ ಸವಾರರ ಸಾಕಷ್ಟು ಸಮಯ ಮತ್ತು ಇಂಧನ ಹಾಳಾಗುತ್ತಿದೆ.

ಇದನ್ನೂ ಓದಿ: Vijayapura News | ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಕ್ರೀಡಾಪಟುಗಳ ಸಾಧನೆ

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಅವರೇ ಸ್ಪಷ್ಟಪಡಿಸಿದಂತೆ ರಸ್ತೆ ಸರಿ ಇಲ್ಲದಿದ್ದರೆ ಹೆದ್ದಾರಿ ಏಜನ್ಸಿಗಳು ಟೋಲ್ ವಿಧಿಸಬಾರದು ಎಂದು ಸ್ಪಷ್ಟಪಡಿಸಿರುವಾಗ ಮುಳವಾಡ ಟೂಲ್ ಗುತ್ತಿಗೆದಾರರು ಜನರಿಂದ ಒತ್ತಾಯವಾಗಿ ಹಣ ವಸೂಲಿ ಮಾಡುತ್ತಿದ್ದು, ಇದು ಕಾನೂನು ಬಾಹಿರ ಕ್ರಮವಾಗಿದೆ ಹಾಗೂ ನಿತ್ಯ ವಾಹನ ಸವಾರರ ಜೊತೆ ಜಗಳ ಹಲ್ಲೆ ಸಾಮಾನ್ಯವಾಗಿದೆ. ವಿಜಯಮರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿಯವರು ಈ ಅಕ್ರಮವಾಗಿ ಮುಳವಾಡ ಟೂಲ್ ಹಣ ವಸೂಲಿ ಮಾಡುವುದನ್ನು ನಿಲ್ಲಿಸಲಿ , ಮತ್ತು ನಗರದ ವಜ್ರಹನುಮಾನ ಗೇಟ್ ಹತ್ತಿರ ನಿರ್ಮಿಸಿದ ರೈಲ್ವೆ ಮೇಲು ಸೇತುವೆ ಅತ್ಯಂತ ಅವೈಜ್ಞಾನಿಕವಾಗಿದ್ದು, ಒಬ್ಬಿಬ್ಬರ ಸ್ವ ಹಿತಕ್ಕಾಗಿ ಇದನ್ನು ದೆಹಲಿಯ ಜಂತರ್ – ಮಂತರ್ ತರಹ ನಿರ್ಮಿಸಿದ್ದು, ಸವಾರರು ಯಾವ ಕಡೆಯಿಂದ ಹೋಗಬೇಕು. ಎಲ್ಲಿಂದ ಹೊರಬರಬೇಕು ತಿಳಿಯದಾಗಿದೆ.

ಐತಿಹಾಸಿಕ ನಗರಕ್ಕೆ ನಿತ್ಯ ಅಲ್ಲಿಂದ ಸಾಗುವ ಪ್ರವಾಸಿಗರು , ನಗರ ವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ . ಈ ಪಾಪ ಪರಿಹಾರಕ್ಕಾಗಿಯಾದರೂ ಸಂಸದ ರಮೇಶ ಜಿಗಜಿಣಗಿಯವರು ಹೊನಗನಹಳ್ಳಿ ರೈಲ್ವೆ ಮೇಲ್ಲುತುವೆ ಕಾಮಗಾರಿ ಮುಗಿಸಿ, ರಸ್ತೆ ರಿಪೇರಿ ಮಾಡುವವರಿಗೆ ಟೊಲ್ ವಸೂಲಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು. ಈ ಕುರಿತು ಮನವಿ ಸಲ್ಲಿಸಿದಾಗ ಒಂದು ವಾರಗಳ ಕಾಲ ಅಧಿಕಾರಿಗಳನ್ನು ಸಮಯವನ್ನು ಪಡೆದುಕೊಂಡಿದ್ದು, ಈ ಒಂದು ವಾರದೊಳಗೆ ಯಾವುದೇ ತರಹದ ಕ್ರಮ ಜರುಗಿಸದೇ ಹೋದಲ್ಲಿ ಉಗ್ರಸ್ವರೂಪದ ಹೋರಾಟ ಕೈಗೊಳ್ಳಲಾಗುವದು ಎಂದು ಆಗ್ರಹಪಡಿಸಿದರು.

ಇದನ್ನೂ ಓದಿ: Bagalkote News | ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸಚಿವ ತಿಮ್ಮಾಪೂರ

ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ, ವಿ.ಎಸ್. ಗಸ್ತಿ, ಸಂಜು ಕಂಬಾಗಿ, ಮಹಾದೇವಿ ಗೋಕಾಕ, ಇನ್ನಿತರರು ಉಪಸ್ಥಿತರಿದ್ದರು.


 

Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »