Rajakaluve Cleaning Drive ಹಿನ್ನೆಲೆ: ಮುಂಗಾರು ಸನ್ನದ್ಧತೆಗೆ ಪಾಲಿಕೆ ಸಜ್ಜು

ವಿಜಯಪುರ: ನಗರದ ಪ್ರಮುಖ ರಾಜಕಾಲುವೆಗಳು, Rajakaluve Cleaning ಒಳಚರಂಡಿಗಳು ಹಾಗೂ ಮಳೆ ನೀರು ಹರಿವಿನ ಮಾರ್ಗಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರ ವ್ಯಾಪ್ತಿಯಲ್ಲಿ ಮುಂಗಾರು ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ನೀರು ನಿಲ್ಲುವ ಪ್ರದೇಶಗಳಲ್ಲಿ ಅಗತ್ಯ ಪಂಪ್ ಸೆಟ್‌ಗಳನ್ನು ಸಿದ್ಧವಾಗಿಡಬೇಕು ಎಂದು ತಿಳಿಸಿದರು. ತುರ್ತು ದುರಸ್ತಿ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ […]