Vijayapura News | ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಇಲ್ಲಿದೆ ಮಾಹಿತಿ

Kannada Jyoti Rath Yatre image
ವಿಜಯಪುರ: Kannada Jyoti Rath Yatre 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗುತ್ತಿದ್ದು ಆ ಪ್ರಯುಕ್ತ ಜನರಲ್ಲಿ ಜಾಗೃತಿ ಹಾಗೂ ಪ್ರೇರಣೆ ನೀಡುವದಗೋಸ್ಕರ ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥ ಜಿಲ್ಲೆಯಲ್ಲಿ ಸಂಚರಿಸಲಿದೆ.
ಮಂಗಳವಾರ ದಿನಾಂಕ 8-10-2024 ರಂದು ಮುಂಜಾನೆ  9-00 ಗಂಟೆಗೆ ನಿಡಗುಂದಿ ಪಟ್ಟಣದಲ್ಲಿ ಭವ್ಯ ಮೆರವಣಿಗೆಯನ್ನು ಸಚಿವ ಶಿವಾನಂದ ಪಾಟೀಲರು ಉದ್ಘಾಟಿಸಿ ಜಿಲ್ಲೆಗೆ ಸ್ವಾಗತಿಸಲಾಗುವುದು. ಮುಂಜಾನೆ  11-45 ಬಸವನಬಾಗೇವಾಡಿ ಮೆರವಣಿಗೆಯಲ್ಲಿ ಸಚಿವ ಶಿವಾನಂದ ಪಾಟೀಲರು ಭಾಗವಹಿಸಲಿದ್ದಾರೆ. ಮ. 12-30 ಗಂಟೆಗೆ ಮನಗೂಳಿ, 3-00 ಗಂಟೆಗೆ ಬಬಲೇಶ್ವರ ಪಟ್ಟಣ, 4-35 ಗಂಟೆಗೆ ವಿಜಯಪುರ ನಗರದಲ್ಲಿ ಅಥಣಿ ರಸ್ತೆಯ ಇಟಗಿ ಪೆಟ್ರೋಲ್ ಬಂಕ್ ಹತ್ತಿರ ಸ್ವಾಗತಿಸಿಕೊಳ್ಳಲಾಗುವುದು.
ಇದನ್ನೂ ಓದಿ: Vijayapura News | ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿವ್ಯಾಂಗರಿಂದ ಪ್ರತಿಭಟನೆ
Kannada Jyoti Rath Yatre ಬುಧವಾರ ದಿನಾಂಕ 8-10-2024 ರಂದು ಮುಂಜಾನೆ 9-00 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂದೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಪರಿಷತ್ತಿನ ಸದಸ್ಯ ಸುನೀಲಗೌಡ ಪಾಟೀಲ, ಶಾಸಕ ವಿಠ್ಠಲ ಕಟಕಧೊಂಡ ಉದ್ಘಾಟಿಸಲಿದ್ದಾರೆ. ಜಿಲ್ಲಾಡಳಿತ ಹಾಗೂ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮೆರವಣಿಗೆ ಪ್ರಾರಂಭಿಸಲಾಗುವುದು.
ಮ. 12-00 ಗಂಟೆಗೆ  ಇಂಡಿ ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಮ. 3-00 ಗಂಟೆಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಲಿದ್ದಾರೆ.ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Bagalkote News | ಬೆಳ್ಳಿ ಬೆಳಕು – ಅಕ್ಕಸಾಲಿಕೆ ಗ್ರಂಥ ಲೋಕಾರ್ಪಣೆ
ಸಾ. 4-30 ಗಂಟೆಗೆ ಸಿಂದಗಿಯ ಶಾಸಕ ಅಶೋಕ ಮನಗೂಳಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಡಳಿತ ವಿಜಯಪುರ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆ,  ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳು, ಅಭಿಮಾನಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಪಾಲ್ಗೊಂಡು ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

Share the Post:

ಇತ್ತೀಚಿನ ಸುದ್ದಿಗಳು