ವಿಜಯಪುರ: ಮಾದಕ ವಸ್ತುಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಜಾಲವನ್ನು Drug network in Vijayapura ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟ್ ಕದಿಂದ ಮಾನ್ಯ ಪೊಲೀಸ್ ವರಿಷ್ಟಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: Vijayapura News | 172 ರೌಡಿ ಶೀಟರ್ಗಳ ವಿರುದ್ಧ ಕಾರ್ಯಾಚರಣೆ | SP ಲಕ್ಷ್ಮಣ ನಿಂಬರಗಿ
ಜಿಲ್ಲೆಯಲ್ಲಿ ಹೆಚ್ಚುತಿರುವ ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟಬೇಕು ಇದರಿಂದ ಜಿಲ್ಲೆಯ ಯುವ ಜನಾಂಗ ಹೀನಾಯ ಸ್ಥಿತಿಗೆ ತಲಪುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಪೋಷಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಕೂಡಲೇ ಪೊಲೀಸ್ ಇಲಾಖೆ ತಕ್ಷಣವೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ಅನಿವಾರ್ಯ ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟ್ ಕ ರಾಜ್ಯ ಸಂಚಾಲಕ ಶ್ರೀ ವಿಜಯಕುಮಾರ ಕುಡುಗಿನೂರ ಹೇಳಿದರು.
ಇದನ್ನೂ ಓದಿ: Vijayapura News | ಮುಳವಾಡ ಅಕ್ರಮ ಟೋಲ್ ವಸೂಲಿಗೆ ಬ್ರೇಕ್ ಹಾಕಲು ಸೋಮನಾಥ ಕಳ್ಳಿಮನಿ ಒತ್ತಾಯ
ಜಿಲ್ಲಾ ಸಂಚಾಲಕರಾದ ಶ್ರೀ ಭರತ ಕುಲಕರ್ಣಿ ಮಾತನಾಡಿ ಜಿಲ್ಲೆಯ ನದಿ ತೀರದಲ್ಲಿ ಅತೀ ಹೆಚ್ಚು ಗಾಂಜಾ ಪದಾರ್ಥ Drug network in Vijayapura ದೊರಕುತಿದ್ದು ಇದರಿಂದ ಗ್ರಾಮೀಣ ಭಾಗದ ಯುವಕರು ಚಟಕ್ಕೆ ತುತ್ತಾಗುತ್ತಿದ್ದು ತುಂಬಾ ನೋವಿನ ಸಂಗತಿ. ಇದರಿಂದ ಬಡ ಕೂಲಿ ಕಾರ್ಮಿಕ ಪೋಷಕರಿಗೆ ಆರ್ಥಿಕತೆ ಅಭದ್ರವಾಗಲಿದೆ ತಕ್ಷಣ ಅಂತ ವ್ಯಕ್ತಿಗಳು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ವಿಜಯಪುರ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಶಂಕರ್ ಹೂಗಾರ್, ಸಹ ಸಂಚಾಲಕ ಶ್ರೀಕಾಂತ ದೇವರ ಮತ್ತು SC ಮೋರ್ಚಾ ಅಧ್ಯಕ್ಷ ಮಿಶಿಯವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಭೂಯ್ಯರ, ಭೀಮನಗೌಡ ಪಾಟೀಲ, ಕುಮಾರ್ ಪಾಟೀಲ ನಗರ ಸಂಯೋಜಕ ಶ್ರೀ ಅರವಿಂದ ಲಮಾಣಿ ನಗರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.






