ವಿಜಯಪುರ: Mother language ಕನ್ನಡ ಎಲ್ಲ ಭಾಷೆಗಳ ತಾಯಿ, ನಾಡು-ನುಡಿ, ನೆಲ-ಜಲ ಸಂರಕ್ಷಣೆ ಮಾಡುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಕನ್ನಡಿಗರ ನಮಗೆಲ್ಲ ಅಭಿಮಾನದ ಸಂಗತಿ ಎಂದು ಜಿಲ್ಲಾ ಹೆಚ್ಚುವರಿ ಪೋಲೀಸ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ 69 ನೇ ರಾಜ್ಯೋತ್ಸವ ಹಾಗು ಕರ್ನಾಟಕ ಸುವರ್ಣ ಸಂಭ್ರಮ 50 ರ ನಿಮಿತ್ತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡುತ್ತಾ ಎಲ್ಲ ಭಾಷೆಯಗಳಲ್ಲಿ ಕನ್ನಡ ಭಾಷೆ ತನ್ನ ವೈಶಿಷ್ಟ್ಯತೆಯನ್ನು ಮೇರೆಯುವ ಮೂಲಕ ತಾಯಿ ಭಾಷೆ ಎನಿಸಿಕೊಂಡಿದೆ ಎಂದರು.
ಇದನ್ನೂ ಓದಿ: Vijayapura News | ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ತುಂಬಾ ಮಹತ್ವದ್ದಾಗಿದೆ | ಕುಲಪತಿ ಪ್ರೋ. ಬಿ.ಕೆ ತುಳಸಿಮಾಲ
Mother language ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಪ ಪೂ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಎಸ್ ಎಮ್ ಕಣಬೂರ ಮಾತನಾಡಿ ಕನ್ನಡದ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನ ಹಿಡಿದು ಶಾತವಾಹನರು .ಕದಂಬರು. ಗಂಗರು. ಚಾಲುಕ್ಯರು.ರಾಷ್ಟ್ರಕೂಟರು ಕನ್ನಡ ಸಾಹಿತ್ಯಕ್ಕೆ ನೀಡಿದ ಪ್ರೇರಣೆ ಸ್ಮರಿಸುತ್ತ ನಾವೆಲ್ಲ ಕನ್ನಡವನ್ನು ಹೃದಯದಿಂದ ಮಾತನಾಡಿ ಅಪ್ಪಿ ಒಪ್ಪಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಸಾಪ ಗೌರವ ಸಲಹೆಗಾರರಾದ ಡಾ ವಿ ಡಿ ಐಹೊಳ್ಳಿ ಮಾತನಾಡಿ ಕರ್ನಾಟಕ ಏಕೀಕರಣದಲ್ಲಿ ಆಲೂರ ವೆಂಕಟರಾಯರು. ಗಂಗಾಧರರಾವ ದೇಶಪಾಂಡೆ. ಹುಯಿಲಗೋಳ ನಾರಾಯಣರು. ಮುಂತಾದವರ ಕನ್ನಡ ಸೇವೆಯನ್ನು ಬಯಸುತ್ತಾ ಮೈಸೂರು ರಾಜ್ಯ ಕನಾ9ಟಕವಾದ ಸಂದರ್ಭವನ್ನು ಪರಿಚಯಿಸಿ ಕೊಟ್ಟರು ಎಂದರು.
ಇದನ್ನೂ ಓದಿ: Vijayapura News | ಕನ್ನಡ ಅಭಿಮಾನ ಬೆಳಿಸಿಕೊಳ್ಳೋಣ: ಭಾರತಿ ಪಾಟೀಲ
ವೇದಿಕೆಯ ಮೇಲೆ ಪದಾಧಿಕಾರಿಗಳಾದ ಹಾಸಿಂಪೀರ ವಾಲಿಕಾರ, ಡಾ ಸಂಗಮೇಶ ಮೇತ್ರಿ, ಡಾ ಮಾಧವ ಗುಡಿ, ಸುರೇಶ ಜತ್ತಿ, ವಿಜಯಲಕ್ಷ್ಮಿ ಹಳಕಟ್ಟಿ, ಜಯಶ್ರೀ ಹಿರೇಮಠ, ರವಿ ಕಿತ್ತೂರ ವೇದಿಕೆಯ ಮೇಲ್ಲಿದ್ದರು. ಜಿ ಎಸ್ ಬಳ್ಳೂರ, ಶಾರದಾ ಐಹೊಳ್ಳಿ, ಭಾಗಿರತಿ ಸಿಂಧೆ, ನಂದಿನಿ ಬಿದನೂರ, ಜಗದೀಶ ಹುಲ್ಯಾಳ, ಎಸ್ ಬಿ ಗೊಂಗಡಿ, ಯುವರಾಜ ಚೋಳಕೆ, ರೇಖಾ ಕೂಬಕಡ್ಡಿ, ಶಕುಂತಲಾ ಕಮ್ಮಾರ, ಸಂಗನಗೌಡ ಪಾಟೀಲ, ಮಲಿಕ ಹಳ್ಳೂರ, ವಿಜಯಕುಮಾರ ನಾಯಕ, ರಾಜೇಸಾಬ ಬಳಗಾರ, ಎಸ್ ಐ ಬಿರಾದಾರ, ರಮೇಶ ಜಾಧವ, ಅಮಸಿದ್ದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಙಇದೇ ಸಂದರ್ಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿದ ಜಿಲ್ಲಾ ನ್ಯಾಯವಾದಿಗಳ ಅಧ್ಯಕ್ಷರಾದ ಡಿ ಜಿ ಬಿರಾದಾರ. ಗೌರವ ಕಾರ್ಯದರ್ಶಿಯಾಗಿ ಸುರೇಶ ಚೂರಿ. ಆಡಳತ ಮಂಡಳಿ ಸದಸ್ಯರಾದ ಮಹಮ್ಮದಗೌಸ ಹವಾಲ್ದಾರ ಇವರನ್ನು ಸನ್ಮನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಮಡಿವಾಳಮ್ಮ ನಾಡಗೌಡ ರಾಜೇಶ್ವರಿ ಮೋಪಗಾರ. ಸಂಗಮೇಶ ಬಿಜಾಪುರ. ಪರವೀನ ಶೇಖ. ಅರ್ಜುನ ಹಂಜಗಿ ನಬಿಲಾಲ ಹರನಾಳ. ಬಿ ಆರ್ ನಾಡಗೌಡ. ಮಹಮ್ಮದ ಇಕ್ಟಾಲ ಅವಟಿ. ಸಿದ್ದಪ್ಪ ನ್ಯಾಮಗೌಡ ಶಿವಲೀಲಾ ಮುರಾಳ ಚೈತನ್ಯ ಮುದ್ದೆಬಿಹಾಳ ಹೀಗೇ ಹನ್ನೊಂದು ಜನ ಸಾಧಕರನ್ನು ಗೌರವಿಸಲಾಯಿತು.
ಸುನಂದ ಕೋರಿ ಪ್ರಾರ್ಥಿಸಿದರು..ಸಕೀನಾ ನದಾಫ ನಿರೂಪಿಸಿದರು. ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರವಿ ಕಿತ್ತೂರ ವಂದಿಸಿದರು.






