ವಿಜಯಪುರ: ಪ್ರತ್ಯೇಕ ದಾಳಿ ಹೋರ್ತಿ, ಸಿಂದಗಿಯಲ್ಲಿ ಗಾಂಜಾ ವಶ.

ವಿಜಯಪುರ ಸೆ.16: ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ದೇಗಿನಾಳ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಹೋರ್ತಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ರೇವಣಸಿದ್ದ ರಾಠೋಡ, ದಸ್ತಗೀರ ಮಾಡಿ, ಆರೋಪಿತನಿಂದ 750 ಗ್ರಾಂ ಗಾಂಜಾವನ್ನು ಜಪ್ತ ಮಾಡಲಾಗಿದೆ. ಈ ಕುರಿತು ಹೋರ್ತಿ ಪೊಲೀಸ್ ಠಾಣೆ ಗುನ್ನಾ ನಂ. 96/2020 ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಪುರ ಕಲಬುರಗಿ ಎನ್ಎಚ್-50 ರ ರಸ್ತೆಯ ಮೇಲೆ ಆಹೇರಿ ಕ್ರಾಸ್ ಹತ್ತಿರ ಸಾರ್ವಜನಿಕ […]