Vijayapura News | PDJ ಶಾಲೆಯ ವಿದ್ಯಾರ್ಥಿಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

PDJ vijayapura image

ವಿಜಯಪುರ: ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಖಾಂಬರಿ ಪ್ರೌಢಶಾಲೆ ವಂದಾಲ ಇವರ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಪಿಡಿಜೆ ಪ್ರೌಢಶಾಲೆ ‘ಬ’ ವಿಜಯಪುರ PDJ vijayapura ಇವರು ಪ್ರಾಥಮಿಕ ವಿಭಾಗದಲ್ಲಿ ಬಾಲಕ ಮತ್ತು ಬಾಲಕೀಯರ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Vijayayapura News | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಯ ಕರ್ನಾಟಕ ಸಂಘಟನೆ ಧರಣಿ ಸತ್ಯಾಗ್ರಹ : 3ನೇ ದಿನಕ್ಕೆ

ಪ್ರಾಥಮಿಕ ಬಾಲಕರ ವಿಭಾಗದಿಂದ ಅಜಯ ಕೋಲಾರ, ಅಕ್ಷಯ ತವಸೆ, ಶಶಾಂಕ ಇಳೆಗಾಂವ, ಮಡಿವಾಳಯ್ಯ ಮನಗೂಳಿಮಠ, ರಿಶಾದ ಗೂಗಿ. ಬಾಲಕೀಯರ ವಿಭಾಗದಿಂದ ಅಪೂರ್ವಾ ಬಿರಾದಾರ, ಪಲ್ಲವಿ ಶಿವಪೂರ, ಆರ್ಯಾ ಮಾಳದಕರ, ಸುರಭಿ ಪಾಟೀಲ, ಈರಮ್ಮ ಜಯಮಠ.

ಇದನ್ನೂ ಓದಿ: Vijayapura News | ಶಿವಾನುಭವ ಗೋಷ್ಠಿ | ಜೀವನ ಅಮೃತ ನೀಡಿದವರು – ಬಸವಾದಿ ಶರಣರು

PDJ vijayapura ಪ್ರೌಢಶಾಲಾ ಬಾಲಕರ ವಿಭಾಗದಿಂದ ಆಕಾಶ ಅಂಗಡಿ, ಆಯಾನ ಗುಂಡಬಾವಡಿ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಅರುಣ ಮಾಂಗ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಬಿಡಿಈ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ. ಕುಲಕರ್ಣಿ, ಗೌರವಕಾರ್ಯದರ್ಶಿಗಳಾದ ಎಂ.ಕೆ. ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಆರ್.ಪಿ. ಚಿಕ್ಕಲಕಿ, ಮುಖ್ಯಾಧ್ಯಾಪಕಿ ಕೆ.ಎಂ. ಸೀತಿಮನಿ, ಎಸ್.ಜಿ. ಹೊನಕೇರಿ ಹಾಗೂ ಎಲ್ಲ ಶಿಕ್ಷಕರು ಈ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು