Vijayapura Badminton Tournament 2026: 7 Days State Level ಪಂದ್ಯಾವಳಿ ಶುರು

Vijayapura Badminton Tournament

ವಿಜಯಪುರ: Vijayapura Badminton Tournament ಮೂಲಕ ಐತಿಹಾಸಿಕ ಗೋಲಗುಮ್ಮಟ ನಗರಿ ಇದೀಗ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧಿಕೃತ ಮಾನ್ಯತೆಯೊಂದಿಗೆ ಹಾಗೂ ಯೋನೆಕ್ಸ್ ಸನ್‌ರೈಸ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಯು-15 ಮತ್ತು ಯು-17 ಬ್ಯಾಡ್ಮಿಂಟನ್ ಪಂದ್ಯಾವಳಿ-2026 ಮೇ 17ರಿಂದ ಮೇ 23ರವರೆಗೆ ವಿಜಯಪುರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಸಚಿವ Kumar Bangarappa ಅವರು, ರಾಜ್ಯದ ವಿವಿಧ ಭಾಗಗಳಿಂದ ಉದಯೋನ್ಮುಖ ಹಾಗೂ ಖ್ಯಾತ ಆಟಗಾರರು ವಿಜಯಪುರಕ್ಕೆ ಆಗಮಿಸುತ್ತಿದ್ದು, ಮುಂದಿನ 7 ದಿನಗಳ ಕಾಲ ಕ್ರೀಡಾಭಿಮಾನಿಗಳಿಗೆ ತಡೆರಹಿತ ಬ್ಯಾಡ್ಮಿಂಟನ್ ಆಕ್ಷನ್ ಸಿಗಲಿದೆ ಎಂದು ಹೇಳಿದರು.

Vijayapura Badminton Tournament ವೇಳಾಪಟ್ಟಿ

Qualifying Rounds (ಮೇ 17 – ಮೇ 20)

ಹೊಸ ಪ್ರತಿಭೆಗಳು ಮೇನ್ ಡ್ರಾಗೆ ಪ್ರವೇಶ ಪಡೆಯಲು ಈ ಹಂತದಲ್ಲಿ ಸೆಣಸಾಡಲಿವೆ.

Main Draw Matches (ಮೇ 21 – ಮೇ 23)

ಪ್ರಮುಖ ಆಟಗಾರರ ನಡುವೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಮೇ 23ರಂದು ರೋಚಕ ಫೈನಲ್ ಪಂದ್ಯಗಳು ನಡೆಯಲಿವೆ.

ವಿಶ್ವದರ್ಜೆಯ ಕ್ರೀಡಾ ಸೌಲಭ್ಯ

ಪಂದ್ಯಾವಳಿಯನ್ನು Dr. B. R. Ambedkar Stadium ಹಾಗೂ BLDE Association ಶ್ರೀಮತಿ ಬಂಗಾರಮ್ಮ ಸಜ್ಜನ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಸಿಂಥೆಟಿಕ್ ಮ್ಯಾಟ್ ಕೋರ್ಟ್‌ಗಳು, ಆಧುನಿಕ ಲೈಟಿಂಗ್ ವ್ಯವಸ್ಥೆ ಹಾಗೂ ಸಾವಿರಾರು ವೀಕ್ಷಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಡಿಜಿಟಲ್ Reach ದೊಡ್ಡ ಮಟ್ಟದಲ್ಲಿ

ಈ ಪಂದ್ಯಾವಳಿಯ ಮೂಲಕ:

  • 10,000ಕ್ಕೂ ಹೆಚ್ಚು ನೇರ ವೀಕ್ಷಕರು
  • 2 ಮಿಲಿಯನ್‌ಕ್ಕಿಂತ ಹೆಚ್ಚು ಡಿಜಿಟಲ್ ವೀಕ್ಷಣೆ
  • 5 ಮಿಲಿಯನ್‌ಕ್ಕಿಂತ ಹೆಚ್ಚು ಸೋಶಿಯಲ್ ಮೀಡಿಯಾ ಇಂಪ್ರೆಷನ್ ಗುರಿ ಹೊಂದಲಾಗಿದೆ.

ವಿಜಯಪುರದ ಸಾಂಪ್ರದಾಯಿಕ ಆಹಾರಕ್ಕೂ ಪ್ರಚಾರ

ವಿಜಯಪುರಕ್ಕೆ ಆಗಮಿಸುವ ಕ್ರೀಡಾಪಟುಗಳು ಹಾಗೂ ಪ್ರವಾಸಿಗರು ಜೋಳದ ರೊಟ್ಟಿ, ಎಣ್ಣೆಗಾಯಿ ಹಾಗೂ ಕರೆದಂಟು ಸವಿದು ಸ್ಥಳೀಯ ಸಂಸ್ಕೃತಿಯನ್ನು ಅನುಭವಿಸಬಹುದು ಎಂದು ತಿಳಿಸಿದರು.

ಸಚಿವರಿಂದ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವ M. B. Patil ಅವರು Dr. B. R. Ambedkar Stadium ಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ Dr. Anand K, ಕ್ರೀಡಾಧಿಕಾರಿ Rajashekhar Dhaivadi ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯಪುರಕ್ಕೆ ಈಗ ಗ್ರೇಟರ್ ಲುಕ್: ವೃಕ್ಷ ಅಭಿಯಾನದಿಂದ ತಾಪಮಾನ ನಿಯಂತ್ರಣ -ಎಂ.ಬಿ. ಪಾಟೀಲ

Share the Post:

ಇತ್ತೀಚಿನ ಸುದ್ದಿಗಳು