Vijayapura News : ಮಕ್ಕಳನ್ನು ಮೊಬೈಲುಗಳಿಂದ ದೂರವಿಡಿ – ಡಾ. ಆನಂದ ಪಾಂಡುರಂಗಿ

ವಿಜಯಪುರ:  Mobile Effect‌ ಮನಸ್ಸು ಆಗೋಚರವಾಗಿದ್ದು ಸೂಕ್ಷ್ಮ ಹಾಗೂ ಸಂಕೀರ್ಣವಾದ ರಚನೆಹೊಂದಿದೆ. ಸ್ವಸ್ಥ ಮನದಲ್ಲಿ ಸ್ವಸ್ಥ ಮನಸ್ಸಿರಬೇಕು.  ಒಮ್ಮೆ ಮನಸ್ಸು ಆಘಾತಕ್ಕೊಳಗಾದರೆ ಅದನ್ನು ತಿದ್ದುವುದು ಕಠಿಣ, ಇತ್ತೀಚೆಗೆ ಹಿರಿಯರಂತೆ ಮಕ್ಕಳೂ ಕೂಡ ಮೊಬೈಲ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಅವರ ಆಳುವನ್ನು ನಿಲ್ಲಿಸಲು ಕೈಗೆ ಮೊಬೈಲ ಕೊಟ್ಟು ಸುಮ್ಮನಾಗಿಸುತ್ತಾರೆ. ಸದಾ ಮೊಬೈಲ ನೋಡುವುದರಿಂದ ಕಣ್ಣು ಮತ್ತು ಮನಸ್ಸುಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊಬೈಲ ಬದಲಿಗೆ ಪುಸ್ತಕಗಳನ್ನು ಕೊಟ್ಟು ನೈತಿಕ ಮೌಲ್ಯಗಳನ್ನು ಹೆಚ್ಚಿಸಬೇಕೆಂದು ನಾಡಿನ ಖ್ಯಾತ ಮನೋವೈದ್ಯರಾದ ಡಾ. ಆನಂದ ಪಾಂಡುರಂಗಿ ಹೇಳಿದರು.ಅವರು ಶರಣ ಸಾಹಿತ್ಯ ಪರಿಷತ್ತಿನ ಜನ ಕಲ್ಯಾಣ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಯೋಗಕ್ಷೇಮದ ಮೇಲೆ ಮೊಬೈಲ್ ಸಾಧನಗಳ ಪ್ರಭಾವ
ಇನ್ನೋರ್ವ ಸನ್ಮಾನಿತರಾದ ನಿವೃತ್ತ ಉಪಪ್ರಾಚಾರ್ಯರಾದ ಎಸ್.ಎಸ್. ಝಳಕಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. Mobile Effect ಕಂಚ್ಯಾಣಿ ಶರಣಪ್ಪನವರ ಪುಣ್ಯ ಸ್ಮರಣೆಯ ದತ್ತಿ ಸಮಾರಂಭ ಲಿಂ. ಕಂಚ್ಯಾಣಿ ಶರಣಪ್ಪನವರ ಸ್ಮರಣಾರ್ಥ ನಡೆದ ದತ್ತಿ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತು ಡಾ. ಆನಂದ ಪಾಂಡುರಂಗಿ ಹಾಗೂ ಶ್ರೀ ಎಸ್.ಎಸ್. ಝಳಕಿ ದಂಪತಿಗಳನ್ನು ಸನ್ಮಾನಿಸಿ ಜನಕಲ್ಯಾಣ ಪ್ರಶಸ್ತಿ ನೀಡಿ ಗೌರವಿಸಿತು. ಎಸ್.ಎಸ್. ಝಳಕಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶರಣಪ್ಪನವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಸುಶಿಕ್ಷಿತರನ್ನಾಗಿ ಮಾಡಿದ್ದರಿಂದ ಅವರು ಸಮಾಜದಲ್ಲಿ ಗೌರವದ ಸ್ಥಾನದಲ್ಲಿದ್ದಾರೆಂದು ಹೇಳಿದರು.
ಇದನ್ನೂ ಓದಿ: Mobile Effect on Eyes: ಮಕ್ಕಳಿಗೆ ಗೊತ್ತಿರಬೇಕಾದ ಮಾಹಿತಿ
ಜ್ಞಾನಯೋಗಾಶ್ರಮ ಪೂಶ್ರೀ ಜ್ಞಾನಾನಂದ ಸ್ವಾಮಿಗಳು ಅಲ್ಲಮ ಪ್ರಭುದೇವರ ಅನುಭಾವ ಕುರಿತು ಉಪನ್ಯಾಸ ನೀಡಿದರು. ಅನುಭಾವವೆಂಬುದು ಇಂದ್ರಿಯಾತೀತವಾದ ವಿಶಿಷ್ಟ ಅನುಭವವಾಗಿರುತ್ತದೆ. ಅಂತರಾತ್ಮದ ಚಿಂತನೆಯಿಂದ ಅಭಿವ್ಯಕ್ತಿಗೊಳ್ಳುವ ಪರಮಾನಂದವಾಗಿರುತ್ತದೆ. ಅವರು ಅಲ್ಲಮರ ಕೆಲವು ವಚನಗಳನ್ನು ಕುರಿತು ಅಂತರಾರ್ಥವನ್ನು ಹೇಳಿದರು.
ಪರಿಷತ್ತಿನ ಗೌರವಾಧ್ಯಕ್ಷರಾದ ಎಸ್.ವಾಯ್. ಗದಗ ಹಾಗೂ ಶ್ರೀಮತಿ ಬಸಮ್ಮ ಕಂಚ್ಯಾಣಿ ಉಪಸ್ಥಿತರಿದ್ದರು.
ಡ. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ ವಂದಿಸಿದರು. ಪ್ರೊ. ಎನ್.ಎಸ್. ಕೋರಿ ಪ್ರಾರ್ಥಿಸಿದರು. ಅಮರೇಶ ಸಾಲಕ್ಕಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ವೀರಶೈವ ಮಹಾಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಜಿ. ನಾಡಗೌಡರ ಬಿ.ಟಿ. ಈಶ್ವರಗೊಂಡ, ಮ.ಗು. ಯಾದವಾಡ, ಡಾ. ಶಂಭು ಮೇರವಾಡೆ, ಡಾ. ಉಷಾದೇವಿ ಹಿರೇಮಠ, ಕಮಲಾ ಮುರಾಳ, ಪ್ರಭಾವತಿ ದೇಸಾಯಿ, ದಾಕ್ಷಾಯಣಿ ಬಿರಾದಾರ, ಶಾರದಾ ಐಹೊಳ್ಳಿ ಸಿದ್ದಲಿಂಗಪ್ಪ ನಂದಿ ರಾಚಣ್ಣ ಕೊಳ್ಳಿ, ವಿ.ಎ. ಪಾಟೀಲ. ಬಿ.ಎಸ್. ಪಾಟೀಲ, ಕೆ.ಎಫ್. ಅಂಕಲಗಿ ದಂಪತಿಗಳು, ಡಾ. ಅನುಪಮಾ ಪಾಂಡುರಂಗಿ, ನೀಲಮ್ಮ ಝಳಕಿ, ಡಾ. ರೇಖಾ ಪಾಟೀಲ, ಆರ್.ಆರ್. ಹಂಚಿನಾಳ, ಮಹೇಶ ಬಾಗಲಕೋಟ, ಸಿದ್ದಲಿಂಗ ಹದಿಮೂರ, ಎಸ್.ಕೆ. ಚಿಕ್ಕರಡ್ಡಿ, ಕಾಶೀನಾಥ ಅಣೆಪ್ಪನವರ, ಎಂ.ಎಂ. ಅಂಗಡಿ, ಎಂ.ಎಸ್. ಝಳಕಿ, ಶ್ರಿಮತಿ ಹತ್ತಿ  ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು