Vijayapura News | ಕರ್ನಾಟಕ ರಾಜ್ಯೋತ್ಸವ-2024 ಸಮಾರೋಪ ಸಮಾರಂಭ | ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ

ವಿಜಯಪುರ: Karnataka Rajyotsava-2024 ಕನ್ನಡ ಸಾವಿರಾರು ವರ್ಷಗಳ ಸುದೀರ್ಘ ಸಾಂಸ್ಕøತಿಕ ಇತಿಹಾಸ ಹೊಂದಿದೆ. ಅಂತಹ ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಸಾಹಿತಿ ಸಂಗಮೇಶ ಬದಾಮಿ ಹೇಳಿದರು.
ಕವಲಗಿಯ ಸಂಗನಬಸವ ವಸತಿ ಪದವಿಪೂರ್ವ ಕಾಲೇಜು ವಿಜಯಪುರ ಕಾಲೇಜು ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡ ಇದೊಂದು ಭಾಷೆ ಅಲ್ಲ ನಮ್ಮ ಭಾವನೆಗಳ ಸಂಯೋಜನೆ, ಶತಶತಮಾನಗಳಿಂದ ಸಂಸ್ಕøತ ಭಾಷೆ ಶ್ರೇಷ್ಠವೆನಿಸಿಕೊಳ್ಳುತ್ತ ಜನರಿಂದ, ಜನರಿಗಾಗಿ ಮೂಡಿಬಂದ ಜನಮಾನಸದ ಮಂತ್ರವೇ ಕನ್ನಡ ನುಡಿ. ವಿಶ್ವಭಾರತೀಯ ಕೀರ್ತಿಯನ್ನು ವಿಶ್ವದೆತ್ತರಕ್ಕೆ ತಲುಪಿಸಿದ ಕನ್ನಡದ ರಾಜರಾಜೇಶ್ವರಿ. ಕನ್ನಡ ಆರು ಕೋಟಿ ಜನರ ಜೀವನಾಡಿ ದ್ರಾವಿಡ ಭಾಷೆಗಳಲ್ಲಿಯೇ ಅಗ್ರಸ್ಥಾನ ಪಡೆದ ಹಿರಿಮೆ ಸವಿಗನ್ನಡದು.
ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್
Karnataka Rajyotsava-2024 ಪ್ರಪಂಚದಲ್ಲಿ ಆರುಸಾವಿರ ಭಾಷೆಗಳಲ್ಲಿ ಸಮೃದ್ಧ 30 ಭಾಷೆಗಳಲ್ಲಿ ಕನ್ನಡವೂ ಸೇರಿದೆ ಎಂಬುದು ಕನ್ನಡಿಗರಾದ ನಮ್ಮಗೆಲ್ಲ ಹೆಮ್ಮೆಯ ಸಂಗತಿ. ಕನ್ನಡ, ಕನ್ನಡಿಗರ ಉಸಿರು. ಅದು ಇರಬೇಕು. ಎಂದೆಂದಿಗೂ ಹಸಿರು ಎಂಬ ಆಶಾಭಾವನೆ ಹೊಂದಬೇಕಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕರುನಾಡ ದೀಪವನ್ನು ಶಿರನುಡಿಯ ದೀಪವನ್ನಾಗಿಸಬೇಕಾಗಿದೆ ಎಂದು ಕರೆ ನೀಡಿದರು.
ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದ್ದು ಬಹುಭಾಷೆ, ಬಹುಸಂಸ್ಕøತಿ ಮತ್ತು ಬಹುಧರ್ಮಗಳ ನೆಲೆಬಿಡು ಇದಾಗಿದೆ. ಕರ್ನಾಟಕವೇ ಕರ್ಮಭೂಮಿ. ಕನ್ನಡವೇ ನಮ್ಮ ಉಸಿರು. ನಾಡ-ನುಡಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಕನ್ನಡ ಶಕ್ತಿ, ಸತ್ವ, ಆಸಕ್ತಿ ನಮ್ಮಲ್ಲಿ ಇರಬೇಕು. ನಾಡಿನ ಸಂಸ್ಕøತಿಯನ್ನು ಕಾಪಾಡುತ್ತ ಉಳಿಸಿ ಬೆಳೆಸೋಣ ಎಂದು ಕಾಲೇಜಿನ ನಿರ್ದೇಶಕ ಪ್ರಾಚಾರ್ಯರಾದ ಹೇಮಂತ ಕೃಷ್ಣ ಉಡುಪಿ ಹೇಳಿದರು.
ಇದನ್ನೂ ಓದಿ: Vijayapura News | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪುನಃ ಸ್ಥಾಪನೆಗೆ ಈಶ್ವರಪ್ಪ ಘೋಷಣೆ
ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾಂಜಲಿ ಸಲ್ಲಿಸಿದ ನಂತರ ಕಮಲಾಕ್ಷಿ ಹಜಾರೆ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಪ್ರೊ. ಶಿವಾನಂದ ಸಾಲೋಟಗಿ, ಸ್ವಾಗತಿಸಿ ಪರಿಚಯಿಸಿದರು. ಶರಣಬಸವ ಮನಿಷಾ, ವಿಶಾಲ, ಲಕ್ಷ್ಮಿ ಹಚಡದ, ಬಬಿತಾ ಬಬಲಾದಿ, ಉಜ್ವಲ ಕಾರೆ, ಚನ್ನಮ್ಮ ಪಾಟೀಲ, ಸ್ವಪ್ನಾ, ಶೃದ್ಧಾ ಬೀಳಗಿ, ಶ್ರೀಧರ ಗೋಳಸಾರ, ಕಾರ್ತಿಕ ಚವ್ಹಾಣ, ಉಜ್ವಲಾ ಬಂಡಿ, ಸಹನಾ ರೊಟ್ಟಿ ವಿದ್ಯಾರ್ಥಿ=ವಿದ್ಯಾರ್ಥಿನಿಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಲಕ್ಷ್ಮೀ ಕಣಮುಚನಾಳ, ಕುಮಾರಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ದೀಪಾ ಪೀರಡ್ಡಿ ವಂದಿಸಿದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »