ವಿಜಯಪುರ: 110/11 ಕೆವ್ಹಿ ವಿದ್ಯುತ್ ವಿತರಣಾ ಉಪ ಕೇಂದ್ರದ ಕೆಐಎಡಿಬಿ ವಿಜಯಪುರದಲ್ಲಿ 20 ಎಂವಿಎ ಪರಿವರ್ತಕದ ದುರಸ್ತ್ಥಿ ಕಾರ್ಯ ಕೈಗೊಂಡಿದ್ದು, ಈ ಉಪ ಕೇಂದ್ರದಿಂದ ಹೊರಹೋಗುವ 33/11 ಕೆವ್ಹಿ ಹೊನ್ನುಟಗಿ, 33/11 ಕೆವ್ಹಿ ನಾಗಠಾಣ ಹಾಗೂ 33 ಕೆವ್ಹಿ ಗುಡ್ಡೋಡಗಿ ಹೆಚ್ ಟಿ ವಿದ್ಯುತ್ ಮಾರ್ಗಗಳಿಗೆ ಸೆಪ್ಟೆಂಬರ್ 18ರ ಮಧ್ಯಾಹ್ನ 1 ರಿಂದ ಸಾಯಂಕಾಲ 6ರವರೆಗೆ Variation in power supply ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಸ್ವಚ್ಚತಾ ಹೀ ಸೇವಾ ಅಭಿಯಾನಕ್ಕೆ ಜಿಪಂ ಸಿಇಒ ರಿಷಿ ಆನಂದ ಅವರಿಂದ ಚಾಲನೆ
ಅದರಂತೆ, 110/11 ಕೆವ್ಹಿ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ 11 ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ ಸೆಪ್ಟೆಂಬರ್ 19ರ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ. Variation in power supply.






