ವಿಜಯಪುರ : ಕಂಟೇನ್ಮೆಂಟ್ ಜೋನ್-ಬಫರ್ ಜೋನ್ ಪ್ರದೇಶದ ಮನೆಮನೆ ಸಮೀಕ್ಷೆಗೆ ಆದೇಶ

ವಿಜಯಪುರ  ಎ.12: ವಿಜಯಪುರ ನಗರದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ಘೋಷಿಸಿದ ಕಂಟೇನ್ಮೆಂಟ್ ಜೋನ್-ಬಫರ್ ಜೋನ್ ಪ್ರದೇಶದ ಮನೆಮನೆ ಸಮೀಕ್ಷೆ (ಸರ್ವೇಲನ್ಸ್) ಕಾರ್ಯಕೈಗೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಶ್ರೀ ಎಂ.ಬಿ ಬಿರಾದಾರ ಅವರಿಗೆ ನೀಡಲಾಗಿದ್ದು, ಪ್ರತಿ 30 ರಿಂದ 50 ಮನೆಗಳಿಗೆ ಒಬ್ಬ ವೈದ್ಯಾಧಿಕಾರಿಯ ಮೇಲ್ವಿಚಾರಣೆಯ ಒಂದು ತಂಡದಲ್ಲಿ ಆಶಾ/ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಎನ್‍ಎಮ್ […]

ವಿಜಯಪುರದ ಸೀಲ್‍ಡೌನ್ ಪ್ರದೇಶಗಳಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲಾಗುವುದು: -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಎ.12: ಸರ್ಕಾರದ ಆದೇಶದನ್ವಯ ಮತ್ತು ಕಂಟೇನ್‍ಮೆಂಟ್ ಪ್ಲ್ಯಾನ್ ಅನ್ವಯ ನಗರದ ಈ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ ಮತ್ತು ಕಂಟೇನ್‍ಮೆಂಟ್ ಜೋನ್ ಮತ್ತು ಬಫರ್ ಜೋನ್ ಎಂದು ಗುರುತಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಆ ಪ್ರದೇಶದ ಶುಚಿತ್ವವನ್ನು ಕಾಯ್ದುಕೊಳ್ಳಲು ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಾ ಶೆಟ್ಟಿ ( ಮೊ.ಸಂ: 9886745505) ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಆದೇಶ ನೀಡಿದ್ದಾರೆ. ಸದರಿ ಪ್ರದೇಶಗಳಲ್ಲಿನ ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು […]

ವಿಜಯಪುರ ನಗರದಲ್ಲಿ ಕೊರೊನಾ ಒಂದು ಪಾಸಿಟಿವ್ ಪ್ರಕರಣ ದೃಢ : ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಸೀಲ್‍ಡೌನ್

ವಿಜಯಪುರ ಎ.12: ಜಿಲ್ಲೆಯಿಂದ ಈವರೆಗೆ ಕಳುಹಿಸಲಾದ 81 ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 80 ಪ್ರಕರಣಗಳ ವರದಿ ನೆಗೆಟಿವ್ ಬಂದಿದ್ದು, ಒಂದು ಪ್ರಕರಣ ವರದಿ ಪಾಸಿಟಿವ್ ಆಗಿ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ನಗರದ ಚಪ್ಪರ್‍ಬಂದ್ ಪ್ರದೇಶದ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ದೃಢಪಟ್ಟಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದೆ. ರೋಗಿ ಸಂಖ್ಯೆ 221 ತೀವ್ರ ಉಸಿರಾಟ ಸಂಬಂಧಿ ತೊಂದರೆ ಬಗ್ಗೆ ವೈದ್ಯರು ಖಾತ್ರಿಪಡಿಸಿದ್ದು, ಸೋಂಕು ಬಹುಶಃ ಮಹಾರಾಷ್ಟ್ರ ರಾಜ್ಯದಲ್ಲಿ ಸಂಪರ್ಕದಿಂದ […]

ಮಹಾಮಾರಿ ಕರೋನಾ ವೈರಸ್ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯಹಸ್ತ ನೀಡಿದ ಗಣ್ಯರು

ಉದ್ಯಮಿ ಶ್ರೀ ಮಂಜುನಾಥಗೌಡ ಪಾಟೀಲ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿಯ ಚೆಕ್‍ನ್ನು ಉಪ ಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ ಅವರಿಗೆ ಶುಕ್ರವಾರದಂದು ಹಸ್ತಾಂತರಿಸಿದರು. ಕೊವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿಜಯಪುರದ ಡಿಸ್ಟ್ರಿಕ್ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್ ವತಿಯಿಂದ 2.5ಲಕ್ಷ ರೂ. ಗಳ ಚೆಕ್‍ನ್ನು ಇಂದು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭಧಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಡಾ.ಕೆ.ಆರ್.ಕುಲ್ಲೊಳ್ಳಿ, ಅರುಣ ಹುಂಡೇಕಾರ, ರಾಜು ಇಜೇರಿ, ಎಚ್.ಆರ್.ತಿವಾರಿ, ಶ್ರೀನಿವಾಸ ಬಾಹೇತಿ, ಆನಂದ ಮಂಗಳವೇಡೆ, ಈರಣಗೌಡ ಪಾಟೀಲ ಹಾಗೂ ಸುನೀಲ […]

ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸುವುದಾಗಿ ದಲಿತ ಸಂಘಟನೆಗಳಿಂದ ಭರವಸೆ

ವಿಜಯಪುರ ಎ.11: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆಗಳು ಭರವಸೆ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಅವರು ತಿಳಿಸಿದ್ದಾರೆ. ಕೋವಿಡ್-19 ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಮಾಡಿರುವ ಹಿನ್ನಲೆಯಲ್ಲಿ ಯಾವುದೇ ಸಭೆ, ಸಮಾರಂಭವನ್ನು ಏರ್ಪಡಿಸದಿರಲು ನಿಷೇದಾಜ್ಞೆ ಇರುವುದರಿಂದ ದಿನಾಂಕ 14-04-2020 ರಂದು ಇರುವ ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಸರ್ಕಾರದ ನಿಯಮಾವಳಿಗಳ ಅನ್ವಯ ಅಂದು ಬೆಳಿಗ್ಗೆ […]

ಪ್ಯಾರಾಸಿಟಮಲ್ ಮಾತ್ರೆಗಳ ಮಾರಾಟದ ಮೇಲೆ ತೀವ್ರ ನಿಗಾ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಎ.11: ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‍ಗಳ ಮೂಲಕ ಸಾರ್ವಜನಿಕರಿಗೆ ಜ್ವರಕ್ಕೆ ಸಂಬಂಧಪಟ್ಟಂತೆ ಮಾರಾಟಮಾಡುವ ಪ್ಯಾರಾಸಿಟಮಲ್ ಮಾತ್ರೆಗಳ ಬಗ್ಗೆ ಸವಿವರವನ್ನು ಇಟ್ಟುಕೊಂಡು ಜಿಲ್ಲಾ ಔಷಧಿಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆಯಾ ಅಂಗಡಿ ಮಾಲಿಕರಿಗೆ ಸಲಹೆ ನೀಡಿದ್ದಾರೆ. ಕೋವಿಡ್-19 ಮುನ್ನೆಚ್ಚರಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್-19 ನಿಯಂತ್ರಣದ ಉದ್ದೇಶದೊಂದಿಗೆ ಇನ್ನೂ ಹೆಚ್ಚು ಪರಿಣಾಮಕಾರಿ ಕ್ರಮವಾಗಿ ಜಿಲ್ಲೆಯ ಸುಮಾರು 900ಕ್ಕೂ ಹೆಚ್ಚು ಔಷಧಿ ಅಂಗಡಿಗಳ ಮೂಲಕ ಜ್ವರಕ್ಕೆ ಸಂಬಂಧಪಟ್ಟ ಪ್ಯಾರಾಸಿಟಮಲ್ ಮಾತ್ರೆ ಮಾರಾಟ, ಜ್ವರದಿಂದ […]

ವೈದ್ಯಕೀಯ ತುರ್ತು ಪ್ರಕರಣಗಳಿಗೆ ಮಾತ್ರ ಪಾಸ್ ವಿತರಣೆ

ವಿಜಯಪುರ ಎ.10 : ಕೋವಿಡ್-19 ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರೀಲ್ 14ರ ವರೆಗೆ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಭ್ಯವಿಲ್ಲದಂತಹ ತೀವ್ರ ತೆರನಾದ ವೈದ್ಯಕೀಯ ತುರ್ತು ಚಿಕಿತ್ಸೆ ಪಡೆಯುವ ಸಲುವಾಗಿ ಸಂಬಂಧಿಸಿದ ವೈದ್ಯರುಗಳಿಂದ ಪ್ರಮಾಣ ಪತ್ರವನ್ನು ಹಾಜರು ಪಡಿಸಿದ್ದಲ್ಲಿ ಮಾತ್ರ ತಮ್ಮ ಕಚೇರಿಯಿಂದ ಪಾಸ್ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಿತರ ಯಾವುದೇ ಪ್ರಕರಣಗಳಲ್ಲಿ ತಮ್ಮ ಕಚೇರಿಯಿಂದ ಪಾಸ್ ನೀಡಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ […]

ಗುತ್ತಿಗೆಗಾರರಿಂದ, ಕಟ್ಟಡ ಮಾಲೀಕರಿಂದ ಕೂಲಿ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡುವಂತೆ ಸೂಚನೆ

ವಿಜಯಪುರ ಎ.10 : ಏಪ್ರೀಲ್ -14 ರವರೆಗೆ ದೇಶಾದ್ಯಂತ ಲಾಕ್‍ಡೌನ್ ಇರುವ ಹಿನ್ನೆಲೆ, ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗಾಗಿ ಮತ್ತು ಅಗತ್ಯ ವಸ್ತುಗಳ ಸಾಗಾಣಿಕೆ ಮಾಡುವವರಿಗಾಗಿ ಅಂದರೆ ಆಹಾರ, ದಿನಸಿ ಅಂಗಡಿಗಳ, ಹಾಲು ತರಕಾರಿ, ದಿನಬಳಕೆ ವಸ್ತುಗಳ, ಮಾಂಸ-ಮೀನು, ಹಣ್ಣು. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಗ್ಯಾಸ್, ಎಲ್.ಪಿ.ಜಿ ತೈಲ್ ಎಜೆನ್ಸಿಗಳು, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಔಷಧಾಲಯಗಳು, ಮಿನರಲ್ ವಾಟರ್ ಸೇರಿದಂತೆ ಇನ್ನಿತರ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಮುಖ್ಯ ಕಾರ್ಯದರ್ಶಿ […]

ರೋಟರಿ ಕ್ಲಬ್ ವತಿಯಿಂದ 50 ಪಿಪಿಇ ಕಿಟ್ ಹಾಗೂ 150 ಫೇಸ್‍ಶೀಲ್ಡ್ ವಿತರಣೆ

ಕೋವಿಡ್-19 ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ರೋಟರಿ ಕ್ಲಬ್ ವತಿಯಿಂದ 50 ಪಿಪಿಇ ಕಿಟ್ ಹಾಗೂ 150 ಫೇಸ್‍ಶೀಲ್ಡ್‍ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಪ್ರಾಣೇಶ ಜಹಾಗೀರದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುಂಪುಗುಂಪಾಗಿ ಸೇರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ವಿಜಯಪುರ  ಎ.10 : ಮಹಾಮಾರಿ ಕರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದ್ದು, ಕೆಲವರು ಇದನ್ನು ನಿರ್ಲಕ್ಷಿಸಿ ಗುಂಪು ಗುಂಪಾಗಿ ಸೇರುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಅಂತಹವರ ವಿರುದ್ಧ ಕಾನೂನಿನ ರೀತ್ಯ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಪಡಿತರ ಧಾನ್ಯಗಳನ್ನು ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದ್ದು, ಕೆಲವು ಮುಖಂಡರು ಈ ಪರಿಸ್ಥಿತಿಯ ದುರ್ಲಾಭ ಪಡೆಯಲು ಬಡಜನರು ಮತ್ತು ಕೊಳಗೇರಿ ನಿವಾಸಿಗಳನ್ನು ಇನ್ನೂ ಹೆಚ್ಚಿನ ಪಡಿತರ ಧಾನ್ಯಗಳನ್ನು ನೀಡಬೇಕಾಗಿದೆ ಎಂದು ತಪ್ಪು ದಾರಿಗೆ ಎಳೆಯುವಂತಹ […]