ವಿಜಯಪುರ: ತಿಕೋಟಾ Tikota ಪಟ್ಟಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಐಟಿಐ ಯಲ್ಲಿ 2026-27ನೇ ಸಾಲಿನ ಪ್ರವೇಶಾವಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷದ ಎಲೆಕ್ಟ್ರಿಷಿಯನ್, ಫಿಟ್ಟರ್, ವೃತ್ತಿಗಳಲ್ಲಿ ಪ್ರವೇಶ ಪಡೆಯಲು ಏ.27 ರಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 08-04-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
Tikota ಟಾಟಾ ಯೋಜನೆ ಅಡಿಯಲ್ಲಿ ಮೆಕ್ಯಾನಿಕ್ ಎಲೆಕ್ಟ್ರಿಕ್ ವಾಹನ, ಇಂಡಸ್ಟ್ರಿಯಲ್ ರೊಬೋಟಿಕ್ ಡಿಸೈನಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್, ಸಿಎನ್‌ಸಿ ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್, ಆಟೋನಾಮಸ್, ವರ್ಚುವಲ್ ಅನಾಲಿಸಿಸ್ ಅಂಡ್ ಡಿಸೈನರ್ ಹಾಗೂ ಎಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 06 ವೃತ್ತಿಗಳಲ್ಲೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು www.emptrg.kar.nic.in ಹಾಗೂ www.detkarnataka.org.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೋ ಸಂಖ್ಯೆ: 9449501663, 9739985422, 9886247718, 9902109750. ಮೂಲಕ ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗರಿಕಾ ತರಬೇತಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






