Clear Unauthorized Carriers | ಖಾಸಗಿ ವಾಹನಗಳ ಅನಧಿಕೃತ ಕ್ಯಾರಿಯರ್‍ಗಳನ್ನು ತೆರವುಗೊಳಿಸಲು ಆಗ್ರಹ ಕ್ಯಾರಿಯರ್ ಮೇಲೆ ಸರಕು ಸಾಗಾಣೆ, ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲವೇ?

Clear Unauthorized Carriers image
ವಿಜಯಪುರ:  ಜಿಲ್ಲೆಯಲ್ಲಿ ಪ್ರತಿನಿತ್ಯ ಓಡಾಡುವ 100ಕ್ಕೂ ಅಧಿಕ ಖಾಸಗಿ ವಾಹನಗಳು ಕೇವಲ ಪ್ರಯಾಣಿಕರ ಓಡಾಟಕ್ಕೆ ಇರಬೇಕಾದ ವಾಹನಗಳು ಅನಧಿಕೃತವಾಗಿ ಕ್ಯಾರಿಯರಗಳನ್ನು Clear Unauthorized Carriers ಬಳಸಿ ಪ್ರತಿನಿತ್ಯ ಅನೇಕ ರೀತಿಯ ಸರಕುಗಳನ್ನು ಸಾರಿಗೆ ಇಲಾಖೆ ಹಾಗೂ ತೆರಿಗೆ ಇಲಾಖೆಯ ಯಾವುದೇ ಭಯವಿಲ್ಲದೇ ಸಾಗಿಸುತ್ತಿರುವುದು ಶೋಚನೀಯವಾಗಿದೆ. ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಯಾಣಿಕರ ಜೀವದ ಪ್ರಶ್ನೆಯಾಗಿರುವುದರಿಂದ ಜಿಲ್ಲೆಯಿಂದ ಓಡಾಡುತ್ತಿರುವ ಎಲ್ಲಾ  ಕ್ಯಾರಿಯರ್ ಹಾಕಿರುವ ವಾಹನಗಳನ್ನು ಜಪ್ತಿ ಮಾಡಿ ಅವುಗಳನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಗ್ರಹಿಸುತ್ತೆವೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡಿದರು.
ಇದನ್ನೂ ಓದಿ: “ಬ್ಯಾಂಕ್ ಜನ ಜಾಗೃತಿ ಕಾರ್ಯಕ್ರಮ: ಹಣಕಾಸು ಶಿಕ್ಷಣ ಮತ್ತು ಸೇವೆಗಳ ಕುರಿತು ಮಾಹಿತಿ”
ವಿಜಯಪುರ- ಬೆಂಗಳೂರ, ವಿಜಯಪುರ- ಮುಂಬೈ, ವಿಜಯಪುರ- ಮಂಗಳೂರ, ವಿಜಯಪುರ- ಹೈದ್ರಾಬಾದ, ವಿಜಯಪುರ-ಉಡುಪಿ  ಮಾರ್ಗದಲ್ಲಿ ಸಂಚರಿಸುವ ವಿ.ಆರ್.ಎಲ್, ಎಸ್.ಆರ್.ಎಸ್, ಜನತಾ, ವರಲಕ್ಷ್ಮಿ, ಸುಗಮಾ, ಜಿ.ಪಿ, ಕೆ.ಇ.ಎಸ್, ಆರೇಂಜ್  ಸೇರಿದಂತೆ ಇತರೆ ಖಾಸಗಿ ಪ್ರಯಾಣಿಕರ ವಾಹನಗಳು ಯಾವುದೇ ಅನುಮತಿ ಇಲ್ಲದೇ ಕ್ಯಾರಿಯರ್ ಬಳಸುವುದನ್ನು ವಿರೊಧಿಸುತ್ತೆವೆ, Clear Unauthorized Carriers ಇದರಿಂದ ಸರಕು ಸಾಗಾಣಿಕೆ ವಾಹನಗಳ ಮಾಲಿಕರಿಗೆ ಭಾರಿ ಪ್ರಮಾಣದ ಮೊಸ ಆಗುತ್ತಿದೆ, ಇದನ್ನು ಅತೀ ಅವಶ್ಯವೆಂದು ತಿಳಿದು ಕೂಡಲೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದರು.
ಗ್ರಾಮೀಣ ಭಾಗದಲ್ಲಿ ಖಾಸಗಿ ವಾಹನಗಳಲ್ಲಿ  ನಿಯಮ ಮೀರಿ  ಪ್ರಯಾಣಿಕರನ್ನು ಮೇಲೆ ಹಾಗೂ ಕೆಳಗೆ  ಹಾಕಿಕೊಂಡು ಜಾನುವಾರುಗಳ ತರಹ ಪ್ರತಿನಿತ್ಯ ಹಾಕಿಕೊಂಡು ಹೋಗುವ ವಾಹನಗಳನ್ನು ದಿನನಿತ್ಯ ನೋಡುತ್ತಿದ್ದೆವೆ, ಇಂತಹ ಘಟನೆಗಳಿಂದ ಅಪಘಾತಗಳಾಗಿ ಸಾವುನೋವುಗಳಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ.
ರೈತ ಸಾರಥಿ ಯೋಜನೆಯನ್ನು ಪುನಃ ಪ್ರಾರಂಭಿಸಿ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ವಾಹನ ಚಾಲನಾ ಅನುಮತಿಯನ್ನು ನೀಡಬೇಕು, ಇದರಿಂದ ಅನೇಕ ಯುವ ರೈತರಿಗೆ ಅನುಕೂಲವಾಗಲಿದ್ದು, ಅಪಘಾತಗಳಾಗಿ ಸಾವುನೋವುಗಳು ಉಂಟಾದರೆ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರೀಕ್ಷರಣೆ | ಐಹೊಳೆ, ರಾಮಥಾಳ ಗ್ರಾಮಕ್ಕೆ ಭೇಟಿ ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದ ಡಿಸಿ ಜಾನಕಿ
ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ತಿಕೋಟಾ ತಾಲೂಕಾ ಉಪಾಧ್ಯಕ್ಷರಾದ ಶಾನೂರ ನಂದರಗಿ, ವಿಜಯಪುರ ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ ಸೇರಿದಂತೆ ಅನೇಕರು ಇದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »