ಆನ್ ಲೈನ್ ಕ್ಲಾಸ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಪೋಸ್ಟ ಮಾಡಿದ ದುಷ್ಕರ್ಮಿಗಳು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಆನ್ಲೈನ್ ತರಗತಿಗಳನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಅಶ್ಲೀಲ ವೀಡಿಯೊಗಳನ್ನು ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ದುಷ್ಕೃತ್ಯವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರ ವಿಶೇಷ ತಂಡ ತನಿಖೆ ಆರಂಭಿಸಿದ್ದು, ಮೊದಲ ಘಟನೆ ಎಡಪ್ಪಲ್ನ ಖಾಸಗಿ ಶಾಲೆಯಿಂದ ವರದಿಯಾಗಿತ್ತು.ಎಡಪ್ಪಲ್ನ ಸಿಬಿಎಸ್ಇ ಶಾಲೆಯ ಅಧಿಕಾರಿಗಳು 7 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ತರಗತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ನಗ್ನ ವೀಡಿಯೊಗಳನ್ನು ಲೈವ್-ಸ್ಟ್ರೀಮ್ ಮಾಡಿದ್ದಾರೆ ಎಂಬ ದೂರಿನೊಂದಿಗೆ ಮಲಪ್ಪುರಂನ ಚೈಲ್ಡ್ ಲೈನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರು […]