ವಿಜಯಪುರ: ನಮ್ಮ ಸಹಕಾರಿ ಸಂಘವು ನಮ್ಮ ಸದಸ್ಯರ ನೀಡುತ್ತಿರುವ ಸಾಲ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ವ್ಯಾಪಾರ, ಉದ್ದಿಮ, ಅಭಿವೃದ್ದಿ ಪಡಿಸಿ ಹಾಗೆ ಸಕಾಲಕ್ಕೆ ಸಾಲ ಮರು ಪಾವತಿ ಮಾಡಬೇಕೆಂದು ಸಂಘದ ಅಧ್ಯಕ್ಷ ಬಸವರಾಜ (ಅಪ್ಪು) ಇಟ್ಟಂಗಿ ಹೇಳಿದರು. Danashree Souharda Co-operative
ಇತ್ತೀಚೆಗೆ ನಡೆದ ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ದಾನಶ್ರೀ ಸಹಕಾರಿ ಸಂಘದ 9ನೆ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸಂಘವು 2023-24ನೇ ಸಾಲಿನಲ್ಲಿ ರೂ. 4,17 ಕೋಟಿಗಳಷ್ಟು ಠೇವಣಿಗಳನ್ನು ಸಂಗ್ರಹಿಸಿದೆ. ವರ್ಷದಲ್ಲಿ ರೂ. 1.95 ಕೋಟಿ ಸಾಲ ವಿತರಿಸುವ ಮೂಲಕ ವರ್ಷಾಂತ್ಯಕ್ಕೆ ರೂ. 4,92 ಲಕ್ಷ ರೂ.ಗಳಷ್ಟು ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದ ಅವರು 2023-24ನೇ ಸಾಲಿನಲ್ಲಿ ಶೇರುದಾರರಿಗೆ ಶೇ. 4% ಲಾಭಾಂಶವನ್ನು ವಿತರಿಸಲಾಗುವುದೆಂದು ಸದಸ್ಯರಿಗೆ ತಿಳಿಸಿದರು.
ಇದನ್ನೂ ಓದಿ: ಎನ್.ಪಿ.ಲಮಾಣಿಯವರಿಗೆ ಹಿಂದಿ ರತ್ನ ಶಿಕ್ಷಕ ಪ್ರಶಸ್ತಿ
ಸಂಘವು ವರದಿ ವರ್ಷದಲ್ಲಿ ರೂ. 15.77 ಕೋಟಿ ವ್ಯವಹಾರ ಮಾಡಿ ವರದಿ ವರ್ಷದ ಅಂತ್ಯಕ್ಕೆ ರೂ. 34.28 ಲಕ್ಷ ದಷ್ಟು ಶೇರು ಸಂಗ್ರಹಿಸಿದೆ. ಸಂಘವು ವರ್ಷದ ಅಂತ್ಯಕ್ಕೆ 4.80 ಕೋಟಿಗಳಷ್ಟು ದುಡಿಯುವ ಬಂಡವಾಳ ಹೊಂದಿ ಸನ್ 2023-24ಕ್ಕೆ ರೂ.3.59 ಕೋಟಿಗಳಷ್ಟು ಸದಸ್ಯರಿಂದ ಸಾಲ ಬರತಕ್ಕದಿದೆ. ಸಂಘವು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಗಲಿದ ಸಂಘದ ಸದಸ್ಯರಿಗೆ ಒಂದು ನಿಮಿಷ ಮೌನಾಚಾರಣೆ ಮಾಡಿ ಶೃದ್ದಾಂಜಲಿ ಸಲ್ಲಿಸಲಾಯಿತು.
ನಿವೃತ್ತ ಉಪನೋಂದಣಾಧಿಕಾರಿ ಚಿದಾನಂದ ನಿಂಬಾಳ ಅವರನ್ನು ಹಾಗೂ ವೀರಶೈವ ಮಹಾಸಭೆಯ ಅಧ್ಯಕ್ಷರಾದ ವ್ಹಿ.ಸಿ. ನಾಗಠಾಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. Danashree Souharda Co-operative ಇತ್ತಿಚೆಗೆ ಪ್ರಶಸ್ತಿ ಪಡೆದ ನಗರದ ಛಾಯಾಗ್ರಾಹಕ ರಮೇಶ ಮೈದರಗಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಹಿರಿಯ ಗೌರವ ಸಲಹೆಗಾರರಾದ ಎಂ.ಎಂ. ಜಂಬಗಿ ಲಾಭ-ಹಾನಿ ಅಢಾವೆ ಪತ್ರಿಕೆ ವಾಚಿಸಿದರು.
ಇದನ್ನೂ ಓದಿ: ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನಾಚರಣೆ
ಸಂಘದ ನಿರ್ದೇಶಕರಾದ ಮಹೇಶ ಅಂಜಿಖಾನೆ 2024-25ನೇ ಅಂದಾಜು ಪತ್ರಿಕೆ ಪ್ರಸ್ತುತ ಪಡಿಸಿದರು. ಸಂಘದ ಉಪಾಧ್ಯಕ್ಷರಾದ ಎಸ್.ಎಸ್. ಪಾಟೀಲ ಕನ್ನೂರ ರವರು ಸಂಘದ ಸದಸ್ಯರಿಗೆ ಪಾಲಿಸಬೇಕಾದ ನಿಯಮಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ತಿಳಿಸಿದರು.
ಸಭೆಯಲ್ಲಿ ನಿರ್ದೇಶಕರಾದ ರಮೇಶ ಅಂಜಿಖಾನೆ, ಎಸ್.ಸಿ. ನಂದಿ, ಎಸ್.ಸಿ. ಪಾಟೀಲ, ಸಿದ್ದು ಕ್ಯಾತಪ್ಪನವರ, ವಿಜಯ ಜತ್ತಿ, ಹಾಗೂ ಮಹಿಳಾ ನಿರ್ದೇಶಕಿಯರಾದ ಶ್ರೀಮತಿ ಶೈಲಾ ಇಟ್ಟಂಗಿ, ಶ್ರೀಮತಿ ನೀಲಾಂಬಿಕಾ ಚವ್ಹಾಣ, ಸಂಘದ ವ್ಯವಸ್ಥಾಪಕರಾದ ಸವಿತಾ ವಾಲಿಕಾರ ಉಪಸ್ಥಿತರಿದ್ದರು. ಸಂಘದ ನೂರಾರು ಸದಸ್ಯರು ಸಭೆಯಲ್ಲಿ ಹಾಜರಿದ್ದರು.






