Vijayapur News | HAL ನಲ್ಲಿ ಉದ್ಯೋಗಾವಕಾಶ | ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Job Opportunity in HAL image

ವಿಜಯಪುರ: ಬೆಂಗಳೂರಿನ ತಾಂತ್ರಿಕ ತರಬೇತಿ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನಲ್ಲಿ Job Opportunity in HAL ಅಪ್ರೆಂಟಿಶಿಪ್ ತರಬೇತಿಗಾಗಿ ಐಟಿಐ ವ್ಯಾಸಂಗ ಮಾಡಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Job Opportunity in HAL ಐಟಿಐ ಫಿಟ್ಟರ್, ಟರ್ನರ್, ಮಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ಫೌಂಡ್ರಿಮ್ಯಾನ್, ಕೋಪಾ, ಕಾರ್ಪೆಂಟರ್, ಇಲೆಕ್ಟ್ರಿಷಿಯನ್, ಟೂಲ್ & ಡೈ ಮೇಕರ್, ಅಡ್ವಾನ್ಸ್ಡ್ ಸಿಎನ್‍ಸಿ ಮಷಿನಿಂಗ್ ಹಾಗೂ ವೆಲ್ಡರ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : 30-10-2024 ಕೊನೆಯ ದಿನಾಂಕವಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು https://apprenticeshipindia.gov.in/registration ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿ ಅದರ ಪ್ರತಿಯೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಜಯಪುರ ಅಥವಾ www.hal-india.com/career ಇಲ್ಲಿ ಖುದ್ದಾಗಿ ಅರ್ಜಿ ನಮೂನೆಗಳನ್ನು ಪಡೆದು, ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Vijayapur News | ಅತಿಕ್ರಮಣ ಕಟ್ಟಡಗಳ ತೆರವು | ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್

Share the Post:

ಇತ್ತೀಚಿನ ಸುದ್ದಿಗಳು