ವಿಜಯಪುರ: Talwar caste ತಳವಾರ ಜಾತಿಗೆ ಎಸ್.ಟಿ. (ಪ್ರಮಾಣಪತ್ರ) ಬಗ್ಗೆ ಉಚ್ಛ ನ್ಯಾಯಾಲಯದ ಆದೇಶ ಪಾಲಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ತಳವಾರ ಮಹಾಸಭಾ ಸಮಿತಿ ಅಧ್ಯಕ್ಷರಾದ ಪ್ರಕಾಶ ಎಸ್.ಸೊನ್ನದ ರವರ ನೇತೃತ್ವದಲ್ಲಿ ಸಾವಿರಾರು ಜನ ಸಮಾಜ ಬಾಂಧವರು ಸೇರಿ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
The Constitution (Scheduled Tribes) order (Amendment 2020 Dated 20-03-2020 The words “Naikda, Nayak, The words and brackets ” Naikada , Nayaka (Including Parivara and Talawar) shall be substituted) ಸಂವಿಧಾನದ (ಪರಿಶಿಷ್ಟ ಪಂಗಡ)ದ ತಿದ್ದುಪಡಿ ಪ್ರಕಾರ ‘ತಳವಾರ’ ಜಾತಿಯನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದೆ. ಮುಂದುವರದು, ಕರ್ನಾಟಕ ಸರಕಾರ ಹಿಂದುಳಿದ ವರ್ಗಗಳ ಪಟ್ಟಿಯ (ಕ್ರಮ ಸಂಖ್ಯೆ ) 88 ಎಚ್ ನಲ್ಲಿ ಬರುವ ‘ತಳವಾರ’ ಜಾತಿಯನ್ನು ತೆಗೆದು ಹಾಕಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿರುತ್ತಾರೆ.
Talwar caste ಈ ಮಧ್ಯೆ ವಾಲ್ಮೀಕಿ, ನಾಯಕ ಜನಾಂಗಕ್ಕೆ ಸೇರಿದವರು ಸರಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ. ಡಬ್ಲ್ಯೂಪಿ. 13777/3 ಮದ್ಯಂತರ ಆದೇಶ ‘ತಳವಾರ’ ಜಾತಿಗೆ ಎಸ್.ಟಿ( ಪ್ರಮಾಣಪತ್ರ ) ಕೊಡಬಹುದೆಂದು ಅಭಿಪ್ರಾಯಪಟ್ಟಿರುತ್ತದೆ. ಆದರೂ ‘ತಳವಾರ’ ಎಂಬ ಒಂದೇ ಜಾತಿಯನ್ನು ಎರಡು, ಮೂರು ‘ತಳವಾರ,’ ಎಂದು ದಾಖಲಾತಿಗಳಿಲ್ಲದೆ ಅನಗತ್ಯ ಗೊಂದಲ ಸೃಷ್ಟಿಸಿ , ಸುಳ್ಳು ಅಪಾದನೆ ಸರಕಾರ ಮತ್ತು ಸರ್ಕಾರದ ಅಧಿಕಾರಿಗಳ ವಿರುದ್ಧ ಮಾಡುತ್ತಿದ್ದಾರೆ. ಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ.
‘ತಳವಾರ’ ಜಾತಿ ಭಾರತ ಸಂವಿಧಾನದ ಅಡಿಯಲ್ಲಿ ಸಂಸತ್ತಿನ ಅನುಮೋದನೆಗಾಗಿ ರಾಷ್ಟ್ರಪತಿಗಳ ಅಂಕಿತದ ಮುಖಾಂತರ ಭಾರತ ಸರಕಾರದ ಗೆಜೆಟಿನಲ್ಲಿ ಪ್ರಕಟಿಸಿದೆ . ಮುಂದುವರೆದು ಕರ್ನಾಟಕ ಸರಕಾರವು ಗೆಜೆಟ್ ಸುತ್ತೋಲೆಗಳು ಕೂಡ ಹೊರಡಿಸಿರುತ್ತದೆ. ಅದರ ಪ್ರಕಾರ, ಅಧಿಕಾರಿಗಳು, ಪರಿಶೀಲಿಸಿ ದಾಖಲಾತಿಗಳನ್ನು ತೆಗೆದುಕೊಂಡು ಸ್ಥಾನಿಕ ಚೌಕಾಶಿ ಮಾಡಿ, ‘ತಳವಾರ’ ಜಾತಿಗೆ ಎಸ್.ಟಿ . ಸರ್ಟಿಫಿಕೇಟ್ ಕೊಡುತ್ತಿದ್ದಾರೆ.
ಉಚ್ಛ ನ್ಯಾಯಾಲಯದಲ್ಲಿ ದಾವ ಡಬ್ಲೂಪಿ. 13777/23 ಇರುವುದರಿಂದ ಸಂವಿಧಾನ ಬದ್ಧವಾಗಿ, ಕಾನೂನು ಅಡಿಯಲ್ಲಿ ‘ತಳವಾರ’ ಜಾತಿ ಎಸ್.ಟಿ, ಪಟ್ಟಿಗೆ ಸೇರಿರುವುದರಿಂದ ಸಂಬಂದಪಟ್ಟ ಅಧಿಕಾರಿಗಳು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು ಒಂದೇ ಸಮುದಾಯದ ಒತ್ತಾಯದ ಮೇರೆಗೆ, ‘ತಳವಾರ’ ಜಾತಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿಳುವಂತಹ ನಿರ್ಣಯ ನಿರ್ಧಾರಗಳನ್ನು ಈ ಮದ್ಯ ತೆಗೆದುಕೊಳ್ಳಬಾರದೆಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಉಪಾಧ್ಯಕ್ಷರಾದ ಅನೀಲಕುಮಾರ ಎ. ಜಮಾದಾರ, ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಎನ್. ಬಿರಾದಾರ, ಸಮಾಜ ಮುಖಂಡರಾದ ಸುರೇಶಗೌಡ ಪಾಟೀಲ, ಶಿವಾಜಿ ಮೆಟಗಾರ,ಶ್ರೀಮತಿ ಕಾವ್ಯಾ ತಟಗಾರ, ಭರತ, ಎಸ್. ಕೋಳಿ, ಅಂಬಣ್ಣ ಕಲಮನಿ, ಶ್ರೀಮಂತ ತಳವಾರ, ಪ್ರವೀಣ ನಾಟೀಕಾರ, ಗಂಗೂಬಾಯಿ ಧುಮಾಳೆ, ಸಣ್ಣಪ್ಪ ತಳವಾರ, ಮಹಾದೇವ ಗದ್ಯಾಳ, ಸಂತೋಷ ತಟಗಾರ, ರವಿವಗ್ಗೆ, ಎಸ್.ಎ. ದೇಗಿನಾಳ, ಧರ್ಮರಾಜ ವಾಲಿಕಾರ, ಹಣಮಂತ ಸುಣಗಾರ, ಈರಣ್ಣ ಕುರಿ, ಹುಚ್ಚಪ್ಪ ತಳವಾರ, ಸಂಗಮೇಶ ಕೋಲಕಾರ, ಸದಾಶಿವ ಕೋಲಕಾರ, ಹಾಗೂ ತಾಲೂಕಾ ಪದಾಧಿಕಾರಿಗಳು, ಗ್ರಾಮಗಳ ತಳವಾರ ಸಮಾಜದ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.